US Elections 2024: ಹೀನಾಯ ಸೋಲಿನ ಹಾದಿಯಲ್ಲಿ ಕಮಲಾ ಹ್ಯಾರಿಸ್?

ಭಾರತ ಮೂಲದ ಮಹಿಳೆಗೆ ಜನಿಸಿದ ಹೆಮ್ಮೆಯ ಪುತ್ರಿ ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗ್ತಾರೆ, ಈ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರಾಗಿ ಸೆಲೆಕ್ಟ್ ಆಗ್ತಾರೆ ಎಂಬ ನಿರೀಕ್ಷೆ ಹುಸಿಯಾಗುತ್ತಿದೆ. ಈ ಮಾತು ಯಾಕೆ ಅಂದ್ರೆ, 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತದಾನವು ಇದೀಗ ಮುಕ್ತಾಯವಾಗಿ ಮತ ಎಣಿಕೆ ಆರಂಭವಾಗಿದೆ. ಆದರೆ ಆರಂಭದಲ್ಲೇ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರಿಗೆ ಆಘಾತ ಎದುರಾಗಿದೆ!

ಅಮೆರಿಕದ ಮಾಜಿ ಅಧ್ಯಕ್ಷ & ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್‌ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿದೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಮುಕ್ತಾಯವಾದ ತಕ್ಷಣ ಮತ ಎಣಿಕೆ ಕಾರ್ಯ ಕೂಡ ಆರಂಭವಾಗಿದೆ. ಹೀಗಾಗಿ ಅಮೆರಿಕದಲ್ಲಿ ಹೊಸ ಸಂಚಲನ ಸೃಷ್ಟಿ ಆಗಿರುವ ಸಮಯದಲ್ಲೇ ಕಮಲಾ ಹ್ಯಾರಿಸ್ ಅವರ ಬೆಂಬಲಿಗರಿಗೆ ಭಾರಿ ದೊಡ್ಡ ಆಘಾತ ಎದುರಾಗಿದೆ.

US Elections 2024 Early Voting Count Results

ಡೊನಾಲ್ಡ್ ಟ್ರಂಪ್‌ ಜೇಬಿಗೆ 198 ಸ್ಥಾನ!

ಇತ್ತೀಚಿನ ಮಾಹಿತಿ ಪ್ರಕಾರ ಡೊನಾಲ್ಡ್ ಟ್ರಂಪ್‌ ಅವರು ಒಟ್ಟಾರೆ 198 ಎಲೆಕ್ಟೊರಲ್ ಮತವನ್ನ ಗಳಿಸಿದ್ದಾರೆ ಹಾಗೂ ಕಮಲಾ ಹ್ಯಾರಿಸ್ ಅವರು ಕೇವಲ 99 ಎಲೆಕ್ಟೊರಲ್ ಮತವನ್ನು ಪಡೆದು ಆಘಾತ ಎದುರಿಸುತ್ತಿದ್ದಾರೆ. ಹೀಗಾಗಿ ಕಮಲಾ ಹ್ಯಾರಿಸ್ ಅವರಿಗೆ ಸೋಲಿನ ಭೀತಿ, ಅದ್ರಲ್ಲೂ ಹೀನಾಯ ಸೋಲಿನ ಭೀತಿ ಕಾಡುತ್ತಿದೆ. ಮತ್ತೊಂದು ಕಡೆಯಲ್ಲಿ ಕಮಲಾ ಹ್ಯಾರಿಸ್ ಅವರ ಬೆಂಬಲಿಗರು ಈ ಫಲಿತಾಂಶ ಕಂಡು ಆಘಾತಕ್ಕೆ ಒಳಗಾಗಿದ್ದಾರೆ.

ಟ್ರಂಪ್ ಗೆದ್ದರೆ ಬೆಂಬಲಿಗರಿಗೆ ಹಣದ ಹೊಳೆ?

ಡೊನಾಲ್ಡ್ ಟ್ರಂಪ್ ಅವರ ಗೆಲುವಿಗಾಗಿ ಅಮೆರಿಕದ ಉದ್ಯಮಿಗಳು ನಾನಾ ರೀತಿಯ ತಂತ್ರ ಹೆಣೆದಿದ್ದರು. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ನಿಲ್ಲುವ ಬೆಂಬಲಿಗರಿಗಾಗಿ ಭಾರಿ ದೊಡ್ಡ ಮೊತ್ತದ ಹಣದ ಸಹಾಯ ಮಾಡುವ ಭರವಸೆ ಕೂಡ ನೀಡಲಾಗಿದೆ. ಈಗಾಗಲೇ ಎಲಾನ್ ಮಸ್ಕ್ ಅವರು 1 ಮಿಲಿಯನ್ ಡಾಲರ್ ಬಹುಮಾನ ನೀಡುತ್ತಿದ್ದು, ಈ ಮಧ್ಯೆ ಇದೇ ರೀತಿಯಾಗಿ ಬೇರೆ ಬೇರೆಯವರು ಕೂಡ ಹಣದ ಆಸೆ ತೋರಿಸುತ್ತಿದ್ದಾರೆ ಎಂಬ ಆರೋಪ ಈಗ ಕೇಳಿ ಬಂದಿದೆ.

ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ ಚುನಾವಣೆ

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತದಾನ ವೇಗ ಪಡೆದುಕೊಂಡಿದ್ದು, ಮತದಾರರು ಹುಮ್ಮಸ್ಸಿನಲ್ಲಿ ಬಂದು ಮತ ಹಾಕುತ್ತಿದ್ದಾರೆ. ಪ್ರಮುಖ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ನೇರವಾದ ಪೈಪೋಟಿ ಇದ್ದು, ಯಾರಿಗೆ ಗೆಲುವು? ಎಂಬ ಭಾರಿ ದೊಡ್ಡ ಕುತೂಹಲ ಮೂಡಿದೆ. ಅದರಲ್ಲೂ ಎಲೆಕ್ಟ್ರಾಲ್ ಮತಗಳು ಹೆಚ್ಚಾಗಿರುವ ರಾಜ್ಯದ ಪರಿಸ್ಥಿತಿ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದ್ದು, 2020ರ ಚುನಾವಣೆಯನ್ನು ನೆನಪು ಮಾಡ್ತಿದೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+