Donald Trump: ಜಿ-20 ಶೃಂಗಸಭೆ ಬಹಿಷ್ಕರಿಸಲು ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರ!
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಬಂದ ನಂತರ ಹಲವು ದೇಶಗಳ ಜೊತೆಗೆ ತಿಕ್ಕಾಟ ಮಾಡಿದ್ದರು. ಇದೀಗ ಮತ್ತೆ ಡೊನಾಲ್ಡ್ ಟ್ರಂಪ್ ಅವರು ತಮ್ಮ ಕಿರಿಕ್ ಮುಂದುವರಿಸಿದ್ದು, ಜಾಗತಿಕ ಮಟ್ಟದಲ್ಲಿ ಇನ್ನೊಂದು ತಲ್ಲಣಕ್ಕೆ ಕಾರಣರಾಗುತ್ತಿದ್ದಾರೆ. ಜಿ-20 ಶೃಂಗಸಭೆ ವಿಚಾರವಾಗಿ ಈಗ ಟ್ರಂಪ್ ಅವರ ಕೊಟ್ಟಿರುವ ಹೇಳಿಕೆ ಸಂಚಲನಕ್ಕೆ ಕಾರಣವಾಗಿದ್ದು, ಭವಿಷ್ಯದಲ್ಲಿ ಮತ್ತೊಂದು ಮಹಾ ಬಿರುಕು ಗ್ಯಾರಂಟಿ ಎನ್ನಲಾಗುತ್ತಿದೆ. ಹಾಗಾದರೆ ದಿಢೀರ್ ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದಿದ್ದು ಏಕೆ? ಟ್ರಂಪ್‌ಗೆ ಇಷ್ಟು ಕೋಪ ಬರಲು ಕಾರಣ ಏನು?
ದಿಢೀರ್ ಅಮೆರಿಕ ಅಧ್ಯಕ್ಷರು ಜಿ-20 ಶೃಂಗಸಭೆ ಬಹಿಷ್ಕರಿಸುವ ನಿರ್ಧಾರ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ನೆಲದಲ್ಲಿ ನವೆಂಬರ್ ಅಂತ್ಯದೊಳಗೆ ಜಿ-20 ಶೃಂಗಸಭೆ ನಡೆಯಲಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಈಗ ನಡೆಯಲಿರುವ ಜಿ-20 ಶೃಂಗಸಭೆಗೆ ಅಮೇರಿಕ ಸರ್ಕಾರದ ಯಾವುದೇ ಅಧಿಕಾರಿ ಹಾಜರಾಗುವುದಿಲ್ಲ, ಎಂದು ಟ್ರಂಪ್ ಆಡಳಿತ ತಿಳಿಸಿದೆ. ಇದು ಆಫ್ರಿಕಾ ಮಾತ್ರವಲ್ಲ ದಿಢೀರ್ ಜಾಗತಿಕ ಮಟ್ಟದಲ್ಲೂ ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ.

ಯಾಕಂದ್ರೆ ದಕ್ಷಿಣ ಆಫ್ರಿಕಾದ ನೆಲದಲ್ಲಿ ಬಿಳಿಯರ ಮೇಲೆ ಭಾರಿ ದೌರ್ಜನ್ಯ ನಡೆಯುತ್ತಿದೆ ಎಂಬುದು ಟ್ರಂಪ್ ಅವರ ಆರೋಪ. ಅದರಲ್ಲೂ ರೈತರ ಪೈಕಿ, ಶ್ವೇತ ವರ್ಣ ಹೊಂದಿರುವ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾದ ಬಿಳಿಯ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಈಗ ಜಿ-20 ಶೃಂಗಸಭೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ ಡೊನಾಲ್ಡ್ ಟ್ರಂಪ್ ಆಡಳಿತ.
ಉಪಾಧ್ಯಕ್ಷ ಕೂಡ ಆಫ್ರಿಕಾಗೆ ಹೋಗಲ್ಲ!
ನವೆಂಬರ್ 22 ಹಾಗೂ 23 ಜಿ-20 ಶೃಂಗಸಭೆಯ ಪ್ರಮುಖ ಭಾಗವಾಗಿದೆ, ಏಕೆಂದರೆ ಇದೇ ಸಭೆಯಲ್ಲಿ ಪ್ರಮುಖ ಮತ್ತು ವಿಕಾಸೋನ್ಮುಖ ಆರ್ಥಿಕ ರಾಷ್ಟ್ರಗಳ ನಾಯಕರ ಜೊತೆಗೆ ಮೀಟಿಂಗ್ ಆಗಲಿದೆ. ಆದರೆ ಈ ಸಭೆಗೂ ತಾವು ಹಾಜರಾಗುವುದಿಲ್ಲ ಎಂಬುದನ್ನು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲಾ ಗೊಂದಲದ ನಡುವೆಯೂ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರನ್ನ ಟ್ರಂಪ್ ಸ್ಥಾನದಲ್ಲಿ ಕಳುಹಿಸಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಕೂಡ ಈಗ ಕೈಗೂಡುತ್ತಿಲ್ಲ ಎನ್ನಲಾಗಿದ್ದು, ಭಾರಿ ದೊಡ್ಡದಾದ ಸಂಚಲನ ಸೃಷ್ಟಿಯಾಗಿದೆ. ಈ ಮೂಲಕ ಜಿ-20 ಶೃಂಗಸಭೆಯನ್ನೇ ಅಮೆರಿಕ ಬಹಿಷ್ಕಾರ ಮಾಡುತ್ತಿದೆ.
ತೆರಿಗೆ ವಾರ್ ನಡೆಸಿದ್ದರು ಟ್ರಂಪ್!
ಒಟ್ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಕೈಗೊಳ್ಳುತ್ತಿರುವ ವಿಚಿತ್ರ ವಿಚಿತ್ರ ನಿರ್ಧಾರಗಳ ಪರಿಣಾಮ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈಗಾಗಲೇ ಹಲವು ದೇಶಗಳ ವಿರುದ್ಧ ತೆರಿಗೆ ಯುದ್ಧ ಸಾರಿದ್ದ ಟ್ರಂಪ್ ಅವರು ಇದೀಗ ಮತ್ತೊಂದು ರೀತಿಯ ಕಿರಿಕ್ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಹೀಗಾಗಿ ಮುಂದೆ ಏನಾಗಲಿದೆ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications