US-Election 2024: ಅಮೆರಿಕ ಚುನಾವಣೆಯಲ್ಲಿ ದಾಖಲೆ ಬರೆದವರಿಗೆ ಬೆಂಗಳೂರು ನಂಟು!

ವಾಷಿಂಗ್ಟನ್, ನವೆಂಬರ್ 06: ಅಮೆರಿಕದ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಮೂಲದ 6 ಜನರು ಆಯ್ಕೆಯಾಗಿದ್ದಾರೆ. ಅಮೆರಿದ ಅಧ್ಯರಾಗುವುದು ಯಾರು? ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈಗಾಗಲೇ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರಿಗಂತ ರಿಪಬ್ಲಿಕನ್ ಪಕ್ಷದ ಡೊನಾಲ್ಡ್‌ ಟ್ರಂಪ್ ಮುನ್ನಡೆ ಪಡೆದಿದ್ದು, 2ನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಲಿದ್ದಾರೆ.

2024ರ ಅಮೆರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಂ ಹೊಸ ದಾಖಲೆಯನ್ನು ಬರೆದಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾದ ಅವರು ವರ್ಜೀನಿಯಾ ಮತ್ತು ಇಡೀ ಪೂರ್ವ ಕರಾವಳಿ ಭಾಗದಿಂದ ಚುನಾಯಿತರಾದ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

US Elections 2024 Suhas Subramanyam Created History

ವರ್ಜೀನಿಯಾ ಮತ್ತು ಇಡೀ ಪೂರ್ವ ಕರಾವಳಿ ಡೆಮಾಕ್ರಟಿಕ್ ಪಕ್ಷದ ಭದ್ರಕೋಟೆ ಎಂದೇ ಹೇಳಲಾಗುತ್ತದೆ. ರಿಪಬ್ಲಿಕನ್ ಪಕ್ಷದ ಮೈಕ್ ಕ್ಲಾನ್ಸಿ ಅವರನ್ನು ಸೋಲಿಸುವ ಮೂಲಕ ಹೊಸ ದಾಖಲೆಯನ್ನು ಸುಹಾಸ್ ಸುಬ್ರಮಣ್ಯಂ ಬರೆದಿದ್ದಾರೆ. ಈಗ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅಧ್ಯಕ್ಷರಾಗದಿದ್ದರೂ ಆ ಪಕ್ಷದ ಅಭ್ಯರ್ಥಿ ಗೆಲುವು ಕಂಡಿದ್ದಾರೆ.

ಸುಹಾಸ್ ಸುಬ್ರಮಣ್ಯಂ ಪ್ರತಿಕ್ರಿಯೆ: ಚುನಾವಣಾ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿದ 38 ವರ್ಷದ ಸುಹಾಸ್ ಸುಬ್ರಮಣ್ಯಂ, "ನನ್ನ ಮೇಲೆ ನಂಬಿಕೆ ಇಟ್ಟಿರುವ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟ್ರಿಕ್ಟ್‌ನ ಜನರಿಗೆ ನನ್ನ ಧನ್ಯವಾದಗಳು. ಇಲ್ಲಿನ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಈ ಜಿಲ್ಲೆಗೆ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿದೆ" ಎಂದು ಹೇಳಿದರು.

"ನನ್ನ ತಾಯಿ ಬೆಂಗಳೂರು ನಗರದವರು. ತಂದೆ ಚೆನ್ನೈನವರು. ಮೊದಲು ಅವರು ಸಿಕಂದರಾಬಾದ್‌ನಲ್ಲಿದ್ದರು. ಆ ಬಳಿಕ 70ರ ದಶಕದಲ್ಲಿಯೇ ಅವರು ಅಮೆರಿಕಾಗೆ ಬಂದು ನೆಲೆಸಿದರು" ಎಂದು ಸುಹಾಸ್ ಸುಬ್ರಮಣ್ಯಂ ತಿಳಿಸಿದ್ದಾರೆ.

ಅಮೆರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್, ಶ್ರೀ ಥಾನೇದಾರ್‌ ಮತ್ತು ಸುಹಾಸ್ ಸುಬ್ರಮಣ್ಯಂ ಜಯಗಳಿಸಿದ್ದಾರೆ.

ಸುಹಾಸ್ ಸುಬ್ರಮಣ್ಯಂ ಅಮೆರಿಕದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ ತಂತ್ರಜ್ಞಾನ ಸಲಹೆಗಾರರಾಗಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ವಲಸೆ ಕಾನೂನಿನ ಸುಧಾರಣೆ, ಹಸಿರು ಕಾರ್ಡ್ ಕೋಟಾ, ಆರೋಗ್ಯ ಸೌಲಭ್ಯಗಳು, ಉತ್ತಮವಾದ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಕುರಿತು ಮಾತನಾಡಿದ್ದರು.

ಚುನಾವಣಾ ಚರ್ಚೆಯೊಂದರಲ್ಲಿ ಮಾತನಾಡಿದ್ದ ಅವರು, "ನಾವು ಕಾನೂನುಬದ್ಧ ವಲಸೆಯನ್ನು ಬೆಂಬಲಿಸಬೇಕಾಗಿದೆ. ಕಾಂಗ್ರೆಸ್ ಮತ್ತು ನಾನು ಅದನ್ನು ಮಾಡಲಿದ್ದೇನೆ. ಈ ಸಮಸ್ಯೆಗಳನ್ನು ಪರಿಹರಿಸಲು ನಾವು ಉಭಯಪಕ್ಷೀಯ ರೀತಿಯಲ್ಲಿ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದರು.

ವೆಬ್‌ಸೈಟ್‌ನ ಪ್ರಕಾರ ಸುಹಾಸ್ ಸುಬ್ರಮಣ್ಯಂ ಅವರ ಪೋಷಕರು 1979ರಲ್ಲಿ ಅಮೆರಿಕಕ್ಕೆ ವಲಸೆ ಬಂದರು. ನ್ಯೂ ಓರ್ಲಿಯನ್ಸ್‌ನ ಟುಲೇನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ.

ಚುನಾವಣೆಯಲ್ಲಿ ಗೆದ್ದಿರುವ ಸುಹಾಸ್ ಸುಬ್ರಮಣ್ಯಂ ಯುಎಸ್ ಕಾಂಗ್ರೆಸ್‌ನ ಭಾರತೀಯ-ಅಮೆರಿಕನ್ ಶಾಸಕರ ಗುಂಪು 'ಸಮೋಸಾ ಕಾಕಸ್'ನ ಹೊಸ ಸದಸ್ಯರಾಗಲಿದ್ದಾರೆ. ದಕ್ಷಿಣ ಏಷ್ಯಾ ಮೂಲದ, ವಿಶೇಷವಾಗಿ ಭಾರತೀಯ ಮೂಲದ ಭಾರತೀಯ-ಅಮೆರಿಕನ್ ಶಾಸಕರ ಸಂಖ್ಯೆ ಈಗ ಹೆಚ್ಚಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸದ್ಯದ ಮಾಹಿತಿಯಂತೆ ಅಮೆರಿಕದ ಅಧ್ಯಕೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ 205 ಮತಗಳನ್ನು ಪಡೆದಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್‌ ಟ್ರಂಪ್ 266 ಮತ ಪಡೆದಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಹುದ್ದೆಗೇರಲು ಇನ್ನೂ 4 ಮತಗಳು ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+