Donald Trump: ಡೊನಾಲ್ಡ್ ಟ್ರಂಪ್ ಹೊಸ ವಲಸೆ ನೀತಿ, ತೃತೀಯ ಜಗತ್ತಿನ ದೇಶಗಳು ಅಂದ್ರೆ ಯಾವುವು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಗಳು ಒಂದಲ್ಲ ಒಂದು ರೀತಿಯಲ್ಲಿ ಜಗತ್ತಿನಾದ್ಯಂತ ಈಗ ತಲ್ಲಣ ಸೃಷ್ಟಿ ಮಾಡುತ್ತಿವೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಕೈಗೊಂಡಿರುವ ನಿರ್ಧಾರಗಳ ಪೈಕಿ ತೆರಿಗೆ ಹೇರಿಕೆ ವಿಚಾರ ಭಾರಿ ದೊಡ್ಡ ಕಲಹಕ್ಕೆ ಕಾರಣವಾಗಿ, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ನಡುವೆಯೇ ದೊಡ್ಡ ಕಲಹಕ್ಕೆ ವೇದಿಕೆ ಸೃಷ್ಟಿ ಮಾಡಿತ್ತು. ಈ ತಿಕ್ಕಾಟ ಮುಗಿದ ನಂತರ ಈಗ ಅಮೆರಿಕಗೆ ವಲಸೆ ಬರುವ ದೇಶಗಳ ಪ್ರಜೆಗಳ ವಿಚಾರದಲ್ಲೂ ಕ್ರಾಂತಿಕಾರಿ ಬದಲಾವಣೆ ತರಲು ಟ್ರಂಪ್ ಮುಂದಾಗಿದ್ದಾರೆ!

ಹೌದು, ಅಮೆರಿಕ ಅಧ್ಯಕ್ಷರ ಅಧಿಕೃತ ಸರ್ಕಾರಿ ನಿವಾಸ ಶ್ವೇತಭವನ ಬಳಿ ಅಫ್ಘಾನ್ ಪ್ರಜೆ ನಡೆಸಿದ ಭೀಕರ ದಾಳಿ ಈಗ ಕಿಚ್ಚು ಹೊತ್ತಿಸಿದೆ. ಅಮೆರಿಕದ ಇಬ್ಬರು ನ್ಯಾಷನಲ್ ಗಾರ್ಡ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಆತಂಕ ಹುಟ್ಟಿಸಿದ್ದ ಈತ. ಇಂತಹ ಘಟನೆಗಳು ಅಮೆರಿಕದ ಬಗ್ಗೆ ಪ್ರಪಂಚದಲ್ಲಿ ಮತ್ತಷ್ಟು ಆತಂಕ ಮೂಡುವಂತೆ ಮಾಡಿದ್ದವು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ದಿಢೀರ್ ಟ್ರಂಪ್ ಆಡಳಿತ ತೃತೀಯ ಜಗತ್ತಿನ ದೇಶಗಳ ವಿರುದ್ಧ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಹಾಗಾದರೆ ಈ ತೃತೀಯ ಜಗತ್ತಿನ ದೇಶಗಳು ಯಾವುವು? ಇವರೆಲ್ಲರಿಗೂ ಅಮೆರಿಕ ಪ್ರವೇಶ ಇನ್ನುಮುಂದೆ ಭಾರಿ ದೊಡ್ಡ ಸವಾಲು ತರಲಿದೆಯೇ?

US President Donald Trump Announces Permanent Pause on Migration from Third World Countries

ಸೇಡಿಗೆ ಸೇಡು ಎಂದ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರೊಚ್ಚಿಗೆದ್ದು ಕೂತಿದ್ದಾರೆ, ಅದರಲ್ಲೂ ಅಮೆರಿಕ ನೆಲದಲ್ಲಿ ಬೇರೆ ದೇಶಗಳಿಂದ ಬಂದವರು ದಾಳಿ ಮಾಡುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ ಇದೀಗ ಹೊಸ ಆದೇಶ ಹೊರಡಿಸಿದ್ದಾರೆ. ವಾಷಿಂಗ್ಟನ್‌ ಡಿಸಿ ಭಯಾನಕ ದಾಳಿ ನಂತರ ನ್ಯಾಷನಲ್ ಗಾರ್ಡ್ ಸೈನಿಕರಲ್ಲಿ ಒಬ್ಬರು ಸಾವನ್ನಪ್ಪಿದ ವಿಚಾರ ಕಿಚ್ಚು ಹೊತ್ತಿಸಿದ್ದು, ಈ ಬೆನ್ನಲ್ಲೇ ಅಫ್ಘಾನ್ ಸೇರಿ 19 ದೇಶಗಳ ವಲಸಿಗರ ಪಟ್ಟಿಯ ರಿಲೀಸ್ ಮಾಡಿದೆ ಅಮೆರಿಕ. ಈ ದೇಶಗಳಿಂದ ಯಾವುದೇ ಪ್ರಜೆಗಳು ಇನ್ಮುಂದೆ ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಹಾಗಾದರೆ ಇನ್ನುಳಿದ ದೇಶಗಳು ಯಾವುವು? ಮುಂದೆ ಓದಿ.

ಹಲವು ದೇಶಗಳ ಪ್ರಜೆಗಳಿಗೆ ಸಂಕಷ್ಟ!

ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಹಿನ್ನೆಲೆ, ಮ್ಯಾನ್ಮಾರ್, ಛಾದ್, ಕಾಂಗೋ-ಬ್ರಾಜಾವಿಲ್ಲೆ ಸೇರಿದಂತೆ ಲಿಬಿಯಾ, ಸೊಮಾಲಿಯಾ, ಸುಡಾನ್, ಯೆಮೆನ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ್ ಹಾಗೂ ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾದ ನೆಲದಿಂದ ಬಂದು ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆದಿದ್ದ ಪ್ರಜೆಗಳು ಪರಿಶೀಲನೆಗೆ ಒಳಪಡಲಿದ್ದು, ಭವಿಷ್ಯದಲ್ಲಿ ಈ ದೇಶದ ಪ್ರಜೆಗಳು ಅಮೆರಿಕಗೆ ಬಂದು ನೆಲೆಸುವುದು ಕನಸಾಗಿಯೇ ಉಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+