ಅಮೆರಿಕ ಮತ್ತು ಇರಾನ್ ನಡುವೆ ಮತ್ತೊಂದು ಸುತ್ತಿನ ಮಾತುಕತೆ, ಅಂತಿಮ ಒಪ್ಪಂದಕ್ಕೆ ಸಹಿ ಸಾಧ್ಯತೆ | US Military

ಅಮೆರಿಕ ಹಾಗೂ ಇರಾನ್ ವಿಚಾರವೇ ಇದೀಗ ಜಗತ್ತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಇಬ್ಬರ ನಡುವೆ ಯುದ್ಧ ನಡೆಯದಂತೆ ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಆ ಎಲ್ಲಾ ಪ್ರಯತ್ನಗಳು ಈವರೆಗೂ ವಿಫಲವಾಗಿದ್ದು, ಮಧ್ಯಪ್ರಾಚ್ಯ ಬೂದಿ ಮುಚ್ಚಿದ ಕೆಂಡವಾಗಿದೆ. ಹೀಗೆ ಇದ್ದಾಗ ಏನಾದರೂ ಮಾಡಿ ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ಮಾಡಿಸಬೇಕೆಂದು ಪಣತೊಟ್ಟಿರುವ ಮಧ್ಯಪ್ರಾಚ್ಯದ ಶ್ರೀಮಂತ ದೇಶ ಒಮಾನ್, ಮತ್ತೊಂದು ಸುತ್ತಿನ ಮಾತುಕತೆಗೆ ಈಗ ವೇದಿಕೆ ಸಜ್ಜುಗೊಳಿಸಿದೆ. ಫೆಬ್ರವರಿ 24ರ ಮಂಗಳವಾರ ಅಮೆರಿಕ ಹಾಗೂ ಇರಾನ್ ನಡುವೆ 3ನೇ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆ ಮೂಡಿದೆ.

ಅಮೆರಿಕ & ಇರಾನ್ ಶಾಂತಿ ಒಪ್ಫಂದಕ್ಕೆ ಅಡ್ಡಿ ಆಗಿರುವುದೇ ಖಮೇನಿ ಎಂಬ ಗಂಭೀರ ಆರೋಪ ಇದೆ. ಖಮೇನಿ ಇರಾನ್ ದೇಶದ ಸರ್ವಾಧಿಕಾರಿ ಹಾಗೂ ಕಳೆದ ಹತ್ತಾರು ವರ್ಷಗಳಿಂದಲೂ ಇರಾನ್ ನೆಲದಲ್ಲಿ ಖಮೇನಿ ಮಾತೇ ಅಂತಿಮ ಎನ್ನುವ ಪರಿಸ್ಥಿತಿ ಇದೆ. ಯಾರೇ ಅಧ್ಯಕ್ಷರಾಗಿ ಇರಾನ್ ದೇಶದಲ್ಲಿ ಆಯ್ಕೆ ಆದರೂ ಖಮೇನಿ ಮಾತು ಕೇಳಲೇಬೇಕು, ಇಲ್ಲವಾದರೆ ಅವರ ಕಥೆ ಮುಗಿದು ಹೋಗುತ್ತದೆ ಎನ್ನುವ ಆರೋಪ ಕೂಡ ಇದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಖಮೇನಿ ಬಗ್ಗೆ ಆಕ್ರೋಶ ಹೊರ ಹಾಕುತ್ತಿವೆ. ಇಂತಹ ಸಮಯದಲ್ಲೇ ಇರಾನ್ & ಅಮೆರಿಕ ನಡುವೆ ಸಂಧಾನದ ವೇಳೆ ಖಮೇನಿ ಕೈಹಾಕಿ ಕೆಡಿಸುತ್ತಿರುವ ಆರೋಪ ಇದ್ದು, ಈ ಬಾರಿ ಒಪ್ಪಂದ ಆಗದೇ ಇದ್ದರೆ ಆಗ ನೇರವಾಗಿ ಸೇನಾ ಕಾರ್ಯಾಚರಣೆ ಕೈಗೊಳ್ಳಲು ಅಮೆರಿಕ ಚಿಂತನೆ ನಡೆಸುತ್ತಿದೆ.

US Military

ಇರಾನ್ ಸರ್ವಾಧಿಕಾರಿ ಖಮೇನಿಯದ್ದೇ ಚಿಂತೆ

ಮಂಗಳವಾರ ನಡೆಯಲಿರುವ ಅಮೆರಿಕ & ಇರಾನ್ ಶಾಂತಿ ಮಾತುಕತೆಗೆ ಮತ್ತೊಮ್ಮೆ ಜಿನೇವಾ ವೇದಿಕೆ ಒದಗಿಸಲಿದ್ದು, ಈ ಸಮಯದಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿದೆ. ಪ್ರಮುಖವಾಗಿ ಪರಮಾಣು ಅಸ್ತ್ರಗಳ ವಿಚಾರದಲ್ಲಿ ಎರಡೂ ದೇಶಗಳು ಕೊನೆಯ ಹಂತದ ತೀರ್ಮಾನ ಕೈಗೊಳ್ಳುವ ಸಾಧ್ಯತೆಯು ದಟ್ಟವಾಗಿದೆ. ಆದರೆ ಇದಕ್ಕೆ ಇರಾನ್ ಸರ್ವಾಧಿಕಾರಿ ಖಮೇನಿ ಒಪ್ಪಿಗೆ ಸಿಗುತ್ತಾ? ಎಂಬ ಪ್ರಶ್ನೆ ಕೂಡ ಇದೀಗ ಕಾಡುತ್ತಿದೆ. ನೋಡ ನೋಡುತ್ತಲೇ ಹಲವು ಮಾತುಕತೆಗಳಲ್ಲಿ ಮೂಗು ತೂರಿಸಿ ಇದೀಗ ಖಮೇನಿ ಒಪ್ಪಂದ ಹಾಳು ಮಾಡಿರುವ ಆರೋಪ ಕೂಡ ಇದ್ದು, ಅಮೆರಿಕ ಕೂಡ ಈ ವಿಚಾರದಲ್ಲಿ ರೊಚ್ಚಿಗೆದ್ದು ಕೂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+