Pahalgam: ಪಾಕಿಸ್ತಾನ ಸರ್ಕಾರವನ್ನು ರುಬ್ಬಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ!
ನಾಯಿ ಬಾಲ ನೆಟ್ಟಗೆ ಆಗಲ್ಲ, ಪಾಪಿ ಪಾಕಿಸ್ತಾನ ಬುದ್ಧಿ ಕಲಿಯೋದಿಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಯಾಕಂದ್ರೆ ಉಗ್ರರ ಬಿಡಾರ ಪಾಕಿಸ್ತಾನ ಪದೇ ಪದೇ ತನ್ನ ನೆರೆಯ ದೇಶಗಳ ಮೇಲೆ ದಾಳಿ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಅದರಲ್ಲೂ ಭಾರತದ ಮೇಲೂ ಇದೇ ಪಾಕಿಸ್ತಾನ ತಾನು ಸಾಕಿರುವ ಉಗ್ರರನ್ನ ಛೂ ಬಿಡುತ್ತಿದೆ. ಇಂತಹ ಸಮಯದಲ್ಲೇ, ಕೆಲ ದಿನಗಳ ಹಿಂದೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಸಂಭವಿಸಿದ್ದ ಭೀಕರ ಘಟನೆಗೆ ತಕ್ಕ ಉತ್ತರವನ್ನ ನೀಡಲು ಭಾರತ ಕೂಡ ಕಾಯುತ್ತಿದೆ. ಹೀಗಿದ್ದಾಗಲೇ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡ ಪಾಕಿಸ್ತಾನ ಸರ್ಕಾರವನ್ನು ರುಬ್ಬಿದೆ.
ಪಾಪಿ ಪಾಕಿಸ್ತಾನ ಮಾಡಿದ ಎಡವಟ್ಟು ಈಗ ದೊಡ್ಡ ಬೆಂಕಿಯನ್ನೇ ಹೊತ್ತಿಸಿಬಿಟ್ಟಿದೆ, ಜಮ್ಮು & ಕಾಶ್ಮೀರದಲ್ಲಿ ಭೀಕರ ಘಟನೆ ನಡೆದ ನಂತರ ಪಾಕಿಸ್ತಾನ ಮೇಲೆ ದಾಳಿ ಮಾಡಬೇಕು ಎನ್ನುವ ಒತ್ತಾಯ ಹೆಚ್ಚಾಗಿದೆ. ಆ ಮೂಲಕ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು ಎಂಬ ಆಗ್ರಹ ಭಾರತದ ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿದೆ. ಈ ಹಿಂದೆ ಕೂಡ ಪಾಕಿಸ್ತಾನದ ಉಗ್ರರು ಜಮ್ಮು & ಕಾಶ್ಮೀರದಲ್ಲಿ ರಕ್ತ ಹರಿಸಿದ್ದ ಸಮಯದಲ್ಲಿ ದೊಡ್ಡ ಪ್ಲಾನ್ ಮಾಡಿ, ಪಾಕಿಸ್ತಾನದ ನೆಲಕ್ಕೆ ನುಗ್ಗಿ ದಾಳಿಯನ್ನ ಮಾಡಿ ಉಗ್ರರ ಜೀವ ತೆಗೆದಿದ್ದರು ನಮ್ಮ ಭಾರತದ ಯೋಧರು. ಈಗಲೂ ಭಾರತ ಅಂತಹದ್ದೇ ಕಾರ್ಯಾಚರಣೆಗೆ ಸಜ್ಜಾಗಿದೆ ಎಂಬ ಸುದ್ದಿ ಹರಿದಾಡುವಾಗ, ವಿಶ್ವಸಂಸ್ಥೆ ಭಾರಿ ಮಹತ್ವದ ಸಂದೇಶ ನೀಡಿದೆ.

15 ರಾಷ್ಟ್ರಗಳ ಸಭೆಯಲ್ಲಿ ಒತ್ತಡ
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಕಾಶ್ಮೀರದ ಪಹಲ್ಗಾಮ್ ಘಟನೆ ಬಗ್ಗೆ ಬೇಸರ ಹೊರ ಹಾಕಿವೆ. ಅಲ್ಲದೆ 15 ರಾಷ್ಟ್ರಗಳನ್ನ ಒಳಗೊಂಡ ಭದ್ರತಾ ಮಂಡಳಿಯ ಸಭೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಡು ಎತ್ತಿರುವ ದೇಶಗಳು, ಈ ಘಟನೆಯಲ್ಲಿ ಸೂಕ್ತವಾದ ಉತ್ತರ ನೀಡಿ ಎಂದು ಆಗ್ರಹಿಸಿವೆ. ಹಾಗೇ ಕಾಶ್ಮೀರದ ಪಹಲ್ಗಾಮ್ ಪ್ರದೇಶಕ್ಕೆ ನುಗ್ಗಿ ಭಾರತದ 26 ಪ್ರವಾಸಿಗರನ್ನು ಹತ್ಯೆ ಮಾಡಿರುವ ಪಾಪಿ ಉಗ್ರರಿಗೆ ಸರಿಯಾದ ಶಿಕ್ಷೆ ಕೊಡಿ ಅಂತಾನೂ ಇದೀಗ ಆಗ್ರಹಿಸಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನ ಸರ್ಕಾರವನ್ನ ರುಬ್ಬಿ ಸರಿಯಾಗಿ ಪಾಠ ಕಲಿಸಲಾಗಿದೆ.
ಗಡಿ ಭಾಗದಲ್ಲಿ ಸೂಕ್ಷ್ಮ ಪರಿಸ್ಥಿತಿ
ಭಾರತ & ಪಾಕಿಸ್ತಾನ ಗಡಿ ಇದೀಗ ಕಾದಿರುವ ಕಬ್ಬಿಣದ ರೀತಿ ಆಗಿದ್ದು, ಯಾವುದೇ ಸಮಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಯಾಕಂದ್ರೆ ಒಂದು ಕಡೆ ಭಾರತ ಸೇಡು ತೀರಿಸಿಕೊಳ್ಳಲು ಈಗ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ, ಇನ್ನೊಂದು ಕಡೆ ಪಾಕಿಸ್ತಾನ ತನ್ನ ಬಳಿ ಇರುವ ಕ್ಷಿಪಣಿಗಳನ್ನು ಭಾರತದ ಗಡಿಗೆ ತಂದು ಇಟ್ಟಿದೆ. ಹೀಗಾಗಿ ಗಡಿ ಭಾಗದಲ್ಲಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದ್ದು, ಎರಡೂ ಕಡೆಯೂ ಗುಂಡಿನ ಚಕಮಕಿ ವರದಿ ಆಗುತ್ತಿದೆ. ಈ ಹಿನ್ನೆಲೆ, ಜಾಗತಿಕ ಸಮುದಾಯ ಪಾಪಿ ಪಾಕಿಸ್ತಾನದ ರಾಜಕಾರಣಿಗಳ ವಿರುದ್ಧ ಗರಂ ಆಗಿದೆ. ಅಲ್ಲದೆ ಈಗಲಾದರೂ ಬುದ್ಧಿ ಕಲಿಯಿರಿ ಅಂತಾ ಇದೀಗ ಸಲಹೆ ನೀಡಲಾಗುತ್ತಿದೆ.
ಮತ್ತೊಂದು ಕಡೆ ಭಾರತದ ಜೊತೆಗೆ ಪಾಕಿಸ್ತಾನ ಸಂಬಂಧ ಸುಧಾರಣೆ ಮಾಡಿಕೊಳ್ಳಬೇಕು & ದ್ವಿಪಕ್ಷೀಯ ಸಂಬಂಧ ಸರಿ ಮಾಡಿಕೊಂಡು ಹೋಗಲಿ, ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಆಗ್ರಹ ಮಾಡಿವೆ. ಈಗಾಗಲೇ ಭಾರತ ಸರ್ಕಾರ ಪಾಕಿಸ್ತಾನದ ಜೊತೆಗೆ ರಾಜತಾಂತ್ರಿಕ ಯುದ್ಧ ಘೋಷಣೆ ಮಾಡಿದೆ. ಪಾಕಿಸ್ತಾನದ ರಾಯಭಾರಿಗಳನ್ನು ನಮ್ಮ ದೇಶದಿಂದ ಹೊರಗೆ ಹಾಕಲಾಗಿದೆ. ಹಾಗೇ ಇದರ ಜೊತೆಯಲ್ಲೇ ಸಿಂಧೂ ನದಿ ಜಲ ಒಪ್ಪಂದ ರದ್ದು ಮಾಡಿ, ಹೊಸ ಆಘಾತ ನೀಡಲಾಗಿದೆ. ಇಷ್ಟೆಲ್ಲದರ ನಡುವೆ ವಿಶ್ವಸಂಸ್ಥೆ ಕೂಡ ಈ ವಿಚಾರದಲ್ಲಿ ಭಾರತದ ಪರವಾಗಿ ನಿಲ್ಲುತ್ತಿರುವುದು ಗಮನ ಸೆಳೆದಿದೆ.












Click it and Unblock the Notifications