ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.12: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.12: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

15.05: ಹುಡ್ ಹುಡ್ ಚಂಡಮಾರುತ ದಾಳಿಗೆ ಸಿಲುಕಿರುವ ವಿಶಾಖಪಟ್ಟಣಂನಲ್ಲಿ ಇನ್ನೆರಡು ದಿನಗಳ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಮುಂದಿನ ಬದಲಾವಣೆ ಬಗ್ಗೆ ತಿಳಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

12.20:ಆಂಧ್ರ ಕರಾವಳಿಯಲ್ಲಿ ಹುಡ್ ಹುಡ್ ಚಂಡ ಮಾರುತದ ಬೀಸುತ್ತಿರುವ ಪರಿಣಾಮ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯ ನಡೆಯುವುದು ಅನುಮಾನ ಎಂಬ ಸುದ್ದಿ ಬಂದಿದೆ. ಅದರೆ. ವಿಶಾಖಪಟ್ಟಣಂನಲ್ಲಿ ಅ.14 ರಂದು ನಿಗದಿಯಂತೆಯೇ ಪಂದ್ಯ ನಡೆಯಲಿದೆ.
ಪಂದ್ಯವನ್ನು ಬೇರೆಡೆಗೆ ವರ್ಗಾಯಿಸುವುದು ಅಷ್ಟೊಂದು ಸುಲಭದ ಮಾತಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಪಿಟಿಐಗೆ ತಿಳಿಸಿದ್ದಾರೆ. [ಚಂಡಮಾರುತ ಅಪ್ಡೇಟ್ಸ್]

12.10: ಸ್ವಾತಂತ್ರ ಹೋರಾಟಗಾರ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಇಂಡಿಯನ್ ನ್ಯಾಷನಲ್ ಆರ್ಮಿಯ ಯೋಧ ಕ್ಯಾಪ್ಟನ್ ಅಬ್ಬಾಸ್ ಅಲಿ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆಲಿಘಡ್ ನ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿಭಾನುವಾರ ನಿಧನರಾದ ಅಲಿ ಅವರಿಗೆ 92 ವರ್ಷ ವಯಸ್ಸಾಗಿತ್ತು.

Updates India, International News in Brief Oct 12


12.00:
ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ನಾಲ್ಕನೇ ವಿಕೆಟ್‌ಗೆ ದಾಖಲಿಸಿದ ಶತಕದ ಜೊತೆಯಾಟ, ಧೋನಿ ಅರ್ಧಶತಕ, ಮಹಮ್ಮದ್ ಶಮಿ 4 ವಿಕೆಟ್ ನೆರವಿನಲ್ಲಿ ಟೀಮ್ ಇಂಡಿಯಾ ದೆಹಲಿಯಲ್ಲಿ ನಿನ್ನೆ ನಡೆದ ಪ್ರವಾಸಿ ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದೆ.

11.45:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟಿಡ್(RIL) ಬೋರ್ಡ್ ಗೆ ಮುಖೇಶ್ ಅಂಬಾನಿ ಅವರ ಮಕ್ಕಳಾದ ಅಕಾಶ್ ಹಾಗೂ ಇಶಾ ಅವರು ಸೇರ್ಪಡೆಗೊಂಡಿದ್ದಾರೆ. ರಿಯಲನ್ಸ್ ರೀಟೈಲ್ ಹಾಗೂ ರಿಲಿಯನ್ಸ್ ಜಿಯೋ ಇನ್ಫೋಕಾಮ್ ನಲ್ಲಿ ಇಬ್ಬರು ನಿರ್ದೇಶಕರಾಗಿದ್ದಾರೆ.

11.30: ಬಹುನಿರೀಕ್ಷಿತ ಫುಟ್ಬಾಲ್ ಲೀಗ್ ಇಂಡಿಯನ್ ಸೂಪರ್ ಲೀಗ್ ಭಾನುವಾರ(ಅ.12) ಸಂಜೆ 7 ಗಂಟೆಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಸಿಟಿ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ ಅಲ್ಲದೆ, ಸುವರ್ಣ ಪ್ಲಸ್ ವಾಹಿನಿಯಲ್ಲೂ ಪಂದ್ಯಗಳ ನೇರ ಪ್ರಸಾರವಿರುತ್ತದೆ.[ಲೀಗ್ ವೇಳಾಪಟ್ಟಿ ಇಲ್ಲಿದೆ]

English summary
Top News of the today : The third one-dayer between India and the West Indies to be played on October 14 is not likely to be affected due to cyclone ‘Hudhud’, which is expected to hit the port city by Sunday afternoon, organisers said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X