ರಷ್ಯಾದ ಯುದ್ಧ ಟ್ಯಾಂಕ್ ಮೇಲೆ ಉಕ್ರೇನ್ ನಾಗರೀಕರ ಮೋಜು
ಕೀವ್ ಮಾರ್ಚ್ 4: ಉಕ್ರೇನ್‌ನ ಹಲವು ನಗರಗಳ ಮೇಲೆ ರಷ್ಯಾ ಸೇನೆ ದಾಳಿ ಮುಂದುವರೆದಿದೆ. ಉಕ್ರೇನ್ ಸೇನೆ ಮತ್ತು ನಾಗರಿಕರು ರಷ್ಯಾ ದಾಳಿಗೆ ಜೀವವನ್ನು ಅಂಗೈಯಲ್ಲಿಡಿದುಕೊಂಡು ಹೋರಾಡುತ್ತಿದ್ದಾರೆ. ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇತ್ತ ಉಕ್ರೇನ್‌ನಲ್ಲಿ ರಾಷ್ಟ್ರೀಯತಾವಾದಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಜ್ಞೆ ಮಾಡಿದ್ದಾರೆ. ಅನೇಕ ಸ್ಥಳಗಳಲ್ಲಿ ರಷ್ಯಾದ ಸೈನಿಕರು ಉಕ್ರೇನಿಯನ್ ನಾಗರಿಕರ ಮೇಲೆ ದಾಳಿ ಮಾಡಿದ್ದಾರೆ. ಅದರ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಮಧ್ಯೆ ಉಕ್ರೇನ್ ನಾಗರಿಕರು ರಷ್ಯಾದ ಟ್ಯಾಂಕ್ ಮೇಲೆ ಸವಾರಿ ಮಾಡುತ್ತಿರುವ ಮತ್ತೊಂದು ವೀಡಿಯೊ ಕಾಣಿಸಿಕೊಂಡಿದೆ. ಈ ಜನರು ರಷ್ಯಾದ ಟ್ಯಾಂಕ್‌ಗಳ ಮೇಲೆ ಕುಳಿತು ಮೋಜು ಮಾಡುತ್ತಿರುವುದನ್ನು ಕಾಣಬಹುದು. ಉಕ್ರೇನಿಯನ್ ನಾಗರಿಕರ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ರಷ್ಯಾ ದಾಳಿಗೆ ಉಕ್ರೇನ್ ನ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಬೀದಿ ಪಾಲಾಗಿದ್ದಾರೆ. ಕುಟುಂಬಸ್ಥರನ್ನು ಕಳೆದುಕೊಂಡವರು ರಷ್ಯಾ ದಾಳಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಒಂದೆಡೆ ಉಕ್ರೇನ್ ರಷ್ಯಾ ವಿರುದ್ಧ ಹೋರಾಡಲು ನಾಗರೀಕರಿಗೆ ಕರೆ ನೀಡಿದೆ. ರಷ್ಯಾ ದಾಳಿಗೆ ಉಕ್ರೇನ್‌ನಲ್ಲಿ ಕಟ್ಟಡಗಳು ಧರೆಗುರುಳಿವೆ. ರಷ್ಯಾ ದಾಳಿಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
|
ರಷ್ಯಾದ ಟ್ಯಾಂಕ್ ಮೇಲೆ ಉಕ್ರೇನಿಯನ್ ಮೋಜು
ಇದರ ನಡುವೆ ರಷ್ಯಾದ ಟ್ಯಾಂಕ್ ಮೇಲೆ ಉಕ್ರೇನಿಯನ್ ಮೋಜು ಮಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಉಕ್ರೇನ್‌ನ ಖಾರ್ಕಿವ್‌ನಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ಕೆಲವು ನಾಗರಿಕರು ಹಿಮಪಾತವಾದ ಮೈದಾನದಲ್ಲಿ ರಷ್ಯಾದ ಟ್ಯಾಂಕ್ ಅನ್ನು ಚಾಲನೆ ಮಾಡುತ್ತಿರುವುದನ್ನು ಕಾಣಬಹುದು. ಈ ಜನರು ವಿಡಿಯೊದಲ್ಲಿ ಸಂತೋಷದಿಂದ ಕೂಗುತ್ತಿರುವುದು ಕಂಡುಬಂದಿದೆ. ಅವರು ಉಕ್ರೇನ್ ಅನ್ನು ಹೊಗಳುತ್ತT-80 BVM ಟ್ಯಾಂಕ್ ಮೇಲೆ ಸವಾರಿ ಮಾಡುವ ವ್ಯಕ್ತಿಯೊಬ್ಬರು ನಾವು ಇದನ್ನು ಮಾಡಿದ್ದೇವೆ ಎಂದು ಸಂತೋಷದಿಂದ ಹೇಳುತ್ತಾರೆ. ಉಳಿದ ಗೆಳೆಯರು ಟ್ಯಾಂಕ್ ಮೇಲೆ ಕುಳಿತು ಸಂತಸ ವ್ಯಕ್ತಪಡಿಸುತ್ತಾ ನಗುತ್ತಿರುವುದು ಕಂಡುಬರುತ್ತದೆ.

ಟ್ಯಾಂಕ್‌ಗಳನ್ನು ರಸ್ತೆಗೆ ಬಿಡಲಾಗುತ್ತಿದೆ
ಕಳೆದ ತಿಂಗಳು ರಷ್ಯಾದ ಸೈನ್ಯವು ಉಕ್ರೇನ್ ಮೇಲೆ ದಾಳಿ ಮಾಡಿದೆ. ಇದರ ನಂತರ ರಷ್ಯಾ ದಾಳಿಯಿಂದಾಗಿ ಉಕ್ರೇನ್‌ನಲ್ಲಾದ ಹಾನಿಯ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಅಂತಹ ಅನೇಕ ವಿಡಿಯೋಗಳು ಮತ್ತು ಚಿತ್ರಗಳು ಹೊರಬಂದಿವೆ. ಇದರಲ್ಲಿ ರಷ್ಯಾದ ಸೈನಿಕರು ತಮ್ಮ ಟ್ಯಾಂಕ್‌ಗಳನ್ನು ತೊರೆದಿರುವುದನ್ನು ಕಾಣಬಹುದು. ಇವು ರಷ್ಯಾದ ಸೈನಿಕರು ತಂದ ಟ್ಯಾಂಕ್‌ಗಳು ಎಂದು ಉಕ್ರೇನ್ ಹೇಳಿಕೊಂಡಿದೆ. ಆದರೆ ರಷ್ಯಾ ಸೇನೆಯ ಮೇಲೆ ಉಕ್ರೇನ್ ದಾಳಿ ಮಾಡಿದಾಗ ಈ ಟ್ಯಾಂಕ್‌ಗಳು ರಸ್ತೆಯಲ್ಲೇ ಉಳಿದಿವೆ. ರಷ್ಯಾದ ಸೈನಿಕರು ದಾರಿಯಲ್ಲಿ ಬಿಟ್ಟು ಓಡಿಹೋದ ಕೆಲವು ಟ್ಯಾಂಕ್‌ಗಳೂ ಇವೆ.

'ರಷ್ಯಾ ಸೈನಿಕರು ಹೋರಾಡದೆ ಶರಣು'
ದಾಳಿ ನಡುವೆ ರಷ್ಯಾ ಆಯುಧಗಳು ಅಲ್ಲಲ್ಲಿ ಪತ್ತೆಯಾಗಿವೆ. ಇಂತಹ ಹಲವು ವರದಿಗಳು ಕೂಡ ಹೊರ ಬರುತ್ತಿದ್ದು, ಅದರಲ್ಲಿ ರಷ್ಯಾದ ಸೈನಿಕರು ಚೈತನ್ಯ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಉಕ್ರೇನ್ ಸೈನಿಕರಿಗೆ ಹೋರಾಡದೆ ಶರಣಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಮಿಲಿಟರಿ ಸಲಹೆಗಾರ, ದಾಳಿಯಲ್ಲಿ 7,000 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಕೊಲ್ಲಲ್ಪಟ್ಟರು. ಆದರೆ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಯುದ್ಧದ ಖೈದಿಗಳಾಗಿದ್ದಾರೆ ಎಂದು ಹೇಳಿದರು.

ಉಕ್ರೇನ್ ಹೇಳಿಕೆಯನ್ನು ತಳ್ಳಿ ಹಾಕಿದ ರಷ್ಯಾ
ರಷ್ಯಾದ 14 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಮತ್ತು 8 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ರಷ್ಯಾ ಇಲ್ಲಿಯವರೆಗೆ 102 ಟ್ಯಾಂಕ್‌ಗಳು, 536 ಮಿಲಿಟರಿ ವಾಹನಗಳು, 15 ಹೆವಿ ಮೆಷಿನ್ ಗನ್‌ಗಳು ಮತ್ತು ಒಂದು BUK ಕ್ಷಿಪಣಿಯನ್ನು ಕಳೆದುಕೊಂಡಿದೆ. ಈ ದಾಳಿಯಲ್ಲಿ ರಷ್ಯಾ ಭಾರೀ ನಷ್ಟವನ್ನು ಅನುಭವಿಸಿದೆ ಎಂದು ಮಿಲಿಟರಿ ತಜ್ಞರು ಹೇಳಿದ್ದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯೋಜನೆಯ ಪ್ರಕಾರ ಎಲ್ಲವೂ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ರಷ್ಯಾ ಉಕ್ರೇನ್ ಹೇಳಿಕೆಯನ್ನು ತಳ್ಳಿಹಾಕಿದೆ. ರಷ್ಯಾ ದಾಳಿಯಲ್ಲಿ ಉಕ್ರೇನ್ ಹೇಳುವ ಮಟ್ಟಕ್ಕೆ ನಷ್ವವನ್ನು ಅನುಭವಿಸಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications