ತೈವಾನ್ ತಲೆದಂಡಕ್ಕೆ ‘ಡ್ರ್ಯಾಗನ್’ ಸೇನೆಯಿಂದ ಭರ್ಜರಿ ಸ್ಕೆಚ್?

ತೈಪೆ/ಬೀಜಿಂಗ್: ಅಮೆರಿಕ, ತೈವಾನ್‌ಗೆ ಬುದ್ಧಿ ಕಲಿಸಲು ಚೀನಾ ರಣತಂತ್ರ ರೂಪಿಸಿದೆ. ಈಗಾಗಲೇ ತೈವಾನ್ ಸುತ್ತ ಬೃಹತ್ ನೌಕಾಪಡೆ ನುಗ್ಗಿಸಿ, ಮಿಲಿಟರಿ ಡ್ರಿಲ್ ನಡೆಸಿ ಎಚ್ಚರಿಕೆ ನೀಡಿರುವ ಚೀನಾ (Chian) ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಅದೇನೆಂದರೆ ತೈವಾನ್ (Taiwan) ವಿರುದ್ಧ ಯುದ್ಧ ಸಾರಿದರೆ ಪರಿಸ್ಥಿತಿ ಹೇಗಿರುತ್ತೆ ಎಂಬುದರ ಸ್ಯಾಂಪಲ್ ತೋರಿಸಿ ನಡುಕ ಹುಟ್ಟಿಸಿದೆ ಡ್ರ್ಯಾಗನ್.

ಚೀನಾ-ತೈವಾನ್ ನಡುವೆ ಆಗಾಗ ಯುದ್ಧದ ವಾತಾವರಣ ನಿರ್ಮಾಣ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಗಂಭೀರವಾಗಿದೆ. ಅದರಲ್ಲೂ ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಕ್ಕೆ ಭೇಟಿ ನೀಡಿದ ತಕ್ಷಣ ತನ್ನ ಶತ್ರು ರಾಷ್ಟ್ರಕ್ಕೆ ಚೀನಾ ಆಘಾತ ನೀಡಿತ್ತು. ತೈವಾನ್ ಸುತ್ತಲೂ ಸಮರಭ್ಯಾಸ ನಡೆಸಿದ ಬಳಿಕ ಇದೀಗ ತೈವಾನ್ ವಿರುದ್ಧ ಯುದ್ಧ ಸಾರಿದರೆ ಹೇಗೆ ದಾಳಿ ಮಾಡುತ್ತೇವೆ ಎಂಬುದರ ವಿಡಿಯೋ ತೋರಿಸಿ ಭಯ ಹುಟ್ಟಿಸಿದೆ.

War warning by the China military to Taiwan with a special animation

ಯುದ್ಧದ ಭೀಕರತೆಗೆ ವಿಡಿಯೋ ಸಾಕ್ಷಿ

ಅಂದಹಾಗೆ ಒಂದು ಸ್ಪೆಷಲ್ ಆನಿಮೇಟೆಡ್ ವಿಡಿಯೋ ಕ್ರಿಯೇಟ್ ಮಾಡಿ, ತಾನು ತೈವಾನ್ ನೆಲವನ್ನು ಹೇಗೆ ನಾಶ ಮಾಡಬಲ್ಲೆ ಎಂಬುದನ್ನ ಚೀನಾ ಸೇನೆ ತೋರಿಸಿದೆ. ಗ್ಲೋಬಲ್ ಟೈಮ್ಸ್ ಈ ವಿಡಿಯೋ ಶೇರ್ ಮಾಡುವ ಮೂಲಕ ತೈವಾನ್ ಮತ್ತು ಅಮೆರಿಕಗೆ ಪರೋಕ್ಷ ಎಚ್ಚರಿಕೆ ರವಾನಿಸಿದೆ. ಚೀನಾದ ಆನಿಮೇಟೆಡ್ ವಿಡಿಯೋ ವೈರಲ್ ಆಗುತ್ತಿದ್ದು, ಪರಿಸ್ಥಿತಿ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಆದರೆ ತೈವಾನ್ ನಾಯಕರಿಂದ ಚೀನಾದ ಈ ನಡೆ ಬಗ್ಗೆ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ.

ಚೀನಾ ಭಯದಲ್ಲಿ ನಡುಗಿದ ತೈವಾನ್

ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅಮೆರಿಕಗೆ ಭೇಟಿ ನೀಡಿ ಬಂದ ನಂತರ ಪರಿಸ್ಥಿತಿ ಕೈಮೀರಿದೆ. 10 ಯುದ್ಧ ನೌಕೆಗಳು ಹಾಗೂ 70ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ತೈವಾನ್ ಸುತ್ತಲೂ ನಿಯೋಜಿಸಿ ಚೀನಾ ಮಿಲಿಟರಿ ಸಮರಾಭ್ಯಾಸ ನಡೆಸಿ ಎಚ್ಚರಿಕೆ ನೀಡಿದ್ದಾಗಿದೆ. ಇದೀಗ ಮತ್ತೊಮ್ಮೆ ತೈವಾನ್ ನಾಯಕರಿಗೆ ತನ್ನ ಶಕ್ತಿ ತೋರಿಸುತ್ತಿದೆ ಚೀನಾ. ತೈವಾನ್ ಸುತ್ತಲೂ ಸಮರಭ್ಯಾಸ ನಡೆಸಿ ಒಂದೆರಡು ದಿನ ಕಳೆಯುವುದರ ಒಳಗೆ, ನಿಜವಾದ ಯುದ್ಧದ ಭೀಕರತೆ ತೋರಿಸಲು ಆನಿಮೇಟೆಡ್ ವಿಡಿಯೋ ರಿಲೀಸ್ ಮಾಡಿದೆ ಚೀನಾ.

ಅಲ್ಲಿ ಉಕ್ರೇನ್, ಇಲ್ಲಿ ತೈವಾನ್?

ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಅಕಸ್ಮಾತ್ ತೈವಾನ್ ವಿರುದ್ಧ ಚೀನಾ ಯುದ್ಧ ಆರಂಭಿಸಿದ್ದೇ ಆದರೆ ಅಮೆರಿಕ ಸುಮ್ಮನೆ ಕೂರುವುದಿಲ್ಲ. ಆಗ ಅನಿವಾರ್ಯವಾಗಿ ದೊಡ್ಡ ಸಂಘರ್ಷ ಏರ್ಪಡುವುದು ಗ್ಯಾರಂಟಿ. ಹೀಗೆ ಕೋಳಿ ಜಗಳ ಮುಂದೆ 3ನೇ ಮಹಾಯುದ್ಧವಾಗಿ ಬದಲಾದರೂ ಅಚ್ಚರಿ ಪಡಬೇಕಿಲ್ಲ.

War warning by the China military to Taiwan with a special animation

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ಚೀನಾ ವಿರುದ್ಧ ಗುಟುರು ಹಾಕುತ್ತಾ ಬಂದಿದೆ. ತನ್ನದೇ ಸರ್ಕಾರ ಹೊಂದಿರುವ ಈ ಪುಟಾಣಿ ದ್ವೀಪ ರಾಷ್ಟ್ರದಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ತೈವಾನ್ ನೆಲದಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದಿದೆ. ಆದರೆ ಈಗ ಅಮೆರಿಕದ ಸಹವಾಸ ಮಾಡಿ ಇಕ್ಕಟ್ಟಿಗೆ ಸಿಲುಕುತ್ತಿದೆ.

ಈಗಿನ ಬೆಳವಣಿಗೆಗಳು ತೈವಾನ್ ನಿದ್ದೆ ಮಾತ್ರ ಕೆಡಿಸಿಲ್ಲ, ಅಮೆರಿಕದ ನಿದ್ದೆಯೂ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಚೀನಾ ಸೇನೆ ಅಕಸ್ಮಾತ್ ತೈವಾನ್ ವಿರುದ್ಧ ಯುದ್ಧ ಸಾರಿದರೆ ಅಮೆರಿಕ ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಲೇಬೇಕು. ಹಾಗೇನಾದರೂ ಮಧ್ಯಪ್ರವೇಶ ಮಾಡಿದರೂ ತೈವಾನ್ ಜೊತೆ ಸಾಕಷ್ಟು ವರ್ಷಗಳ ಕಾಲ ನಿಲ್ಲಲು ಅಮೆರಿಕದ ಸೇನೆಗೆ ಸಾಧ್ಯವಾಗದೇ ಇರಬಹುದು. ಹೀಗಾಗಿ ಚೀನಾ ಸುತ್ತಮುತ್ತಲ ದೇಶಗಳಿಗೆ ಈ ಪರಿಸ್ಥಿತಿ ಗೊಂದಲದ ಗೂಡಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+