World War: ಸರ್ವಾಧಿಕಾರಿ ರೈಲು ಸವಾರಿ, ರಷ್ಯಾ ಕಡೆಗೆ ಕಿಮ್ ಪಯಣ!

ಉತ್ತರ ಕೊರಿಯಾ ಸರ್ವಾಧಿಕಾರಿಗೆ ಈಗ ರಷ್ಯಾ ಮೇಲೆ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ಇದೀಗ ರಷ್ಯಾಗೆ ಪ್ರಯಾಣ ಆರಂಭಿಸಿದ್ದಾನೆ ಕಿಮ್ ಜಾಂಗ್ ಉನ್. ವ್ಲಾದಿಮಿರ್ ಪುಟಿನ್ & ಕಿಮ್ ಜಾಂಗ್ ಉನ್ ನಡುವೆ ಮಹತ್ವದ ಮೀಟಿಂಗ್ ನಡೆಯಲಿದೆ. ಆದರೆ ಹೀಗೆ ದಿಢೀರ್ ಉತ್ತರ ಕೊರಿಯಾ ಸರ್ವಾಧಿಕಾರಿ ರಷ್ಯಾಗೆ ಪ್ರಯಾಣ ಮಾಡಿದ್ದು ಯಾಕೆ? ಕಿಮ್ ಜಾಂಗ್ ಉನ್‌ನ ರಷ್ಯಾ ಭೇಟಿ ಉದ್ದೇಶ ಏನು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತರ ಕೊರಿಯಾ ಜಗತ್ತಿನಲ್ಲಿ ಒಬ್ಬಂಟಿಯಾಗಿ ಪರದಾಡುವ ಪರಿಸ್ಥಿತಿ ಇದೆ. ತನ್ನ ನಿಲುವು ಹಾಗೂ ಪರಮಾಣು ಬಾಂಬ್ ದಾಳಿ ಬೆದರಿಕೆ ಹಿನ್ನೆಲೆ ಉತ್ತರ ಕೊರಿಯಾ ವಿರುದ್ಧ ಹಲವು ನಿರ್ಬಂಧ ಹೇರಿದೆ ಅಮೆರಿಕ. ಸ್ಥಿತಿ ಹೀಗಿದ್ದಾಗ ಉತ್ತರ ಕೊರಿಯಾಗೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳು ಅಂದ್ರೆ ಕೇವಲ ರಷ್ಯಾ ಮತ್ತು ಚೀನಾ ಮಾತ್ರ. ಹೀಗಾಗಿ ಇಬ್ಬರ ಜೊತೆಗೆ ತನ್ನ ಸಂಬಂಧ ಉತ್ತಮವಾಗಿ ಇಟ್ಟುಕೊಳ್ಳಲು ಸರ್ವಾಧಿಕಾರಿ ಕಿಮ್ ಪ್ರಯತ್ನಿಸುತ್ತಾನೆ. ಈಗಲೂ ಅಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ಅವರ ಒಂದೇ ಕೂಗಿಗೆ ಓಡಿ ಹೋಗಿದ್ದಾನೆ ಕಿಮ್. ಅಲ್ಲದೆ ಜಗತ್ತು ಮತ್ತೊಂದು ಮಹಾಯುದ್ಧದ ಸುಳಿಗೆ ಸಿಲುಕುವಂತೆ ಮಾಡಿದ್ದಾನೆ ಈ ಕಿತಾಪತಿ ರಾಜ.

Why Kim Jong Un traveling to Russia to meet Putin

ರಷ್ಯಾದಲ್ಲಿ ಉತ್ತರ ಕೊರಿಯಾಗೆ ಏನು ಕೆಲಸ?

ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾ ಪರಿಸ್ಥಿತಿ ಕೂಡ ಥೇಟ್ ಉತ್ತರ ಕೊರಿಯಾ ರೀತಿಯೇ ಆಗಿದೆ. ರಷ್ಯಾಗೆ ಈಗಿನ ಸ್ಥಿತಿಯಲ್ಲಿ ಜಗತ್ತಿನ ಕೆಲವೇ ಕೆಲವು ದೇಶಗಳು ಬೆಂಬಲ ನೀಡುತ್ತಿವೆ. ಅದ್ರಲ್ಲು ಚೀನಾ ಮತ್ತು ಉತ್ತರ ಕೊರಿಯಾ ದೇಶಗಳು ರಷ್ಯಾಗೆ ಶಸ್ತ್ರಾಸ್ತ್ರವನ್ನ ರಫ್ತು ಮಾಡುತ್ತಿವೆ ಎಂಬ ಆರೋಪ ಇದೆ. ಇದೇ ಹೊತ್ತಲ್ಲಿ ವೆಪನ್ಸ್ ಡೀಲ್ ಮಾಡೋಕೆ ಕಿಮ್ ಜಾಂಗ್ ಉನ್ ರಷ್ಯಾಗೆ ಪ್ರಯಾಣ ಬೆಳೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಮಧ್ಯೆ ಮತ್ತೊಂದು ಭಯಾನಕ ಸುದ್ದಿ ಕೂಡ ಹೊರಬಿದ್ದಿದೆ.

ಈಗಿರುವ ಮಾಹಿತಿ ಪ್ರಕಾರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾಗೆ ಪ್ರಯಾಣ ಬೆಳೆಸಿರುವ ಕಾರಣ ಸ್ಪಷ್ಟವಾಗಿದೆ. ರಷ್ಯಾ ಜೊತೆ ಸೇರಿ ಶಸ್ತ್ರಾಸ್ತ್ರ ಪೂರೈಕೆ ಡೀಲ್ ಫೈನಲ್ ಮಾಡುತ್ತಾನೆ ಅಂತಾ ಹೇಳಲಾಗಿದೆ. ಉ.ಕೊರಿಯಾ ಗಡಿ ಸಮೀಪ ಇರುವ ವ್ಲಾಡಿವೋಸ್ಟೋಕ್ ಪ್ರದೇಶದಲ್ಲಿ ಪುಟಿನ್ ಜೊತೆ ಕಿಮ್ ಜಾಂಗ್ ಉನ್ ಚರ್ಚೆ ನಡೆಸುತ್ತಾನಂತೆ. ಈ ಮೂಲಕ ಧಗಧಗಿಸುತ್ತಿರುವ ಉಕ್ರೇನ್ & ರಷ್ಯಾ ನಡುವಿನ ಯುದ್ಧದ ಬೆಂಕಿ ಈಗ ಜಗತ್ತನ್ನೇ ಸುಡುವ ಸೂಚನೆ ನೀಡಿದೆ. ಈಗ ಸರ್ವಾಧಿಕಾರಿಯ ಈ ನಡೆ ಕಂಡು ದೊಡ್ಡಣ್ಣ ಅಮೆರಿಕ ಕೂಡ ರೊಚ್ಚಿಗೆದ್ದಿದೆ.

ಪರಮಾಣು ದೇಶ ಉತ್ತರ ಕೊರಿಯಾ

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ & ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಚರ್ಚೆ ನಡೆದು ಒಪ್ಪಂದಕ್ಕೆ ಸಹಿ ಬಿದ್ದರೆ ಮುಗೀತು ಕಥೆ. ಏಕೆಂದರೆ ಉತ್ತರ ಕೊರಿಯಾದ ಬಳಿ ಪರಮಾಣು ಅಸ್ತ್ರಗಳು ಇವೆ. ಅಕಸ್ಮಾತ್ ಪರಮಾಣು ಅಸ್ತ್ರ ಪೂರೈಕೆ ನಡೆದು, ಉಕ್ರೇನ್ ಮೇಲೆ ನ್ಯೂಕ್ಲಿಯರ್ ದಾಳಿ ನಡೆದರೆ ಜಗತ್ತಿನ ಅಂತ್ಯವಾಗಲಿದೆ. ಹೀಗಾಗಿಯೇ ಪ್ರಪಂಚಕ್ಕೆ ಮತ್ತೆ ಕಂಟಕ ಎದುರಾಗಿದೆ. ಅದರಲ್ಲೂ ಉತ್ತರ ಕೊರಿಯಾ ಮಧ್ಯಪ್ರವೇಶ ಮಾಡಿರುವುದು ಭಯ ಹುಟ್ಟಿಸಿದೆ. ಇನ್ನೇನು ಕೆಲ ಹೊತ್ತಲ್ಲಿ ಪುಟಿನ್ ಮತ್ತು ಕಿಮ್ ನಡುವೆ ಮಾತುಕತೆ ಶುರುವಾಗುವ ಸಾಧ್ಯತೆ ಇದೆ.

Why Kim Jong Un traveling to Russia to meet Putin

ಉಕ್ರೇನ್ ಸೇನೆಗೆ ಅಮೆರಿಕ ಸಹಾಯ

ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‌ಗೆ ಅಮೆರಿಕ ನೆರವು ನೀಡ್ತಿದೆ ಎಂಬ ಆರೋಪವು ಇದೆ. ಉಕ್ರೇನ್ ವಿರುದ್ಧ ರಷ್ಯಾ ಸೇನೆ ಆಕ್ರಮಣ ಆರಂಭಿಸಿದ ನಂತರ ಅಮೆರಿಕ ಭಾರಿ ಸಹಾಯವನ್ನೇ ಮಾಡ್ತಿದೆ. ರಷ್ಯಾ ದೀರ್ಘ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ಅಮೆರಿಕ & ನ್ಯಾಟೋ ಪಡೆ ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಈವರೆಗೂ ಅಮೆರಿಕ 3ರಿಂದ 4 ಲಕ್ಷ ಕೋಟಿ ರೂಪಾಯಿ ನೆರವನ್ನು ಉಕ್ರೇನ್‌ಗೆ ಕಲ್ಪಿಸಿದೆ. ಇದರ ಜೊತೆಗೆ ರಷ್ಯಾ ಪರವಾಗಿ ಉತ್ತರ ಕೊರಿಯಾ ಮತ್ತು ಚೀನಾ ನಿಂತಿವೆ. ಈಗ ನೋಡಿದರೆ ಸರ್ವಾಧಿಕಾರಿ ನೇರವಾಗಿ ರಷ್ಯಾ ಬಾಗಿಲು ಬಡಿದಿದ್ದಾನೆ. ಮುಂದೆ ಏನಾಗುತ್ತೋ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+