ವಿಜಯವಾಡದ ಸುಂದರಿಗೆ ಮಿಸ್ ಇಂಡಿಯಾ ಯುಎಸ್ ಕಿರೀಟ
ಹೈದರಾಬಾದ್, ಡಿ.19: ಅತ್ಯಂತ ಪುರಾತನ ಸೌಂದರ್ಯ ಸ್ಪರ್ಧೆ ಎನಿಸಿರುವ ಮಿಸ್ ಇಂಡಿಯಾ ಯುಎಸ್ಎ 2014 ಕಿರೀಟ ವಿಜಯವಾಡ ಮೂಲದ ತೆಲುಗು ಸುಂದರಿಗೆ ಸಿಕ್ಕಿದೆ.
ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶ ಮೂಲದ ಯುವತಿಗೆ ಈ ಕಿರೀಟ ಸಿಗುತ್ತಿದೆ. ಜಾರ್ಜಿಯಾದಲ್ಲಿ ನೆಲೆಸಿರುವ 19 ವರ್ಷ ವಯಸ್ಸಿನ ಪ್ರಣತಿ ಗಂಗರಾಜು ಅವರು ಈ ಸ್ಪರ್ಧೆ ಗೆದ್ದಿರುವ ಅತ್ಯಂತ ಕಿರಿಯ ವಯಸ್ಸಿನ ಸುಂದರಿಯಾಗಿದ್ದಾರೆ. [ತವರಿನ ಸುಂದರಿಗೆ ಭದ್ರಾವತಿಯಲ್ಲಿ ಭರ್ಜರಿ ಸ್ವಾಗತ]
ಮಿಸ್ ಇಂಡಿಯಾ ಯುಎಸ್ಎ ಭಾರತದಿಂದ ಹೊರಗಡೆ ನಡೆಯುವ ಸೌಂದರ್ಯ ಸ್ಪರ್ಧೆಗಳಲ್ಲಿ ಅತ್ಯಂತ ಹಳೆದೆನಿಸಿದೆ. ನ್ಯೂಜರ್ಸಿಯ ರಾಯಲ್ ಆಲ್ಬರ್ಟ್ ಅರಮನೆಯ ಅಂಗಳದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಣತಿ ಅವರಿಗೆ ಕಿರೀಟ ಧಾರಣೆ ಮಾಡಲಾಯಿತು. [ನೀನಾ ಭಾರತೀಯ ಮೂಲದ ಮೊದಲ 'ಮಿಸ್ ಅಮೆರಿಕ']
2007ರಲ್ಲಿ ಈ ಸೌಂದರ್ಯ ಸ್ಪರ್ಧೆಯಲ್ಲಿ ನಟಿ ರೀಚಾ ಗಂಗೋಪಾಧ್ಯಾಯ್ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಣತಿಯ ಹಿನ್ನೆಲೆ, ಗೆಲುವಿನ ನಂತರ ನೀಡಿದ ಪ್ರತಿಕ್ರಿಯೆ, ಗೆಲುವಿನ ನಂತರದ ಗುರಿಯೇನು? ಎಂಬುದರ ಬಗ್ಗೆ ಮುಂದೆ ಓದಿ

ಮಿಸ್ ಇಂಡಿಯಾ ಯುಎಸ್ ಪ್ರಣತಿ ಹಿನ್ನಲೆ ಏನು?
ಮಿಸ್ ಇಂಡಿಯಾ ಯುಎಸ್ ಪ್ರಣತಿ ವಾರಂಗಲ್ ನ ಹಣಂಕೊಂಡದಲ್ಲಿ ಜನಿಸಿದವರು. ಆಕೆ ತಾಯಿ ಮೈತ್ರೇಯಿ ಶರ್ಮ ಅವರ ತವರೂರಾಗಿದೆ. ಆಕೆ ತಂದೆ ವಿಜಯವಾಡ ಮೂಲದ ರಾಮ್ ಗಂಗರಾಜು ಅಲ್ಲಿ ಸಾಫ್ಟ್ ವೇರ್ ಕಂಪನಿಯೊಂದನ್ನು ನಡೆಸುತ್ತಿದ್ದರು. ನಂತರ ಯುಎಸ್ ಗೆ ಶಿಫ್ಟ್ ಆದರು. ಸದ್ಯ ಪ್ರಣತಿ ಲಾಸ್ ಏಂಜಲೀಸ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರಣತಿ ತಂದೆ ಗಂಗರಾಜು ಪ್ರತಿಕ್ರಿಯೆ
ಆಕೆ ಈ ಸೌಂದರ್ಯ ಸ್ಪರ್ಧೆಗಾಗಿ ಅಹರ್ನಿಶಿ ಶ್ರಮಿಸಿದ್ದಾಳೆ. ಕಥಕ್ ನೃತ್ಯಗಾರ್ತಿಯಾಗಿದ್ದು, ತೆಲುಗು ಯುವತಿ ಎಂದು ಹೆಮ್ಮೆಯಿಂದ ಜಗತ್ತಿನ ಮುಂದೆ ಹೇಳಿಕೊಂಡಿದ್ದಾಳೆ ಅದರಂತೆ ನಡೆದುಕೊಳ್ಳುತ್ತಿದ್ದಾಳೆ ಇದು ಎಲ್ಲಾ ಪೋಷಕರಿಗೆ ಹೆಮ್ಮೆಯ ವಿಚಾರವಾಗಿದೆ.

ನಟನೆಯಲ್ಲೂ ಸುಂದರಿ ಪ್ರಣತಿಗಿದೆ ಆಸಕ್ತಿ
ಲೆಸ್ ಸ್ಟಾರ್ಸ್ ಬರ್ಗ್ ಸ್ಕೂಲ್ ಆಫ್ ಆಕ್ಟಿಂಗ್ ಹಾಗೂ ಥಿಯೇಟರ್ ನ ಉದಯೋನ್ಮುಖ ವಿದ್ಯಾರ್ಥಿಯಾಗಿ ಪ್ರಣತಿ ಹೊರಹೊಮ್ಮಿದ್ದಾರೆ. ಮರ್ಲಾನ್ ಬ್ರಾಂಡೋ, ಹೆಪ್ ಬರ್ನ್, ಸ್ಕಾರ್ಲೆಟ್ ಜಾನ್ಸಸ್, ರಾಬರ್ಟ್ ಡಿನಿರೋ, ಆಲ್ ಪಾಚಿನೋ ಮುಂತಾದ ತಾರೆಗಳನ್ನು ಜಗತ್ತಿಗೆ ಇದೇ ಶಾಲೆ ಪರಿಚಯಿಸಿದ್ದು ಎಂಬುದು ವಿಶೇಷ.

ಮಿಸ್ ಇಂಡಿಯಾ ಯುಸ್ ಆಸಕ್ತಿಗಳೇನು
ಬರವಣಿಗೆ, ಹಾಡುಗಾರಿಕೆ, ಕಥಕ್ ನೃತ್ಯ, ಈಜುಗಾರಿಕೆ ಈಕೆ ಆಸಕ್ತಿ ವಿಷಯಗಳು ಮಿಸ್ ಇಂಡಿಯಾ ವರ್ಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಯುಎಸ್ಎ ಪ್ರತಿನಿಧಿಯಾಗಿ ಈಕೆ ಭಾಗವಹಿಸಲಿದ್ದಾರೆ. 2016ರಲ್ಲಿ ಗೋವಾದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ನನ್ನ ಯಶಸ್ಸಿಗೆ ನನ್ನ ಪೋಷಕರೇ ಕಾರಣ ಎನ್ನುವ ಪ್ರಣತಿಗೆ ಮಿಸ್ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿಯೂ ಸಿಕ್ಕಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications