Ukraine War: ಉಕ್ರೇನ್ ಅಧ್ಯಕ್ಷ & ಅಮೆರಿಕ ಅಧ್ಯಕ್ಷರ ನಡುವೆ ಮಹತ್ವದ ಚರ್ಚೆ, ಯುದ್ಧಕ್ಕೆ ಬ್ರೇಕ್?

ಹಿಂಸೆ.. ಹಿಂಸೆ.. ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಬರೀ ಹಿಂಸಾಚಾರವೇ ಅಟ್ಟಹಾಸ ಮೆರೆಯುತ್ತಿದೆ. ಲಕ್ಷಾಂತರ ಜನರ ಜೀವ ಹೋಗಿದ್ದು, ಜಾಗತಿಕ ಮಟ್ಟದಲ್ಲೂ ಈ ಬಗ್ಗೆ ಭಾರಿ ಆಕ್ರೋಶ ಮೊಳಗಿದೆ. ಇದರ ಜೊತೆಗೆ ಯುರೋಪ್ ದೇಶಗಳು ಭಾರಿ ದೊಡ್ಡದಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಪರಿಸ್ಥಿತಿ ಹಿಂಗೆ ಇದ್ರೆ ಮುಂದೆ ತುತ್ತು ಅನ್ನ ಪಡೆಯುವುದು ಕೂಡ ಕಷ್ಟಕರ ಆಗಲಿದೆ. ಇಷ್ಟೆಲ್ಲದರ ನಡುವೆ, ಉಕ್ರೇನ್ ಅಧ್ಯಕ್ಷ & ಅಮೆರಿಕ ಅಧ್ಯಕ್ಷರ ಮಧ್ಯೆ ಮಹತ್ವದ ಚರ್ಚೆ ಶುರುವಾಗಿದೆ.

ರಷ್ಯಾ & ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಬೇಕು ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ಪ್ರಯತ್ನ ಮಾಡಿ, ಸೌದಿ ಅರೇಬಿಯಾದಲ್ಲಿ ಮಹತ್ವದ ಸಭೆ ಕೂಡ ನಡೆಸಿದ್ದರು. ಆದರೆ ಟ್ರಂಪ್ ಮಾಡುತ್ತಿರುವ ಪ್ರಯತ್ನಗಳು ಫಲ ನೀಡಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ನಿಂತಿಲ್ಲ, ಎರಡು ದೇಶಗಳು ಈಗಲೂ ಬಡಿದಾಟ ಮುಂದುವರಿಸಿವೆ. ರಷ್ಯಾ & ಉಕ್ರೇನ್ ಈ ರೀತಿ ಕಿತ್ತಾಡುತ್ತಿದ್ದರೆ ಅಮೆರಿಕಗೆ ಟೆನ್ಷನ್ ಜಾಸ್ತಿ ಆಗುತ್ತಿದೆ. ಹೀಗಾಗಿ ಭಾರಿ ಚರ್ಚೆ ಮುಂದುವರಿದಿದ್ದು, ಇದೇ ಸಮಯದಲ್ಲಿ ಟ್ರಂಪ್ & ಉಕ್ರೇನ್ ಅಧ್ಯಕ್ಷರ ನಡುವೆ ಸಭೆ ನಡೆಯುತ್ತಿದೆ.

US President Donald Trump and Ukraine s Zelensky Engage in Brief Talks

ಟ್ರಂಪ್ ಕಡೆಯಿಂದ ಮಹತ್ವದ ಮೀಟಿಂಗ್

ಕಳೆದ 3 ವರ್ಷಗಳಿಂದಲೂ ಸತತವಾಗಿ ಬಡಿದಾಡುತ್ತಿರುವ ರಷ್ಯಾ & ಉಕ್ರೇನ್ ಸೇನೆಗಳು ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿವೆ. ಮತ್ತೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಯುದ್ಧ ನಿಲ್ಲಿಸಲು ಎಲ್ಲ ರೀತಿ ಪ್ರಯತ್ನ ಮಾಡಿ ಸೋತು ಹೋಗಿದ್ದಾರೆ. ಈ ವಿಚಾರದಲ್ಲಿ ರಷ್ಯಾ ತನ್ನ ನಿಲುವು ಬದಲಿಸಿಲ್ಲ, ಹೀಗಾಗಿ ಉಕ್ರೇನ್ ಕೂಡ ಸೋತು ಶರಣಾಗುವ ಲಕ್ಷಣ ಕಾಣಿಸುತ್ತಿಲ್ಲ ಎನ್ನಬಹುದು. ಇಬ್ಬರ ಜಗಳ ಹೀಗೆ ಮುಂದುವರಿದಿದ್ದು, ಇದೀಗ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ಮೀಟಿಂಗ್ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+