ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..? | Oneindia Kannada

    ಇವಾಂಕಾ ಟ್ರಂಪ್ ಯಾರು? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಅಂತ ಒಂದೇ ವಾಕ್ಯದಲ್ಲಿ ಹೇಳಿಮುಗಿಸಿದರೆ ಸಾಕಾ..? ಖಂಡಿತ ಇಲ್ಲ, ಈ ಚೆಂದುಳ್ಳಿ ಚೆಲುವೆ ಮೂರು ಮಕ್ಕಳ ತಾಯಿ ಅಂದ್ರೆ ಹಲವರು ನಂಬಲಿಕ್ಕಿಲ್ಲ!

    ಗ್ಯಾಲರಿ : ಸುಂದರಿ ಇವಾಂಕಾಗೆ ಸಿಂಗಾರಗೊಂಡ ಮುತ್ತಿನ ನಗರಿ

    ಅಮೆರಿಕದ ಟೆಲಿವಿಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಇವಾಂಕಾ ಫ್ಯಾಶನ್ ಡಿಸೈನರ್ ಆಗಿಯೂ ಪ್ರಸಿದ್ಧಿ ಪಡೆದವರು. ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ಇವಾಂಕಾ ಹೈದರಾಬಾದಿಗೆ ಕಾಲಿಟ್ಟು, ಮುತ್ತಿನ ನಗರಿಯ ಮತ್ತೇರಿಸಿದ್ದಾರೆ. ಹೈದರಾಬಾದಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜಾಗತಿಕ ಉದ್ಯಮಶೀಲತೆ ಶೃಂಗಸಭೆ (ಜಿಇಎಸ್) ಗೆ ಆಗಮಿಸಿರುವ ಅವರ ಸಂಕ್ಷಿಪ್ತ ವ್ಯಕ್ತಿ ಪರಿಚಯ ಇಲ್ಲಿದೆ.

    ಚಹಾವಾಲಾನಿಂದ ಪ್ರಧಾನಿ, ನಿಮ್ಮ ಪರಿವರ್ತನೆ ಅಮೋಘ: ಇವಾಂಕಾ

    ಒಂದಷ್ಟು ಗ್ಲಾಮರ್, ಸಾಕಷ್ಟು ಬುದ್ಧಿಮತ್ತೆ, ವ್ಯವಹಾರ ಕೌಶಲ್ಯ, ಸೌಂದರ್ಯ, ಪ್ರಖ್ಯಾತಿ ಎಲ್ಲವುಗಳ ಮಿಶ್ರಣ ಇವಾಂಕಾ ಟ್ರಂಪ್. ತಂದೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗುವಲ್ಲಿ ಇವಾಂಕಾರ ಅವಿರತ ಪ್ರಚಾರ, ಶ್ರಮವನ್ನು ಅಲ್ಲಗಳೆಯುವಂತಿಲ್ಲ.

    ಮುತ್ತಿನ ನಗರಿಯ ಮತ್ತೇರಿಸಿದ ಚೆಲುವೆ ಇವಾಂಕಾ ಟ್ರಂಪ್!

    ಇವಾಂಕಾ ತಾಯಿ ಯಾರು..?

    ಇವಾಂಕಾ ತಾಯಿ ಯಾರು..?

    ಇವಾಂಕಾ ಟ್ರಂಪ್, ಡೊನಾಲ್ಡ್ ಟ್ರಂಪ್ ಮತ್ತು ಇವಾನಾ ಜೆನಿಕೊವಾ ಅವರ ಪುತ್ರಿ. ಇವಾನಾ ಅವರು ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ. 1991 ರಲ್ಲಿ ಟ್ರಂಪ್ ಜೊತೆ ಇವಾನಾ ವಿಚ್ಛೇದನ ಪಡೆದ ಮೇಲೂ ಇವಾಂಕಾ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಬಾಂಧವ್ಯ ಮಾತ್ರ ಮೊದಲಿನ ಹಾಗೇ ಇತ್ತು. ಇಂದಿಗೂ ಡೊನಾಲ್ಡ್ ಟ್ರಂಪ್ ಗೆ ಇವಾಂಕಾ ಮೇಲೆ ಎಲ್ಲಿಲ್ಲದ ಪ್ರೀತಿ. ಇವಾಂಕಾಗೂ ತಂದೆ ಎಂದರೆ ಪ್ರಾಣ.

    ಮುತ್ತಿನ ನಗರಿಗೆ ಬಂದ ಇವಾಂಕಾಗೆ ಅದ್ದೂರಿ ಸ್ವಾಗತ

    ಇವಾಂಕಾಗೆ ಶಾಲೆ ಅಂದ್ರೆ ಜೈಲು!

    ಇವಾಂಕಾಗೆ ಶಾಲೆ ಅಂದ್ರೆ ಜೈಲು!

    ಇವಾಂಕಾ ಟ್ರಂಪ್ ಹುಟ್ಟಿದ್ದು 1981, ಅಕ್ಟೋಬರ್ 30 ರಂದು ಅಮೆರಿಕದ ನ್ಯೂಯಾರ್ಕ್ ನ ಮ್ಯಾನ್ಹಟ್ಟನ್ ನಲ್ಲಿ. ತಂದೆ ತಾಯಿಯ ವಿಚ್ಛೇದನದ ನಂತರ ಬೋರ್ಡಿಂಗ್ ಶಾಲೆಯಲ್ಲೇ ಓದಿದ ಇವಾಂಕಾ ತನ್ನ ಶಾಲೆಯನ್ನು ಕೆಲವೆಡೆ 'ಜೈಲು' ಎಂದು ವ್ಯಾಖ್ಯಾನಿಸಿದ್ದೂ ಇದೆ! ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ಪಡೆದ ಇವಾಂಕಾ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯನ್ನು ಅಸ್ಖಲಿತವಾಗಿ ಮಾತನಾಡಬಲ್ಲರು.

    ಜಿಇಎಸ್ 2017: ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಟ್ರಂಪ್ ಪುತ್ರಿ

    ಇವಾಂಕಾರ ವ್ಯವಹಾರ ಕೌಶಲ್ಯ

    ಇವಾಂಕಾರ ವ್ಯವಹಾರ ಕೌಶಲ್ಯ

    ಕುಟುಂಬದ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುವ ಮೊದಲು ಇವಾಂಕಾ ಫಾರೆಸ್ಟ್ ಸಿಟಿ ಎಂಟರ್ ಪ್ರೈಸಸ್ ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ 2007 ರಲ್ಲಿ ವಜ್ರ ಮತ್ತು ಚಿನ್ನದ ವ್ಯಾಪಾರ ಶುರುಮಾಡಿದರು. ಕೆನಡಾ, ಕುವೈತ್, ಸೌದಿ ಅರೇಬಿಯಾ ಸೇರಿದಮತೆ ಹಲವು ದೇಶಗಳೊಂದಿಗೆ ವ್ಯವಹಾರ ಮಾಡುವಲ್ಲಿ ಅವರು ಸಫಲರಾದರು.

    ರೂಪದರ್ಶಿಯಾಗಿ ಮಿಂಚಿದ ಇವಾಂಕಾ

    ರೂಪದರ್ಶಿಯಾಗಿ ಮಿಂಚಿದ ಇವಾಂಕಾ

    ಚಿಕ್ಕ ವಯಸ್ಸಿನಿಂದಲೂ ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದ ಇವಾಂಕಾ ಬೋರ್ಡಿಂಗ್ ಶಾಲೆಯಲ್ಲಿ ಓದುವಾಗಲೇ ಮಾಡೆಲಿಂಗ್ ಆರಂಭಿಸಿದ್ದರು. ಡೊನಾಲ್ಡ್ ಟ್ರಂಪ್ ಆರ್ಗನೈಸೇಶನ್ ಗೆ ಸೇರಿಕೊಳ್ಳುವವರೆಗೂ ಇವಾಂಕಾ ಮಾಡೆಲಿಂಗ್ ಮಾಡುತ್ತಲೇ ಇದ್ದರು. ನಂತರ ತಾವೇ ವಿನ್ಯಾಸಗೊಳಿಸಿದ ಆಭರಣ ಮತ್ತು ಬಟ್ಟೆಗಳ ಜಾಹೀರಾತುಗಳ ಪ್ರಚಾರಕ್ಕಷ್ಟೇ ರೂಪದರ್ಶಿಯಾದರು.

    ಟಿವಿ ಕಾರ್ಯಕ್ರಮದಲ್ಲೂ ಭಾಗಿ

    ಟಿವಿ ಕಾರ್ಯಕ್ರಮದಲ್ಲೂ ಭಾಗಿ

    ಡೊನಾಲ್ಡ್ ಟ್ರಂಪ್ ರ ಟಿವಿ ಕಾರ್ಯಕ್ರಮಗಳಲ್ಲೊಂದಾಗ ದಿ ಎಪ್ರಂಟೈಸ್ 5 ನ ಕೆಲವು ಎಪಿಸೋಡ್ ಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಬಾರ್ನ್ ರಿಚ್ ಎಂಬ ಸಾಕ್ಷ್ಯಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಹಲವು ಪುಸ್ತಕಗಳನ್ನೂ ಬರೆದಿರುವ ಇವರ ಕೃತಿಗಳಲ್ಲಿ he Trump Card: Playing to Win in Work and Life, Women Who Work: Rewriting the Rules for Success ಮುಂತಾದವು ಪ್ರಸಿದ್ಧವಾದವು.

    ಟ್ರಂಪ್ ಆಪ್ತ ಸಲಹೆಗಾರ್ತಿಯಾಗಿ ಇವಾಂಕಾ

    ಟ್ರಂಪ್ ಆಪ್ತ ಸಲಹೆಗಾರ್ತಿಯಾಗಿ ಇವಾಂಕಾ

    2016 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಹಗಲಿರುಳೂ ಶ್ರಮಿಸಿದ್ದು ಇದೇ ಇವಾಂಕಾ ಟ್ರಂಪ್. ಅಪ್ಪನ ಗೆಲುವಿಗಾಗಿ ಹಲವು ಅತ್ಯುತ್ತಮ ಸಲಹೆಗಳನ್ನೂ ನೀಡಿ ತಂದೆಗೆ ಮತ್ತಷ್ಟು ಆಪ್ತ ಮಗಳಾದವರು ಇವಾಂಕಾ. ಸದ್ಯಕ್ಕೆ ಅಮೆರಿಕ ಅಧ್ಯಕ್ಷರ ಸಲಹಾಗಾರ್ತಿಯಾಗಿ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

    ಮನಮೆಚ್ಚಿದ ಹುಡುಗ

    ಮನಮೆಚ್ಚಿದ ಹುಡುಗ

    ಇವಾಂಕಾ ಟ್ರಂಪ್ ಕಾಲೇಜು ದಿನಗಳಲ್ಲಿ ಆತ್ಮೀಯವಾಗಿ ಓಡಾಡುತ್ತಿದ್ದರೂ, ಕೊನೆಗೆ ಇಷ್ಟಪಟ್ಟಿದ್ದು ಮಾತ್ರ ಜುರೆಡ್ ಕುಶ್ನರ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು. ಆದರೆ ಕುಶ್ನರ್ ಮನೆಯಲ್ಲಿ ಅವರಿಬ್ಬರ ಮದುವೆಗೆ ಒಪ್ಪದ ಕಾರಣ ಕೆಲದಿನಗಳ ಒಬ್ಬರೂ ಬೇರೆಯೇ ಉಳಿದರು. ಆದರೆ 2008 ರಲ್ಲಿ ಮತ್ತೆ ಒಂದಾದ ಜೋಡಿ, 2009 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯೊಂದಿಗೆ ಇದೀಗ ಒಬ್ಬ ಮಗಳು ಮತ್ತು ಇಬ್ಬರು ಹೆಣ್ಣುಮಕ್ಕಳ ಪುಟ್ಟ ಕುಟುಂಬವಿದೆ.

    ಇವಾಂಕಾ ಯಾಯಿಲ್ ಆದ ಕತೆ ಗೊತ್ತೆ?

    ಇವಾಂಕಾ ಯಾಯಿಲ್ ಆದ ಕತೆ ಗೊತ್ತೆ?

    ಪ್ರೆಸ್ಬಿತೆರಿಯನ್ ಕ್ರೈಸ್ತಳಾಗಿ ಹುಟ್ಟಿದ ಇವಾಂಕಾ 2009ರಲ್ಲಿ ಯಹೂದಿ ಮತಕ್ಕೆ ಮತಾಂತರವಾದರು. ಯಹೂದಿ ತತ್ತ್ವಗಳನ್ನೂ, ಅಲ್ಲಿನ ಉಪವಾಸ ಆಚರಣೆಗಳನ್ನು ಇಂದಿಗೂ ಇವಾಂಕಾ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Here is a brief profile of Ivanka Trump, who is a daughter of America President Donald Trump, an currently an advisor for America president

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more