ಗಾಜಾ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ಲಾನ್, ಜೈ ಎಂದ ವಿಶ್ವಸಂಸ್ಥೆ!
ಗಾಜಾ
ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಇಡೀ ಪ್ರಪಂಚ ಸೋತು ಸೋತು ಹೋಗಿದೆ. ಹೀಗೆ ಇಬ್ಬರ ನಡುವಿನ ಈ ಬಡಿದಾಟ ಇನ್ನೆಷ್ಟು ದಿನ? ಎಂಬ ಪ್ರಶ್ನೆ ಕೂಡ ಇದೀಗ ಉದ್ಭವಿಸಿದೆ. ಈ ಎಲ್ಲಾ ತಿಕ್ಕಾಟದ ನಡುವೆ ಕೂಡ ಮತ್ತೊಂದು ಮಹತ್ವದ ಬೆಳವಣಿಗೆ ಅಮೆರಿಕ ನೆಲದಲ್ಲೇ ಆಗುತ್ತಿದ್ದು, ಯುದ್ಧ ನಿಲ್ಲಿಸಲು ಬೇಕಾಗಿರುವ ಎಲ್ಲಾ ರೀತಿಯ ಪ್ರಯತ್ನಗಳು ಇದೀಗ ಸಾಗಿವೆ. ಇಂತಹ ಸಮಯದಲ್ಲೇ ಅಮೆರಿಕ ಅಧ್ಯಕ್ಷರು ಕೂಡ ಗಾಜಾ ಯುದ್ಧಕ್ಕೆ ಬ್ರೇಕ್ ಹಾಕಲು ಮಹತ್ವದ ನಿರ್ಧಾರ ಮಾಡಿದ್ದಾರೆ. ಇದೇ ಕಾರಣಕ್ಕೆ ಗಾಜಾ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ಲಾನ್, ಜೈ ಎಂದ ವಿಶ್ವಸಂಸ್ಥೆ! id="toptextpromo"> id='are-slot-1' class='oiad oi-axt oiadv'> id='top-searched-articles'>ಅಂದಹಾಗೆ
ಇಸ್ರೇಲ್ & ಹಮಾಸ್ ಯುದ್ಧದಲ್ಲಿ ಈವರೆಗೆ 60 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟು, ಸಾವಿರಾರು ಅಮಾಯಕರು ನರಳುತ್ತಿದ್ದಾರೆ. ಅದರಲ್ಲೂ ಗಾಜಾಪಟ್ಟಿ ಇಸ್ರೇಲ್ ಸೇನೆ ದಾಳಿ ಹಿನ್ನೆಲೆ ಅಕ್ಷರಶಃ ನರಕವಾಗಿದೆ. ಹತ್ತಾರು ಸಾವಿರ ಗಾಜಾಪಟ್ಟಿ ನಿವಾಸಿಗಳು ಯುದ್ಧಕ್ಕೆ ಈಗ ಬಲಿಯಾಗಿರುವ ಆರೋಪ ಕೇಳಿ ಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಹಮಾಸ್ ಮತ್ತು ಇಸ್ರೇಲ್ ನಡುವೆ ಇನ್ನಷ್ಟು ಕಿಡಿ ಹೊತ್ತಿಕೊಂಡಿದ್ದು, ಇದರ ಪರಿಣಾಮ ದ್ವೇಷ ಹೆಚ್ಚಾಗಿ ಜಗಳವೂ ಜೋರಾಗಿದೆ. ಆದರೆ ಟ್ರಂಪ್ ಮಾತ್ರ ಈ ಯುದ್ಧ ನಿಲ್ಲಿಸಬೇಕು ಅಂತಾ ದೊಡ್ಡ ಅಸ್ತ್ರವನ್ನೇ ಪ್ರಯೋಗ ಮಾಡುತ್ತಿದ್ದಾರೆ. ಅರೆ ಹಾಗಾದ್ರೆ ಟ್ರಂಪ್ ಅವರ ಈ ಅಸ್ತ್ರ ಫಲ ನೀಡುತ್ತಾ? id='are-slot-2' class='oiad oi-axt oiadv'>












Click it and Unblock the Notifications