Get Updates
Get notified of breaking news, exclusive insights, and must-see stories!

ವಿಶ್ವದ ಸೂಪರ್ ಪವರ್ ನೇಷನ್ ಅಮೆರಿಕ ಮಿಲಿಟರಿ ಪಡೆಗೆ ತೀವ್ರ ಮುಜುಗರ!

ವಿಶ್ವದ ಪ್ರಮುಖ ಹಾಗೂ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಮತ್ತು ಸೂಪರ್ ನೇಷನ್ ಎನ್ನುವ ಖ್ಯಾತಿ ಗಳಿಸಿರುವ ಅಮೆರಿಕ ಸೇನೆಯ ಪರೇಡ್ ಸಿಕ್ಕಾಪಟ್ಟೆ ಟ್ರೋಲ್‌ಗೆ ಕಾರಣವಾಗಿದೆ. ಹೌದು ಅಮೆರಿಕ ಸೇನೆಯ 250 ನೇ ವಾರ್ಷಿಕೋತ್ಸವ ಸಂಭ್ರಮಚರಣೆಯ ಭಾಗವಾಗಿ ವಿಶೇಷ ಪರೇಡ್‌ ನಡೆದಿದ್ದು ಇದು ನಗೆಪಾಟಲಿಗೆ ಕಾರಣವಾಗಿದೆ. ಇನ್ನು ಭಾರತೀಯರು ಭಾರತೀಯ ಸೇನೆ, ಪೊಲೀಸ್ ಹಾಗೂ ಎನ್‌ಸಿಸಿ ಪರೇಡ್ ಅಮೆರಿಕ ಪರೇಡ್‌ಗಿಂತ ತುಂಬಾ ಚೆನ್ನಾಗಿದೆ ಅಂತ ಹೇಳುತ್ತಿದ್ದಾರೆ. ಪರೇಡ್‌ ಆಗಿತ್ತು ಹಾಗೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್ ನೇಷನ್‌ ಎನ್ನುವ ಖ್ಯಾತಿಯ ಅಮೆರಿಕ ಇದೀಗ ಮತ್ತೊಂದು ಕಾರಣಕ್ಕೆ ಟ್ರೋಲ್‌ಗೆ ಗುರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಪರೇಡ್ ಅತ್ಯಂತ ನೀರಸವಾಗಿದೆ. ಕೃತಿ ಸಿಂಗ್ ಎನ್ನುವವರು ಅಮೆರಿಕ ಸೇನೆಯ 250ನೇ ವಾರ್ಷಿಕೋತ್ಸವದ ಬಗ್ಗೆ ಇದು ಅಮೆರಿಕ ಸೇನೆಯ ಪರೇಡ್ ಭಾರತೀಯ ಶಾಲೆಗಳಲ್ಲಿನ ಎನ್‌ಸಿಸಿ ಪಡೆಗಳು ಈ ದೇಶಕ್ಕಿಂತ ಪರೇಡ್‌ ಮಾಡುತ್ತವೆ ಎಂದು ಹೇಳಿದ್ದಾರೆ.

world s super power nation is severe embarrassment to US military

ಹಾಲಿವುಡ್ ಮೂವಿಯಲ್ಲಿ ಬೇರೆ ವಾಸ್ತವ ಬೇರೆ: ಇನ್ನು ಹಲವರು ಸೂಪರ್‌ ನೇಷನ್ ಎಂದು ಹೇಳಿಕೊಳ್ಳುವ ಅಮೆರಿಕದ ಸೇನೆಯ ಬಗ್ಗೆ ಹಾಲಿವುಡ್‌ನಲ್ಲಿ ಬೇರೆ - ವಾಸ್ತವದಲ್ಲಿ ಬೇರೆ. ಹಾಲಿವುಡ್‌ನಲ್ಲಿ ತೋರಿಸುವಂತೆಲ್ಲ ವಾಸ್ತವದಲ್ಲಿ ಇಲ್ಲ ಅಂತ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸೂಪರ್‌ ನೇಷನ್‌ನ ಮಿಲಿಟರಿ ಪಡೆಯ ಪರೇಡ್ ಹಾಗೂ ಭಾರತ - ಚೀನಾ ಮಿಲಿಟರಿ ಪಡೆಗಳ ಪರೇಡ್ ವಿಡಿಯೋಗಳಿಗೆ ಹೋಲಿಕೆ ಮಾಡಲಾಗುತ್ತಿದೆ.

ಪ್ರಮೋದ್ ಕುಮಾರ್ ಸಿಂಗ್ ಅವರು, ಪ್ರೀತಿಯ ಅಮೆರಿಕಾ ಸೇನೆಯೇ, ಸೇನಾ ಮೆರವಣಿಗೆ ಹೇಗಿರುತ್ತದೆ ಎಂಬುದು ಇಲ್ಲಿದೆ. ಭಾರತೀಯ ಸೇನಾ ತುಕಡಿಯ ಪಥಸಂಚಲನದ ಒಂದು ನೋಟ ಇಲ್ಲಿದೆ ಅಂತ ಹೇಳಿದ್ದಾರೆ.

ಅಮೆರಿಕದ ಜೇಕ್ ಬ್ರೋ ಎನ್ನುವವರು, ಸರಿ ಜನರು ನಿಜವಾಗಿಯೂ ಗೊಂದಲಕ್ಕೊಳಗಾಗಿದ್ದಾರೆ, ಏಕೆಂದರೆ ಅಮೆರಿಕನ್ ಸೈನ್ಯದ ಸೈನಿಕರು ರಷ್ಯನ್ನರು ಅಥವಾ ಉತ್ತರ ಕೊರಿಯನ್‌ನ ಮಿಲಿಟರಿ ಪಡೆಗಳಂತೆ ಒಗ್ಗಟ್ಟಿನಿಂದ ಮೆರವಣಿಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈ ಎಲ್ಲಾ ಸೈನಿಕರು ಮಿಲಿಟರಿಯಲ್ಲಿ ನಿಜವಾದ ಉದ್ಯೋಗಗಳನ್ನು ಹೊಂದಿದ್ದಾರೆ ಮತ್ತು ಯಾರೂ ಮೂಲಭೂತ ತರಬೇತಿ ಮತ್ತು ಅವರ ತಾಂತ್ರಿಕ ಶಾಲೆಯಿಂದ ಹೊರಬಂದ ನಂತರ ಯಾವುದೇ ಮೆರವಣಿಗೆಯನ್ನು ಮಾಡಿಲ್ಲ.

ಈ ಸೈನಿಕರು ನಮ್ಮ ರಾಷ್ಟ್ರವನ್ನು ರಕ್ಷಿಸಲು ಪ್ರಮುಖ ಕೆಲಸಗಳನ್ನು ಮಾಡುತ್ತಲ್ಲೇ ತಮ್ಮ ದಿನಗಳನ್ನು ಕಳೆಯುತ್ತಾರೆ. ಅವರು ಎಂದಿಗೂ ಮೆರವಣಿಗೆಯನ್ನು ಅಭ್ಯಾಸ ಮಾಡುವುದಿಲ್ಲ ಎಂದಿದ್ದಾರೆ.

ಸಂಭ್ರಮದ ದಿನಾಚರಣೆಯ ವಿಡಿಯೋ ವೈರಲ್ ಆಗುತ್ತಿದೆಯಾದರೂ ಇದೇ ಸಂದರ್ಭದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಭಾರತೀಯ ಸೇನೆಯ ವಿಡಿಯೋವನ್ನು ಜನ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ತೀರ ಅಹಂಕಾರದಿಂದ ಮೆರೆಯುತ್ತಿದ್ದರು ಅವರಿಗೆ ತೀವ್ರ ಮುಜುಗರವಾಗಿದೆ ಅಂತ ಹೇಳುತ್ತಿದ್ದಾರೆ. ಒಟ್ಟಾರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+