ದೇಶ ನಡೆಸಲು ಹಣವಿಲ್ಲ: ಅಲ್ಲಾ ಮೇಲೆ ಭಾರ ಹಾಕಿದ ಇಮ್ರಾನ್ ಖಾನ್
ಇಸ್ಲಾಮಾಬಾದ್, ಸೆಪ್ಟೆಂಬರ್ : ನೆರೆಯ ಪಾಕಿಸ್ತಾನವು ಆರ್ಥಿಕ ಸಂಕಷ್ಟದಿಂದ ತತ್ತಿರುಸುತ್ತಿದ್ದು, ಪಾಕ್ ಇಮ್ರಾನ್ ಖಾನ್ ಸ್ವತಃ 'ದೇಶ ನಡೆಸಲು ಹಣವಿಲ್ಲ' ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ದೇಶ ನಡೆಸಲು ಅಗತ್ಯದಷ್ಟು ಹಣ ಇಲ್ಲ, ನಾವು ಬದಲಾಗಬೇಕೆಂದು ಅಲ್ಲಾಹುನೇ ಈ ಸಂಕಷ್ಟವನ್ನು ನಮಗೆ ತಂದೊಡ್ಡಿದ್ದಾನೆ, ನಾವು ಕೂಡಲೇ ಬದಲಾಗಬೇಕಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನವು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಹ ಸಾಧ್ಯವಾಗದ ಸ್ಥಿತಿ ತಲುಪಿದೆ ಎನ್ನಲಾಗುತ್ತಿದೆ.

ಪಾಕಿಸ್ತಾನದ ಈ ಸ್ಥಿತಿಗೆ ಪಾಕ್‌ನ ಮಾಜಿ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಅವರನ್ನು ದೂರಿದ್ದಾರೆ. ಹಿಂದಿನ ಸರ್ಕಾರವು ದುಂದು ವೆಚ್ಚದ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರಿಂದ ಪಾಕಿಸ್ತಾನ ಇಂದು ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
'ದೇಶವು ಸಾಲದ ಸುಳಿಗೆ ಸಿಲುಕಿದೆ, ನಮ್ಮ ರಾಜಕಾರಣಿಗಳು ಬದಲಾಗಬೇಕಿದೆ, ನಮ್ಮ ಜನರೂ ಬದಲಾಗಬೇಕಿದೆ, ನಾವು ಬದಲಾಗಲೆಂದು ಆ ದೇವರೇ ನಮಗೆ ಈ ಸಂಕಷ್ಟವನ್ನು ನೀಡಿದ್ದಾನೆ ಎಂದು ಇಮ್ರಾನ್ ಖಾನ್ ಭಾವುಕರಾಗಿ ನುಡಿದಿದ್ದಾರೆ.
ದೇಶದ ಶೇ 70ರಷ್ಟು ಜನ 30 ವರ್ಷದ ಒಳಗಿನ ಯುವಕರು. ಅವರಿಗೆ ಉದ್ಯೋಗ ಬೇಕಾಗಿದೆ. ಉದ್ಯೋಗಾಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಜನರಿಗೆ ಮೆಟ್ರೋ ಬಸ್ ಸೇವೆ ಒದಗಿಸಲೆಂದು ಸರ್ಕಾರ ಪಡೆದುಕೊಂಡ ಸಾಲಕ್ಕೆ ಬಡ್ಡಿಯಾಗಿ ದೇಶವು ಪ್ರತಿ ವರ್ಷ 600 ಕೋಟಿ ನೀಡುತ್ತಿದೆ ಎಂದು ಅವರು ಕಷ್ಟಗಳನ್ನು ತೆರೆದಿಟ್ಟರು.
ಭಾರಿ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಆರ್ಥಿಕ ನೆರವಿಗಾಗಿ ಹಲವು ದೇಶಗಳತ್ತ ಕೈಚಾಚಿದೆ. ಅರಬ್ ದೇಶಗಳು, ರಷ್ಯಾ, ಅಮೆರಿಕ ದೇಶಗಳನ್ನು ಅದು ಸಹಾಯ ಕೇಳಿದೆ ಎನ್ನಲಾಗಿದೆ.












Click it and Unblock the Notifications