ಭಾರತದೊಂದಿಗೆ ಗುದ್ದಾಡಲು ಬಂದಿದ್ದ ಕೆನಡಾ ಪಿಎಂ ಜಸ್ಟಿನ್ ಟ್ರುಡೊ ರಾಜೀನಾಮೆಗೆ ಇಂಟ್ರಸ್ಟಿಂಗ್ ಕಾರಣ
ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ಕೊಡುವ ಸಮಯ ಹತ್ತಿರವಾಗಿದೆ. ಭಾರತದೊಂದಿಗೆ ಜಗಳಕ್ಕೆ ಇಳಿದಿದ್ದ ಕೆನಡಾದ ಪ್ರಧಾನಿಗೆ ವಿಶ್ವದಾದ ವಿವಿಧ ರಾಷ್ಟ್ರಗಳಿಂದ ನಿರೀಕ್ಷಿತ ಸಹಕಾರವೇನು ಸಿಕ್ಕಿರಲಿಲ್ಲ. ಅಮೆರಿಕ ದೇಶವು ಕೆನಡಾಗೆ ಬೆಂಬವಲವಾಗಿ ನಿಂತಿತ್ತಾದರೂ, ಹೆಚ್ಚಿನ ಸಹಕಾರ ಸಿಗಲಿಲ್ಲ. ಕೆನಡಾ ಪಿಎಂನ ಜನಪ್ರಿಯತೆ ದಿನದಿಂದ ದಿನಕ್ಕೆ ಇಳಿಕೆಯಾಗಿತ್ತು.
ಅವರ ಪಕ್ಷದಿಂದಲೂ ಅವರಿಗೆ ವಿರೋಧ ವ್ಯಕ್ತವಾಗಿತ್ತು. ಭಾರತದಂತಹ ಪ್ರಮುಖ ರಾಷ್ಟ್ರದೊಂದಿಗೆ ಕೆನಡಾ ಸೆಣಸಾಣ ಪ್ರಾರಂಭಿಸಿದ್ದೇ ಟ್ರುಡೊಗೆ ಸಂಕಷ್ಟ ಸೃಷ್ಟಿ ಮಾಡಿತ್ತು ಎಂದೂ ಹೇಳಲಾಗುತ್ತಿದೆ. ಆದರೆ, ಟ್ರುಡೊ ಅವರ ರಾಜೀನಾಮೆಗೆ ಬೇರೆಯದೇ ಕಾರಣವನ್ನು ಹುಡುಕಲಾಗುತ್ತಿದೆ ಅದೇನು ಎನ್ನುವ ವಿವರ ಇಲ್ಲಿದೆ.

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಹಾಗೂ ಕೆನಡಾದ ನಡುವೆ ಸಂಬಂಧ ತೀರ ಅಂದರೆ ತೀರ ಎನಿಸುವಂತೆ ಹಳಸಿತ್ತು. ಅಲ್ಲದೆ ಕೆನಡಾದಲ್ಲಿ ಭಾರತದ ವಿರೋಧಿ ಚಟುವಟಿಕೆಗಳು ನಡೆಯುತ್ತಿದೆ ಎನ್ನುವ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿತ್ತು. ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ನಡೆಸುತ್ತಿದ್ದ ಹೋರಾಟ ಹಾಗೂ ಪ್ರತಿಭಟನೆ ಮಿತಿ ಮೀರಿತ್ತು.
ಭಾರತಕ್ಕೆ ಅವಮಾನ ಮಾಡುವ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ಹತ್ಯೆಗೆ ಭಾರತದ ಏಜೆಂಟರೇ ಪ್ರಮುಖ ಕಾರಣ. ಭಾರತ ನಮ್ಮ ದೇಶಕ್ಕೆ ಬಂದು ಈ ರೀತಿ ಮಾಡಲು ಸಾಧ್ಯವಿಲ್ಲ. ಈ ರೀತಿ ಮಾಡುವುದು ತಪ್ಪು ಅಂತ ಕೆನಡಾ ಹೇಳಿತ್ತು. ಆದರೆ, ಕೆನಡಾದ ಈ ಮಾತಿಗೆ ಭಾರತದ ವಿದೇಶಾಂಗ ಇಲಾಖೆಯು ಭಾರೀ ವಿರೋಧ ವ್ಯಕ್ತಪಡಿಸಿತ್ತು. ಯಾವುದೇ ಸಾಕ್ಷಿ ಇಲ್ಲದೆ ಈ ರೀತಿ ಮಾತನಾಡಬಾರದು ಅಂತ ಎಚ್ಚರಿಕೆ ಕೊಟ್ಟಿತ್ತು.

ಈ ಘಟನೆಯ ನಂತರ ಹಲವು ಪ್ರಮುಖ ಬೆಳವಣಿಗೆಗಳು ಆಗಿವೆ. ಮುಖ್ಯವಾಗಿ ದಿನದಿಂದ ದಿನಕ್ಕೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ವರ್ಚಸ್ಸು ಕಡಿಮೆಯಾಗಿದೆ. ಜನಪ್ರಿಯತೆ ಕುಸಿತದ ಬೆನ್ನಲ್ಲೇ ಅವರ ಪಕ್ಷದಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಟ್ರುಡೊ ಅವರಿಗೆ ಅವರ ಲಿಬರಲ್ ಪಾರ್ಟಿಯಿಂದಲೇ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ರಾಜೀನಾಮೆ ಕೊಡುವುದಕ್ಕೆ ಒತ್ತಡ ಹೆಚ್ಚಾಗಿತ್ತು ಅಂತ ಹೇಳಲಾಗಿದೆ.
ಟ್ರುಡೊ ಅವರು ನಾಯಕರಾಗಿ ಮುಂದುವರಿಯುವುದಕ್ಕೆ ಜನರ ಒಲವು ಕಡಿಮೆ ಆಗುತ್ತಿರುವುದು ಸಹ ಇದಕ್ಕೆ ಪ್ರಮುಖ ಕಾರಣ ಅಂತ ಹೇಳಲಾಗಿದೆ. ಕೆಲವು ಸಂಸದರು ರಾಜೀನಾಮೆ ಕೊಡುವ ಬಗ್ಗೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ಚುನಾವಣೆ ಉದ್ದೇಶದಿಂದ ರಾಜೀನಾಮೆ: ಎಲ್ಲದಕ್ಕಿಂತ ಮುಖ್ಯವಾಗಿ ಚುನಾವಣೆಯ ದೃಷ್ಟಿಯಿಂದ ರಾಜೀನಾಮೆ ಕೊಡಲಾಗಿದೆ. ಅಮೆರಿಕದ ಚುನಾವಣೆ ನಡೆಯುವುದಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿರುವಂತೆ ಜೋ ಬೈಡನ್ ಅವರು ಮುಂದಿನ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದರು. ಇದರಿಂದ ಪಕ್ಷಕ್ಕೆ ಆಗುತ್ತಿದ್ದ ಡ್ಯಾಮೇಜ್ ಕಂಟ್ರೋಲ್ ಮಾಡುವುದು ಅವರ ಉದ್ದೇಶವಾಗಿತ್ತು. ಅದೇ ರೀತಿ ಇದೀಗ ಟ್ರುಡೊ ಅವರು ಮಾಡಿದ್ದಾರೆ.
ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. ಆದರೆ ಈ ಬಾರಿ ಆರ್ಥಿಕ ನಿರ್ವಹಣೆ ಹಾಗೂ ವಿದೇಶಾಂಗ ನೀತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಕೆನಡಾ ಸರ್ಕಾರ ವಿಫಲವಾಗಿದೆ ಎನ್ನುವ ಅಭಿಪ್ರಾಯ ಅಲ್ಲಿನ ಜನರಲ್ಲಿ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸೋಲು ಆಗುವ ಭೀತಿ ಈಗ ಆಡಳಿತದಲ್ಲಿ ಇರುವ ಲಿಬರಲ್ ಪಾರ್ಟಿಗೆ ಎದುರಾಗಿದೆ.
ಹಲವು ಸಮೀಕ್ಷಾ ವರದಿಗಳು ಸಹ ಈ ಬಾರಿ ಚುನಾವಣೆಯಲ್ಲಿ ಲಿಬರಲ್ ಪಾರ್ಟಿ ಸೋತು, ಕನ್ಸವೇರ್ಟಿವ್ ಪಾರ್ಟಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಈ ಎಲ್ಲಾ ಕಾರಣಗಳಿಂದ ಮುಂದೆ ಆಗಬಹುದಾದ ಡ್ಯಾಮೇಜ್ ಕಂಟ್ರೋಲ್‌ಗಾಗಿ ಜಸ್ಟಿನ್ ಟ್ರುಡೊ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications