Get Updates
Get notified of breaking news, exclusive insights, and must-see stories!

ಮನುಷ್ಯರ ಭವಿಷ್ಯ ಕಾಪಾಡುತ್ತಾ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧಾರ?

ಮನುಷ್ಯನೇ ಹೀಗೆ ಒಂದು ಕೆಲಸ ಮಾಡು ಅಂದ್ರೆ ಅದರ ಜೊತೆಯಲ್ಲಿ ಇನ್ನೂ ಏನೇನೋ ಸಮಸ್ಯೆ ಹೊತ್ತು ತರುತ್ತಾನೆ. ಅದರಲ್ಲೂ ತಂತ್ರಜ್ಞಾನದ ವಿಚಾರದಲ್ಲಿ ಮನುಷ್ಯ ಮಾಡಿದ ತಪ್ಪುಗಳು ಒಂದಲ್ಲ, ಎರಡಲ್ಲ. ಹೀಗಿದ್ರೂ ದಿನದಿಂದ ದಿನಕ್ಕೆ, ಕ್ಷಣಕ್ಷಣಕ್ಕೂ ತಂತ್ರಜ್ಞಾನ ಅಭಿವೃದ್ಧಿ ಮಾಡಲು ಮನುಷ್ಯ ಮುಂದಾಗುತ್ತಿದ್ದ. ಈ ಪೈಕಿ 'ಕೃತಕ ಬುದ್ಧಿಮತ್ತೆ' ಅಂದ್ರೆ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಮನುಷ್ಯರ ಭವಿಷ್ಯವನ್ನೇ ಕಸಿಯುತ್ತಿದೆ.

ಮನುಷ್ಯ ತನ್ನ ಬದುಕನ್ನು ಸುಲಭ ಮಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗುತ್ತಿದ್ದ. ಆದ್ರೆ ಎಐ ಅಥವಾ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಇದೆಯಲ್ಲ ಇದರ ಮೂಲಕ ಥೇಟ್ ಮನುಷ್ಯರ ರೀತಿ ಕೆಲಸ ಮಾಡಬಲ್ಲ 'ಕೃತಕ ಬುದ್ಧಿಮತ್ತೆ' ರಚಿಸುತ್ತಿದ್ದ. ಇದೇ ತಂತ್ರಜ್ಞಾನ ಆರಂಭಿಕ ಹಂತದಲ್ಲಿ, ಇಡೀ ಜಗತ್ತಿಗೆ ಭಯ ಹುಟ್ಟಿಸುತ್ತಿದೆ. ಹೀಗಾಗಿ ತಜ್ಞರಿಂದಲೂ ಇದರ ಬಗ್ಗೆ ಭಯದ ಮಾತುಗಳು ಶುರುವಾಗಿದ್ದವು. ಅದ್ರಲ್ಲೂ ಅಮೆರಿಕದಲ್ಲಿ ಆತಂಕ ಹೆಚ್ಚಿಸಿತ್ತು ಎಐ ತಂತ್ರಜ್ಞಾನ, ಇದೇ ಕಾರಣಕ್ಕೆ ಅಲರ್ಟ್ ಆದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಐ (AI) ತಂತ್ರಜ್ಞಾನ ನಿಯಂತ್ರಿಸುವ ಕ್ರಮಕ್ಕೆ ಮುಂದಾಗಿದ್ದಾರೆ.

US President Biden Has Been Signed To An Important Procedure To Control The Artificial Intelligence

ಜೋ ಬೈಡನ್ ಕ್ರಮದಿಂದ ಏನಾಗುತ್ತೆ?

ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದ ಅಮೆರಿಕ, ಜಗತ್ತಿನಲ್ಲಿ ಯಾವುದೇ ತಂತ್ರಜ್ಞಾನ ಬಂದರೂ ಅದು ತನ್ನಲ್ಲೇ ಕೇಂದ್ರಿಕೃತವಾಗಿ ಇರಬೇಕು ಎಂದು ಬಯಸುತ್ತದೆ. ಇದೇ ಕಾರಣ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಭಿವೃದ್ಧಿ ಕೂಡ, ಅಮೆರಿಕದಲ್ಲಿ ವೇಗವಾಗಿ ಸಾಗುತ್ತಿತ್ತು. ಇಷ್ಟೆಲ್ಲದರ ಮಧ್ಯೆ ಇದು ಸಾಗುತ್ತಿದ್ದ ರೀತಿ ನೋಡಿದರೆ ಭಯ ಹುಟ್ಟಿಸುವಂತಿತ್ತು. ಅಲ್ಲದೆ ಭವಿಷ್ಯದಲ್ಲಿ ಮನುಷ್ಯರಿಗೆ ಇದರಿಂದ ದೊಡ್ಡ ಸಮಸ್ಯೆ ಪಕ್ಕಾ ಎಂಬ ಮಾತು ಪ್ರಪಂಚದ ಮೂಲೆ ಮೂಲೆಯಲ್ಲೂ ಕೇಳಿಬರುತ್ತಿತ್ತು. ಇದೇ ಕಾರಣಕ್ಕೆ ಎಐ ನಿಯಂತ್ರಿಸುವ ಕಾನೂನು ಜಾರಿಗೆ ತರಲು ಜೋ ಬೈಡನ್ ಸಹಿ ಹಾಕಿದ್ದಾರೆ.

ಸಮಾಜ ಉಳಿಸಲು ಇಂತಹ ನಿರ್ಧಾರ!

ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಮಾತನಾಡಿ, 'ಕೃತಕ ಬುದ್ಧಿಮತ್ತೆ' ಬಗ್ಗೆ ನಾವು ಅರಿತುಕೊಳ್ಳಬೇಕಿದೆ. ಆ ಮೂಲಕ ಅಪಾಯವನ್ನು ತಪ್ಪಿಸಲು ಅದನ್ನ ನಿಯಂತ್ರಿಸಿ ಭವಿಷ್ಯದಲ್ಲಿ ಆಗುವ ಅಪಾಯ ತಪ್ಪಿಸಬಹುದಾಗಿದೆ ಎಂದಿದ್ದಾರೆ. ಹೀಗೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಅಮೆರಿಕ ಮಹತ್ವದ ಕಾನೂನಿಗೆ ಸಹಿ ಹಾಕಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದಿಂದ ಮುಂದೆ ಆಗಬಹುದಾದ ಸಮಸ್ಯೆ ತಪ್ಪಿಸಲು ಮುಂದಾಗಿದೆ. ಅಲ್ಲದೆ ಈ ವೇಳೆ ಎಐ ಅಪಾಯದ ಕುರಿತು ಮತ್ತಷ್ಟು ವಿರಣೆ ನೀಡಿರುವ ಬೈಡನ್, ಎಐ ತಂತ್ರಜ್ಞಾನ ತಪ್ಪು ಮಾಡುವವರ ಕೈಗೆ ಹೋಗಬಾರದು. ಇದರಿಂದಾಗಿ, ಮುಂದೆ ಹ್ಯಾಕರ್ಸ್‌ ಕೈಗೆ ಎಐ ಸಿಕ್ಕರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.

US President Biden Has Been Signed To An Important Procedure To Control The Artificial Intelligence

ಮನುಷ್ಯರ ಮೇಲೆ 'ಎಐ' ಅಟ್ಯಾಕ್?

ತಂತ್ರಜ್ಞಾನ ಮನುಷ್ಯರ ಭವಿಷ್ಯ ಬೆಳಗಲು ಇರಬೇಕೆ ವಿನಃ, ಮನುಷ್ಯರ ಭವಿಷ್ಯ ಹಾಳು ಮಾಡಲು ಇರಬಾರದು. ಪರಿಸ್ಥಿತಿ ಹೀಗೆ ಕೈಮೀರಿ ಹೋದರೆ ಮನುಷ್ಯರ ಕುರುಹು ಕೂಡ ಭೂಮಿ ಮೇಲೆ ಉಳಿಯುವುದಿಲ್ಲ. ಎಲ್ಲವನ್ನೂ 'ಎಐ' ಅಂದ್ರೆ 'ಕೃತಕ ಬುದ್ಧಿಮತ್ತೆ' ತನ್ನ ಕೈವಶ ಮಾಡಿಕೊಳ್ಳುತ್ತೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂಬ ಮಾತನ್ನು ತಜ್ಞರು ಹೇಳುತ್ತಿದ್ದರು. ಈ ಕುರಿತು ಜಗತ್ತಿನ ದೊಡ್ಡ ದೊಡ್ಡ ಸಂಸ್ಥೆಗಳ ಮುಖ್ಯಸ್ಥರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿತ್ತು. ಈ ಎಲ್ಲಾ ಚರ್ಚೆಗಳ ಫಲವಾಗಿ ಇದೀಗ ಅಮೆರಿಕ ಮಹತ್ವದ ಕಾನೂನು ಜಾರಿಗೆ ತರಲು ಮುಂದೆ ಬಂದಿದೆ.

ದುರ್ಬಳಕೆ ಆಗದಂತೆ ಫುಲ್ ಅಲರ್ಟ್!

ಇದಿಷ್ಟೇ ಅಲ್ಲ, ಅಮೆರಿಕದ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ & ಟೆಕ್ನಾಲಜಿ' ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಗ್ಗೆ ಕಾನೂನು ರೂಪಿಸಲಿದೆ. ಈ ನಿಯಮದ ಅಡಿಯಲ್ಲೇ ಭವಿಷ್ಯದಲ್ಲಿ ಎಐ ಬಗ್ಗೆ ಸಂಶೋಧನೆ ನಡೆಸುವಂತೆ ಅಮೆರಿಕ ಸರ್ಕಾರ ಇದೀಗ ಸೂಚಿಸಿದೆ. ಜೊತೆಗೆ ಅಮೆರಿಕದಲ್ಲಿ ಇರುವ ಪ್ರಮುಖ 'ಎಐ' ಸಂಶೋಧನಾ ಸಂಸ್ಥೆಗಳು ಪ್ರತಿಯೊಂದು ವಿಚಾರ ತಿಳಿಸಲು ಸೂಚಿಸಲಾಗಿದೆ. ಈ ಮೂಲಕ, ಯಾವುದೇ ರೀತಿಯ ಎಐ ತಂತ್ರಜ್ಞಾನ ದುರ್ಬಳಕೆ ಆಗದಂತೆ ದೊಡ್ಡಣ್ಣ ಅಮೆರಿಕದ ಸರ್ಕಾರ ಎಚ್ಚರಿಕೆ ವಹಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+