"ಇಡೀ ಜಗತ್ತು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ": ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಎಚ್ಚರಿಕೆ
'ಇಡೀ ಜಗತ್ತು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ' ಎಂದು ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಎಚ್ಚರಿಕೆ ಕೊಟ್ಟಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶದ ಕಿಚ್ಚನ್ನು ಹೆಚ್ಚಿಸಿದೆ.
ಪ್ಯಾಲೆಸ್ಟೀನ್‌ನ ಹಮಾಸ್ ಉಗ್ರರು ಶನಿವಾರ ನಸುಕಿನಲ್ಲಿ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ನಡೆಸಿದ ದಿಢೀರ್ ದಾಳಿಯಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಪ್ರತಿಕಾರಕ್ಕೆ ಮುಂದಾಗಿರುವ ಇಸ್ರೇಲ್ ಪ್ಯಾಲೆಸ್ಟೀನ್ ಹಮಾಸ್ ಉಗ್ರರನ್ನು ಸದೆ ಬಡೆಯಲು ಪ್ರತಿ ದಾಳಿ ನಡೆಸಿದೆ. ಎರಡು ಕಡೆಯ ದಾಳಿಗಳು ಇಂದಿಗೂ ಮುಂದುವರೆದಿದೆ.
Israel is only the first target, warns Hamas commander
— Amy Mek (@AmyMek) October 11, 2023
Mahmoud al-Zahar:
"The entire planet will be under our law; there will be no more Jews or Christian traitors.".
“We believe in what our Prophet Muhammad said: “Allah drew the ends of the world near one another for my… pic.twitter.com/fTWa8pqGZB
ಈ ಮಧ್ಯೆ ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಅವರ ಸಂದೇಶವೊಂದು ಹೊರಹೊಮ್ಮಿದೆ. ಅದರಲ್ಲಿ ಅವರು ಜಾಗತಿಕ ಪ್ರಾಬಲ್ಯಕ್ಕಾಗಿ ತಮ್ಮ ಗುಂಪಿನ ಮಹತ್ವಾಕಾಂಕ್ಷೆಗಳ ಬಗ್ಗೆ ಮಾತನಾಡುವುದನ್ನು ಕಾಣಬಹುದು. ಇಸ್ರೇಲ್ ಕೇವಲ ಪ್ರಾಥಮಿಕ ಗುರಿಯಾಗಿದೆ. ಇಡೀ ಪ್ರಪಂಚದ ಮೇಲೆ ತಮ್ಮ ಪ್ರಭಾವವನ್ನು ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳುವ ಒಂದು ನಿಮಿಷಕ್ಕೂ ಹೆಚ್ಚು ಅವಧಿಯ ವೀಡಿಯೊ ತುಣುಕನ್ನು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇಸ್ರೇಲ್ ಹಮಾಸ್ ವಿರುದ್ಧ ಸಮರ ಸಾರಿರುವ ಸಂದರ್ಭದಲ್ಲಿ ಈ ವಿಡಿಯೋ ಮೂಲಕ ಎಚ್ಚರಿಕೆ ನೀಡಲಾಗಿದೆ.

"ಇಸ್ರೇಲ್ ಮೊದಲ ಗುರಿ ಮಾತ್ರ, ಇಡೀ ಜಗತ್ತು ನಮ್ಮ ಕಾನೂನಿನ ಅಡಿಯಲ್ಲಿರುತ್ತದೆ" ಎಂದು ಜಹರ್ ವೀಡಿಯೊದಲ್ಲಿ ಹೇಳಿದ್ದಾರೆ. "ಭೂಮಿಯ ಸಂಪೂರ್ಣ 510 ಮಿಲಿಯನ್ ಚದರ ಕಿಲೋಮೀಟರ್‌ಗಳು ಯಾವುದೇ ಅನ್ಯಾಯ, ದಬ್ಬಾಳಿಕೆ ಇಲ್ಲದ ವ್ಯವಸ್ಥೆಯ ಅಡಿಯಲ್ಲಿ ಇವೆ. ಆದರೆ ಎಲ್ಲಾ ಅರಬ್ ದೇಶಗಳು, ಲೆಬನಾನ್, ಸಿರಿಯಾ, ಇರಾಕ್ ಮತ್ತು ಇತರ ದೇಶಗಳಲ್ಲಿ ಪ್ಯಾಲೆಸ್ಟೀನಿಯನ್ನರು ಮತ್ತು ಅರಬ್ಬರ ವಿರುದ್ಧ ನಡೆಸುತ್ತಿರುವ ಹತ್ಯಾಕಾಂಡಗಳಿಗೆ ಅಂತ್ಯವಿಲ್ಲ. ಈ ದೇಶಗಳಲ್ಲಿ ಇನ್ನು ಮುಂದೆ ಯಾವುದೇ ಕೊಲೆಗಳು ಮತ್ತು ಅಪರಾಧಗಳಂತಹ ಅಪರಾಧಗಳು ಇರುವುದಿಲ್ಲ" ಎಂದು ಜಹರ್ ಹೇಳಿದ್ದಾರೆ.
ಜೊತೆಗೆ ಇಸ್ರೇಲಿ ಸೈನಿಕರು ಮತ್ತು ನಾಗರಿಕರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿರುವ ಹಮಾಸ್ ಉಗ್ರರು, ಎಚ್ಚರಿಕೆಯಿಲ್ಲದೆ ದಾಳಿ ಮಾಡಿದರೆ ಬಂಧಿತರಲ್ಲಿ ಒಬ್ಬನನ್ನು ಗಲ್ಲಿಗೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇಸ್ರೇಲ್ ಪ್ರತಿಯಾಗಿ ಗಾಜಾ ಮೇಲೆ ದಾಳಿ ನಡೆಸಿದ ಬಳಿಕ ಈ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಲ್ಲೆ ಇಸ್ರೇಲ್ ತುರ್ತು ಏಕತಾ ಸರ್ಕಾರವನ್ನು ರಚಿಸಿದೆ. ಕ್ಯಾಬಿನೆಟ್‌ನಲ್ಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾಜಿ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಜೊತೆಯಾಗಿದ್ದಾರೆ.
"ನಮ್ಮ ಮನೆಗಾಗಿ ನಾವೆಲ್ಲರೂ ಒಟ್ಟಾಗಿ ಹೋರಾಡುತ್ತೇವೆ. ವಿಶ್ವ ನಾಯಕರಿಂದ ಇಸ್ರೇಲ್ ಅಭೂತಪೂರ್ವ ಬೆಂಬಲವನ್ನು ಪಡೆದಿದೆ. ನಾವು ಆಕ್ರಮಣ ಪ್ರಾರಂಭಿಸಿದ್ದೇವೆ. ಹಮಾಸ್ ಪ್ರತಿಯೊಬ್ಬ ಸದಸ್ಯನು ಸತ್ತಂತೆ. ಇಸ್ರೇಲ್ ತನ್ನ ಸೈನಿಕರ ಬೆನ್ನಿಗೆ ನಿಂತಿದೆ ಮತ್ತು ಈ ಯುದ್ಧದಲ್ಲಿ ಇಸ್ರೇಲ್ ಗೆಲ್ಲುತ್ತದೆ'' ಎಂದು ನೆತನ್ಯಾಹು ಹೇಳಿದರು.












Click it and Unblock the Notifications