ಪಾಕ್ ಮಹಾನ್ ತ್ಯಾಗಮಯಿ ಅಂತಿದೆ ಚೀನಾ, ಒಪ್ತೀರಾ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೀಜಿಂಗ್, ಅಕ್ಟೋಬರ್ 17: ಭಯೋತ್ಪಾದನೆಗೆ ಪಾಕಿಸ್ತಾನ ತಾಯಿ ಸಮಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಒಂದೇ ದಿನದ ನಂತರ, ಅಂದರೆ ಸೋಮವಾರ ಚೀನಾ ದೇಶ ಪಾಕ್ ಪರ ನಿಂತಿದೆ. ಯಾವುದೇ ದೇಶವನ್ನು ಭಯೋತ್ಪಾದನೆ ಜತೆಗೆ ತಳುಕು ಹಾಕುವುದನ್ನು ಚೀನಾ ವಿರೋಧಿಸುತ್ತದೆ. ಪಾಕಿಸ್ತಾನದ 'ಮಹಾನ್ ತ್ಯಾಗವನ್ನು' ಜಗತ್ತು ಅರ್ಥ ಮಾಡಿಕೋಬೇಕು ಎಂದಿದೆ.

ಬ್ರಿಕ್ಸ್ ಸಮಾವೇಶದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್, ಯಾವುದೇ ದೇಶವನ್ನು ಭಯೋತ್ಪಾದನೆಗೆ ತಳುಕು ಹಾಕುವುದನ್ನು ವಿರೋಧಿಸುತ್ತೇವೆ ಎಂದಿದ್ದಾರೆ.[ನರೇಂದ್ರ ಮೋದಿ ಅವರ ಮಾತಿನ ಪೆಟ್ಟಿಗೆ ತತ್ತರಿಸಿದ ಪಾಕಿಸ್ತಾನ]

World Must Recognise Pakistan's 'Great Sacrifices'

ಭಾರತದ ವಿರುದ್ಧದ ಭಯೋತ್ಪಾದಕ ಗುಂಪುಗಳನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಬೆಂಬಲ ನೀಡುತ್ತಿರುವ ಇಸ್ಲಾಮಾಬಾದ್ ಅನ್ನು ಟೀಕಿಸಿರುವ ಮೋದಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಹೇಗೆ ಯಾವುದೇ ನಿರ್ದಿಷ್ಟ ದೇಶ ಅಥವಾ ಧರ್ಮವನ್ನು ಭಯೋತ್ಪಾದನೆ ಜತೆ ತಳುಕು ಹಾಕುವುದರಲ್ಲಿ ನಮ್ಮ ನಿರ್ಧಾರ ಅಚಲವೋ ಅದೇ ರೀತಿ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಚೀನಾ ನಿಲುವು ಅಚಲ ಎಂದಿದ್ದಾರೆ.[ಮೋದಿ ಪ್ರಧಾನಿಯಾಗಿದ್ದರಿಂದ ದೇಶದ ಜನತೆ ಸೇಫ್: ಮನೋಹರ್]

'ಯಾವುದೇ ಬಗೆಯ ಭಯೋತ್ಪಾದನೆಯನ್ನು ಚೀನಾ ವಿರೋಧಿಸುತ್ತದೆ. ಎಲ್ಲ ದೇಶಗಳ ಸ್ಥಿರತೆ ಹಾಗೂ ಸುರಕ್ಷತೆ ಖಚಿತಪಡಿಸುವುದು ಅಂತರರಾಷ್ಟ್ರೀಯ ಸಮುದಾಯದ ಕಾಳಜಿಯಾಗಬೇಕು. ಚೀನಾ ಹಾಗೂ ಪಾಕಿಸ್ತಾನ ಸಾರ್ವಕಾಲಿಕ ಸ್ನೇಹ ಇರುವ ದೇಶಗಳು. ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಹೋರಾಟವನ್ನು ಅಂತರರಾಷ್ಟ್ರೀಯ ಸಮುದಾಯಗಳು ಗುರುತಿಸಬೇಕು ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A day after Prime Minister Narendra Modi called Pakistan a 'mother-ship of terrorism', China on Monday defended Pakistan, saying it is against linking any country or religion with terror and asked the world community to acknowledge Pakistan's 'great sacrifices'.
Please Wait while comments are loading...