3ನೇ ಮಹಾಯುದ್ಧಕ್ಕೆ ಚೀನಾ ಸೇನೆಯ ಮಹಾ ತಯಾರಿ!
ಬೀಜಿಂಗ್: ಶತ್ರಗಳನ್ನು ಗುಂಡಿಯಲ್ಲಿ ಮುಚ್ಚಲು ಚೀನಾ ಕಾಯುತ್ತಿತ್ತು. ಅದೇ ಸಮಯಕ್ಕೆ ಶತ್ರು ಕೂಡ ದೊಡ್ಡ ತಪ್ಪೊಂದನ್ನು ಮಾಡಿಬಿಟ್ಟ. ಕಡೆಗೆ ಡ್ರ್ಯಾಗನ್ ತೋಡಿದ ಹಳ್ಳದಲ್ಲಿ ಕೊನೆ ದಿನಗಳನ್ನ ಎಣಿಸುವ ಸಮಯ ಬಂದೇ ಬಿಟ್ಟಿದೆ ಆ ಪುಟ್ಟ ರಾಷ್ಟ್ರಕ್ಕೆ. ಅಷ್ಟಕ್ಕೂ ಇದು ತೈವಾನ್-ಅಮೆರಿಕದ ಸ್ನೇಹದ ಕಥೆ, ಅಮೆರಿಕ ಸಹವಾಸದಿಂದ ತೈವಾನ್ ಸರ್ವನಾಶ ಆಗುತ್ತಿರುವ ವ್ಯಥೆ.
ಚೀನಾ (China) ಅಕ್ಕಪಕ್ಕದ ದೇಶಗಳ ಜೊತೆ ದ್ವೇಷ ಕಟ್ಟಿಕೊಳ್ಳುವುದು ಮಾಮೂಲು. ಅದರಲ್ಲೂ ದಕ್ಷಿಣ ಚೀನಾ ಸಮದ್ರದಲ್ಲಿ ಬರುವ ದ್ವೀಪ ರಾಷ್ಟ್ರಗಳ ಜೊತೆಗೆ ಚೀನಾ ಕಿಚ್ಚು ದೊಡ್ಡದಾಗಿದೆ. ಇದಕ್ಕೆ ಬಲವಾದ ಕಾರಣ ಅಮೆರಿಕ ಎಂಬುದರಲ್ಲಿ 2ನೇ ಮಾತು ಬೇಡ. ಪರಿಸ್ಥಿತಿ ಹೀಗಿರುವಾಗ ತೈವಾನ್ (Taiwan) ಇತ್ತೀಚೆಗೆ ದೊಡ್ಡ ಪ್ರಮಾದ ಎಸಗಿತ್ತು. ಎಷ್ಟೋ ಬಾರಿ ಚೀನಾ ಬೇಡ ಬೇಡ ಎಂದರೂ ಅಮೆರಕ ಜೊತೆ ಸ್ನೇಹ ಬೆಳೆಸಲು ತೈವಾನ್ ಅಧ್ಯಕ್ಷರೇ ಹೋಗಿದ್ದರು, ಇದು ಮಹಾಯುದ್ಧಕ್ಕೆ ಮುನ್ನುಡಿ ಬರೆದುಬಿಟ್ಟಿದೆ.

ರಷ್ಯಾ ರೀತಿಯೇ ಚೀನಾ ಅಟ್ಯಾಕ್?
ಕಳೆದ 1 ವಾರದಿಂದ ದಕ್ಷಿಣ ಚೀನಾ ಸಮುದ್ರ (South China Sea) ಹೊತ್ತಿ ಉರಿಯುತ್ತಿದೆ. ತೈವಾನ್ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸಲು ಮುಂದಾಗಿದೆ ಚೀನಾ. ಖುದ್ದು ಚೀನಾ ಅಧ್ಯಕ್ಷರೇ ಹೇಳಿಕೆ ನೀಡಿ, ಅಸಲಿ ಯುದ್ಧ ಮುಂದಿದೆ ಎಂದಿದ್ದಾರೆ. ಈ ಮೂಲಕ ರಷ್ಯಾ ಸೇನೆ ಉಕ್ರೇನ್ ನೆಲ ವಶಕ್ಕೆ ಪಡೆದಂತೆ ಚೀನಾ ಶತ್ರು ತೈವಾನ್‌ಗೆ ಬುದ್ಧಿ ಕಲಿಸಲು ಸಜ್ಜಾಗುತ್ತಿದೆ ಎಂಬ ಮಾತು ಸಂಚಲನ ಸೃಷ್ಟಿಸಿದೆ. ಇದೇ ಸರಿಯಾದ ಸಮಯ ಎಂದು ತಿಳಿದಿರುವ ಚೀನಾ ಅಧ್ಯಕ್ಷ ಜಿನ್‌ಪಿಂಗ್, ಯುದ್ಧ ಪಕ್ಕಾ ಎಂದಿದ್ದಾರೆ.
ಉಕ್ರೇನ್ ಯುದ್ಧದಿಂದ ಕಲಿತ ಪಾಠ
ಹೌದು, ಉಕ್ರೇನ್ ಯುದ್ಧದಿಂದ ಜಗತ್ತು ಪಾಠ ಕಲಿಯುವುದು ಸಾಕಷ್ಟಿದೆ. ಅದರಲ್ಲೂ ಅಮೆರಿಕ ಎಂಬ ದೊಡ್ಡಣ್ಣನ ದಡ್ಡತನ ನಂಬಿ ಬದುಕುವುದು ಕಷ್ಟ ಎಂಬ ಆರೋಪ ಕೇಳಿಬರುತ್ತಿದೆ. ರಷ್ಯಾ ವಿರುದ್ಧ ಸೆಟೆದು ನಿಂತು ಗುಡುಗುತ್ತಿದ್ದ ಉಕ್ರೇನ್ ಏನಾಗಿದೆ? ಉಕ್ರೇನ್ ವಿರುದ್ಧ ರಷ್ಯಾ ಸೇನೆ ಯುದ್ಧ ಘೋಷಿಸಿದಾಗ ಅಮೆರಿಕ ನೇರವಾಗಿ ಸಹಾಯಕ್ಕೆ ಬರಲಿಲ್ಲ ಏಕೆ? ಹೀಗೆ ಹಲವು ಪ್ರಶ್ನೆಗಳು ಕಾಡುತ್ತಿವೆ. ಆದರೆ ಇದು ಚೀನಾ-ರಷ್ಯಾಗೆ ಭರವಸೆ ತುಂಬಿದ್ದು, ಶತ್ರು ದೇಶಗಳ ಮೇಲೆ ಸುಲಭವಾಗಿ ದಾಳಿ ಮಾಡಲು ಸಜ್ಜಾಗಿವೆ.

ಅಮೆರಿಕ ಬರಲ್ಲ ಎಂಬ ಧೈರ್ಯ!
ದೊಡ್ಡಣ್ಣ ಅಮೆರಿಕ ಈಗಾಗಲೇ ಉಕ್ರೇನ್ ಯುದ್ಧದಲ್ಲಿ ರಷ್ಯಾ ವಿರುದ್ಧ ತನ್ನ ಸೇನೆ ಕಳುಹಿಸಿಲ್ಲ. ಪರೋಕ್ಷವಾಗಿ ಉಕ್ರೇನ್ ಸೇನೆಗೆ ಅಮೆರಿಕ ಸಹಾಯ ಮಾಡುತ್ತಿದ್ದರೂ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ರಷ್ಯಾ ಸುಲಭವಾಗಿ ಉಕ್ರೇನ್ ಮೇಲೆ ಸವಾರಿ ಮಾಡುತ್ತಿದೆ. ಇನ್ನೊಂದ್ಕಡೆ ತೈವಾನ್ ವಿಚಾರದಲ್ಲೂ ಇದೇ ಆಗಲಿದೆ ಎಂಬುದು ಚೀನಿಯರ ಲೆಕ್ಕಾಚಾರ. ತೈವಾನ್ ಪರ ನಿಂತಿರುವ ಅಮೆರಿಕ ಯುದ್ಧ ಆರಂಭವಾದರೆ ಓಡಿ ಹೋಗಲಿದೆ ಎಂಬುದು ಡ್ರ್ಯಾಗನ್ ಯುದ್ಧತಂತ್ರ. ಹೀಗಾಗಿ ತೈವಾನ್ ನಾಶಕ್ಕೆ ಚೀನಾ ಪಣತೊಟ್ಟಿದೆ.
ಈಗಾಗಲೇ ಸ್ಯಾಂಪಲ್ ಕೊಟ್ಟಿದೆ
ತೈವಾನ್ ಅಧ್ಯಕ್ಷೆ ಅಮೆರಿಕ ಪ್ರವಾಸ ಮಾಡಿ ಬರುತ್ತಿದ್ದಂತೆ ತನ್ನ ತಾಕತ್ತನ್ನು ತೈವಾನ್‌ಗೆ ತೋರಿಸಿದೆ ಚೀನಾ. 10 ಯುದ್ಧ ನೌಕೆಗಳು ಹಾಗೂ 70ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ತೈವಾನ್ ಸುತ್ತಲೂ ನಿಯೋಜಿಸಿ ಚೀನಾ ಮಿಲಿಟರಿ ಸಮರಾಭ್ಯಾಸ ನಡೆಸಿ ಎಚ್ಚರಿಕೆ ನೀಡಿದ್ದಾಗಿದೆ. ಇಷ್ಟು ಸಾಲದು ಎಂಬಂತೆ ಯುದ್ಧಕ್ಕೆ ಸಿದ್ಧರಾಗಿ ಎಂಬ ಸಂದೇಶವನ್ನು ಚೀನಾ ಅಧ್ಯಕ್ಷ ನೀಡಿದ್ದಾರೆ. ಚೀನಾ ಸೈನಿಕರನ್ನು ನೇಮಿಸಿಕೊಳ್ಳುವ ವಿಚಾರದಲ್ಲೂ ಯುದ್ಧ ನೀತಿ ಅನುಸರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಚೀನಾ ಸೇನೆ ತೈವಾನ್ ನೆಲಕ್ಕೆ ನುಗ್ಗಿದರೂ ಅಚ್ಚರಿ ಇಲ್ಲ.

ಅಲ್ಲಿ ಉಕ್ರೇನ್, ಇಲ್ಲಿ ತೈವಾನ್?
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಅಕಸ್ಮಾತ್ ತೈವಾನ್ ವಿರುದ್ಧ ಚೀನಾ ಯುದ್ಧ ಆರಂಭಿಸಿದ್ದೇ ಆದರೆ ಅಮೆರಿಕ ಸುಮ್ಮನೆ ಕೂರುವುದಿಲ್ಲ. ಆಗ ಅನಿವಾರ್ಯವಾಗಿ ದೊಡ್ಡ ಸಂಘರ್ಷ ಏರ್ಪಡುವುದು ಗ್ಯಾರಂಟಿ. ಹೀಗೆ ಕೋಳಿ ಜಗಳ ಮುಂದೆ 3ನೇ ಮಹಾಯುದ್ಧವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ. ಈಗಿನ ಬೆಳವಣಿಗೆಗಳು ತೈವಾನ್ ನಿದ್ದೆ ಮಾತ್ರ ಕೆಡಿಸಿಲ್ಲ, ಅಮೆರಿಕದ ನಿದ್ದೆಯೂ ಹಾರಿಹೋಗುವಂತೆ ಮಾಡಿದೆ.
ತೈವಾನ್ ಇತಿಹಾಸ ಏನು ಹೇಳುತ್ತೆ?
ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ಚೀನಾ ವಿರುದ್ಧ ಗುಟುರು ಹಾಕುತ್ತಾ ಬಂದಿದೆ. ತನ್ನದೇ ಸರ್ಕಾರ ಹೊಂದಿರುವ ಈ ಪುಟಾಣಿ ದ್ವೀಪ ರಾಷ್ಟ್ರದಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ತೈವಾನ್ ನೆಲದಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದಿದೆ.
ಚೀನಾ VS ತೈವಾನ್ ಘರ್ಷಣೆ
ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧದಲ್ಲಿ ಮಾವೋ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆ ಹೊರದಬ್ಬಿತ್ತು. ಬೆಂಬಲಿಗರ ಜೊತೆ ಚಿಯಾಂಗ್ ಬಂದಿದ್ದು ತೈವಾನ್‌ಗೆ. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ 'ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಮತ್ತು ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆಯುತ್ತಾ ಬಂದಿವೆ.
'ಮಿಸ್ಟರ್ ಡೆಮಾಕ್ರಸಿ' ಸಾಧನೆ
ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ನ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಚೀನಾ ವಶವಾಗುವ ಸಾಧ್ಯತೆ ಇತ್ತು. ಆದರೆ ತೈವಾನ್‌ನ 'ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಸಂಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು. ಪ್ರಜಾಪ್ರಭುತ್ವ ರಾಷ್ಟ್ರವಾಗುತ್ತಲೇ ಅಮೆರಿಕದ ಕಣ್ಣು ತೈವಾನ್ ಮೇಲೆ ತೀವ್ರವಾಗಿ ನೆಟ್ಟಿತು.
1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದರು. ಈ ಮೂಲಕ ಚೀನಾಗೆ ಆಘಾತ ಕೊಟ್ಟಿದ್ದರು ಲೀ. ಆದರೆ 97 ವರ್ಷದ ಲೀ 2020ರ ಜುಲೈ 30ರಂದು ನಿಧನರಾಗಿದ್ದರು. ಇಷ್ಟೆಲ್ಲದರ ನಡುವೆ ಅಮೆರಿಕದ ಜೊತೆ ಮತ್ತಷ್ಟು ಸ್ನೇಹ ಬೆಳೆಸುತ್ತಿರುವ ತೈವಾನ್ ನಾಯಕರ ವಿರುದ್ಧ ಚೀನಾ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದೆ. ಮುಂದೆ ಈ ಎಲ್ಲಾ ಬೆಳವಣಿಗೆಗಳು ದೊಡ್ಡ ಯುದ್ಧಕ್ಕೆ ದಾರಿ ಮಾಡಿಕೊಡುತ್ತವಾ? ಎಂಬ ಅನುಮಾನ ಆತಂಕ ಹುಟ್ಟಿಸಿರುವುದು ಸುಳ್ಳಲ್ಲ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications