ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಬೆಲೆ ಏರಿಕೆಗೆ ರಷ್ಯಾ-ಉಕ್ರೇನ್ ಯುದ್ಧ ಕಾರಣವಾಯಿತೇ?: ಅಸಲಿ ಕಥೆಯೇನು?

|
Google Oneindia Kannada News

ನವದೆಹಲಿ, ಮಾರ್ಚ್ 9: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮಾರುಕಟ್ಟೆಯನ್ನು ಕದಡಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಚೇತರಿಕೆಯನ್ನು ಎದುರು ನೋಡುತ್ತಿರುವ ಸಂದರ್ಭದಲ್ಲಿ ಅನಿಶ್ಚಿತತೆ ಪ್ರಮಾಣ ಹೆಚ್ಚಾಗುತ್ತಿದೆ. ಫೆಡರಲ್ ರಿಸರ್ವ್ ದರದಲ್ಲಿ ಅನೇಕ ಬಾರಿ ಹೆಚ್ಚಳ ಆಗಿರುವುದನ್ನು ಮಾರುಕಟ್ಟೆ ಗಮನಿಸಿವೆ.

ರಷ್ಯಾದ ಮೇಲೆ ಹಲವು ರಾಷ್ಟ್ರಗಳು ನಿರ್ಬಂಧ ಹೇರುವುದರಿಂದ ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ ಸೇರಿದಂತೆ ಹಲವು ವಸ್ತುಗಳ ಬೆಲೆ ಗಗನಮುಖಿಯಾಗಿ ಏರಿಕೆ ಆಗುವ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಆದರೆ ಭಾರತದ ಮೇಲೆ ಯಾವುದೇ ರೀತಿಯ ನೇರ ಪರಿಣಾಮ ಬೀರುವುದಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಭಾರತ ಮತ್ತು ರಷ್ಯಾ ನಡುವಿನ ನೇರ ವಹಿವಾಟು ಪ್ರಮಾಣ ಅಷ್ಟಕಷ್ಟೇ ಇದೆ. ಉಭಯ ರಾಷ್ಟ್ರಗಳ ಮಧ್ಯೆ ಒಟ್ಟು ವಹಿವಾಟು ಶೇ.1ರಷ್ಟಿದ್ದು, ಅದರಲ್ಲೂ ರಕ್ಷಣಾ ವಲಯದ ಸರಕುಗಳಿಗೆ ಸಂಬಂಧಿಸಿದ ವ್ಯಾಪಾರಕ್ಕೆ ಆದ್ಯತೆ ನೀಡಲಾಗಿದೆ. ಭಾರತವು ರಕ್ಷಣಾ ವಲಯದ ಸಾಮಗ್ರಿಗಳಿಗಾಗಿ ರಷ್ಯಾದ ಮೇಲೆ ಹೆಚ್ಚು ಅವಲಂಬಿಸಿದೆ. ಸದ್ಯದ ನಿರ್ಬಂಧಗಳಿಂದ ಈ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ.

ಇಂಇಂ"ಧನ" ಸುದ್ದಿ: ಜನರಿಗೆ ದುಬಾರಿ ಆಗುತ್ತಾ ಬೈಡನ್ ತೆಗೆದುಕೊಂಡ ಈ ನಿರ್ಧಾರ!?

ರಷ್ಯಾದ ಮೇಲಿನ ನಿರ್ಬಂಧಗಳು ಯುಎಸ್ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ಪರಿಣಾಮ ಬೀರುತ್ತವೆ. ಅದು ಜಾಗತಿಕ ವಲಯದಲ್ಲಿ ಪೆಟ್ಟು ನೀಡಲಿದ್ದು, ಭಾರತದ ಮೇಲೆಯೂ ಪರೋಕ್ಷವಾಗಿ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಹಾಗಿದ್ದರೆ ಭಾರತೀಯ ಮಾರುಕಟ್ಟೆಯ ಮೇಲೆ ಬೀರುವ ಪರೋಕ್ಷ ಪ್ರಭಾವಗಳ ಕುರಿತು ಒಂದು ವರದಿ ಇಲ್ಲಿದೆ ಓದಿ.

ರಷ್ಯಾ-ಉಕ್ರೇನ್ ಯುದ್ಧ ಇಲ್ಲದಿದ್ದರೂ ಬೆಲೆ ಏರಿಕೆ ಸಾಮಾನ್ಯ!

ರಷ್ಯಾ-ಉಕ್ರೇನ್ ಯುದ್ಧ ಇಲ್ಲದಿದ್ದರೂ ಬೆಲೆ ಏರಿಕೆ ಸಾಮಾನ್ಯ!

ಭಾರತದಲ್ಲಿ ಬೆಲೆ ಏರಿಕೆಗೆ ರಷ್ಯಾ-ಉಕ್ರೇನ್ ನಡುವಿನ ಯುದ್ಧವೂ ಕಾರಣವಾಗುತ್ತ ಎಂದು ಈಗ ವಿಶ್ಲೇಷಿಸಲಾಗುತ್ತಿದೆ. ಆದರೆ ದೇಶದಲ್ಲಿ ಹಣದುಬ್ಬರವೇ ಬೆಲೆ ಏರಿಕೆಗೆ ಮೊದಲ ಕಾರಣವಾಗಿದೆ. ಯುದ್ಧ ನಡೆಯದಿದ್ದರೂ ದೇಶದಲ್ಲಿ ಬೆಲೆ ಏರಿಕೆ ಸರ್ವೇ ಸಾಮಾನ್ಯ ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು. ಭಾರತದಲ್ಲಿ ಫೆಬ್ರವರಿ ತಿಂಗಳ ಆರಂಭಕ್ಕೂ ಮೊದಲೇ ಸರಕುಗಳ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಕಚ್ಚಾತೈಲದ ಬೆಲೆ ಆಕಾಶಕ್ಕೆ ಏರಿದ್ದು, ಅದಕ್ಕೆ ಕಾರಣವಾಯಿತು. ಇದರ ಮಧ್ಯೆ ಶುರುವಾದ ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದ ಅನಿಲ, ಖಾದ್ಯ ತೈಲ ಮತ್ತು ಲೋಹದ ಬೆಲೆಯ ಏರಿಕೆಗೆ ಪುಷ್ಟಿ ನೀಡಿತು.

ಪಂಚರಾಜ್ಯ ಚುನಾವಣೆಯಿಂದ ಬೆಲೆ ಏರಿಕೆಗೆ ಕಡಿವಾಣ?

ಪಂಚರಾಜ್ಯ ಚುನಾವಣೆಯಿಂದ ಬೆಲೆ ಏರಿಕೆಗೆ ಕಡಿವಾಣ?

ಭಾರತದಲ್ಲಿ ವಿಶೇಷವೆಂದರೆ ಕಳೆದ ಡಿಸೆಂಬರ್ ತಿಂಗಳಿನಿಂದಲೇ ಉತ್ಪಾದಕರು ಕ್ರಮೇಣ ಬೆಲೆ ಏರಿಕೆ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ವೆಚ್ಚ ಸರಿದೂಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಂಚರಾಜ್ಯಗಳ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸರ್ಕಾರವು ಕಡಿವಾಣ ಹಾಕಿತು. ಆದ್ದರಿಂದ ನವೆಂಬರ್ ತಿಂಗಳಿನಿಂದ ಈಚೆಗೆ ಬೆಲೆ ಏರಿಕೆಯು ಅಷ್ಟಾಗೆ ಕಂಡು ಬಂದಿಲ್ಲ. ಆದರೆ ಮಾರ್ಚ್ 10ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಅಲ್ಲಿಂದ ಮತ್ತೆ ಬೆಲೆ ಏರಿಕೆ ಬಿಸಿ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ರಷ್ಯಾದಿಂದ ಯುಎಸ್ ಆಮದು ಮಾಡಿಕೊಳ್ಳುತ್ತಿದ್ದ ಪೆಟ್ರೋಲ್ ಪ್ರಮಾಣ ಎಷ್ಟು ಗೊತ್ತಾ?ರಷ್ಯಾದಿಂದ ಯುಎಸ್ ಆಮದು ಮಾಡಿಕೊಳ್ಳುತ್ತಿದ್ದ ಪೆಟ್ರೋಲ್ ಪ್ರಮಾಣ ಎಷ್ಟು ಗೊತ್ತಾ?

ಜಾಗತಿಕ ಮಟ್ಟದಲ್ಲಿ ಭಾರತೀಯ ರುಪಿ ಮೇಲೆ ಪರಿಣಾಮ

ಜಾಗತಿಕ ಮಟ್ಟದಲ್ಲಿ ಭಾರತೀಯ ರುಪಿ ಮೇಲೆ ಪರಿಣಾಮ

ಭಾರತೀಯ ರೂಪಾಯಿ ಮೌಲ್ಯದ ಮೇಲೆ ಎರಡನೇಯದಾಗಿ ಕಾಳಜಿ ವಹಿಸಬೇಕಿದೆ. ಏಕೆಂದರೆ ಯುದ್ಧ ಆರಂಭದ ನಂತರ ಜಾಗತಿಕ ಮಟ್ಟದಲ್ಲಿ ಕರೆನ್ಸಿಗಳ ಮೌಲ್ಯ ಏರಿಳಿತವಾಗುತ್ತಿದೆ. ಯುದ್ಧ ಮತ್ತು ನಿರ್ಬಂಧಗಳು ಕರೆನ್ಸಿಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದ್ದು, ಭಾರತೀಯ ರುಪಿ ಕೂಡ ಇದರಿಂದ ಹೊರತಾಗಿಲ್ಲ. ಚಾಲ್ತಿ ಖಾತೆಯ ಬ್ಯಾಲೆನ್ಸ್ ಕೊರತೆ-ವಾರ್ಡ್‌ಗಳಿಗೆ ತಿರುಗಿರುವ ಸಮಯದಲ್ಲಿ ಬರುತ್ತದೆ. ತೈಲ ಬೆಲೆಗಳ ಹೆಚ್ಚಳದಿಂದ CAD ಹೆಚ್ಚಾಗುವುದನ್ನೂ ನಿರೀಕ್ಷಿಸಬಹುದು.

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ವ್ಯತ್ಯಾಸ

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ವ್ಯತ್ಯಾಸ

ಭಾರತದ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುವ ಮೂರನೇ ವಿಷಯವೇ ವಿದೇಶಿ ಬಂಡವಾಳ ಹೂಡಿಕೆ. ಉಕ್ರೇನ್ ಮತ್ತು ರಷ್ಯಾದ ಯುದ್ಧದಿಂದಾಗಿ ಈ ವಲಯದಲ್ಲಿ ಸಾಕಷ್ಟು ಚಂಚಲತೆ ಸೃಷ್ಟಿಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯು ಕಳೆಗುಂದುತ್ತಿದೆ. ಡಾಲರ್ ಮತ್ತು ಚಿನ್ನದ ಮೇಲೆ ಹೂಡಿಕೆಯು ಹೆಚ್ಚು ಸುರಕ್ಷಿತವಾಗಿರುತ್ತದೆ. ಸಾಮಾನ್ಯವಾಗಿ ಈ ಎರಡೂ ವಲಯಗಳು ಭಿನ್ನವಾಗಿರುತ್ತದೆ, ಆದರೆ ಈ ಬಾರಿ ಡಾಲರ್ ಮತ್ತು ಚಿನ್ನವು ಒಂದೇ ದಾರಿಯಲ್ಲಿ ಸಾಗುತ್ತಿರುವಂತೆ ಗೋಚರಿಸುತ್ತಿದೆ.

ಡಾಲರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದರೆ ಅಲ್ಲಿ ಬಾಂಡ್ ಉತ್ಪನ್ನಗಳ ಮೇಲೆ ಹೂಡಿಕೆ ಹೆಚ್ಚಾಗಿರುತ್ತದೆ. ಆದರೆ ಬಾಂಡ್ ಬೆಲೆಯಲ್ಲೂ ತೀವ್ರತರ ಇಳಿಕೆ ಕಂಡು ಬಂದಿದ್ದು, ಈ ಹಂತದಲ್ಲಿ ಏರಿಕೆ ಕಾಣುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಆದರೆ, ಹಣದುಬ್ಬರದ ಭಯ ಇನ್ನಷ್ಟು ಹೆಚ್ಚಾಗುತ್ತಿದ್ದಂತೆ ಬಾಂಡ್ ದರ ಏರಿಕೆಯಾಗುವ ಸೂಚನೆಗಳು ಸಿಗುತ್ತಿವೆ. ಅದಾಗ್ಯೂ, ಭಾರತದಲ್ಲಿ ದಿಕ್ಕು ಸ್ಪಷ್ಟವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷ ದರ ಏರಿಕೆ ಮಾಡುವುದಿಲ್ಲ ಎಂದು ನಂಬಲಾಗಿತ್ತು. ಇದು 10 ವರ್ಷಗಳ ಬಾಂಡ್ ಅನ್ನು 6.7% ಮಾರ್ಕ್‌ಗೆ ಹಿಂತಿರುಗಿಸಿತು.

ನಾಲ್ಕನೇ ಅಂಶವೇ ರಷ್ಯಾಗೆ ಹಣ ಪಾವತಿ ಮಾಡುವುದು

ನಾಲ್ಕನೇ ಅಂಶವೇ ರಷ್ಯಾಗೆ ಹಣ ಪಾವತಿ ಮಾಡುವುದು

ರಷ್ಯಾದೊಂದಿಗೆ ವಹಿವಾಟು ಹೊಂದಿರುವ ರಾಷ್ಟ್ರಗಳು ಈ ಸಂದರ್ಭದಲ್ಲಿ ತುರ್ತು ಹಣ ಪಾವತಿಯ ಬಗ್ಗೆ ಆತಂಕವನ್ನು ಎದುರಿಸುತ್ತಿವೆ. SWIFT ನಿಂದ ರಷ್ಯಾವನ್ನು ಹೊರಗಿಡಲಾಗಿದ್ದು, ರಫ್ತುದಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಷ್ಯಾಗೆ ಸರಕುಗಳನ್ನು ರವಾನಿಸುವುದಕ್ಕೆ ಹಡಗು ಕಂಪನಿಗಳು ಹಿಂದೇಟು ಹಾಕುತ್ತಿವೆ. ರಷ್ಯಾಗೆ ಪೆಟ್ಟು ಕೊಡುವ ಪ್ರಯತ್ನದಲ್ಲಿ ಹಲವು ರಾಷ್ಟ್ರಗಳು ನಿರ್ಬಂಧಗಳ ಜೊತೆಗೆ ಕಂಪನಿಗಳನ್ನು ಮುಚ್ಚುತ್ತಿವೆ. ಸರ್ಕಾರದ ಮಟ್ಟದಲ್ಲಿ ಭಾರತವು ರೂಪಾಯಿ-ರೂಬಲ್ ಒಪ್ಪಂದಕ್ಕೆ ಮುಂದಾಗಬಹುದು, ಆದರೆ ಖಾಸಗಿಯವರು ರಫ್ತಿಗಾಗಿ ರೂಬಲ್ಸ್ ಅನ್ನು ಸ್ವೀಕರಿಸುವುದು ಅಷ್ಟು ಸುಲಭವಾಗಿಲ್ಲ.

English summary
Russia Ukraine Conflict: What it means for India : Will Russia’s Ukraine-war hurt on India? India faces secondary impact from market reverberations. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X