ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿನ ರಕ್ಷಣೆಗಾಗಿ ದೇಹದ ಮೇಲೆ ವಿಳಾಸ ಬರೆದ ಉಕ್ರೇನ್ ತಾಯಿಯಂದಿರು

|
Google Oneindia Kannada News

ಕೀವ್ ಏಪ್ರಿಲ್ 5: ಉಕ್ರೇನ್ ಮೇಲಿನ ರಷ್ಯಾ ದಾಳಿ ಹೃದಯ ವಿದ್ರಾವಕ ಘಟನೆಗಳಿಗೆ ಸಾಕ್ಷಿಯಾಗಿದೆ. ಉಕ್ರೇನ್‌ನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ನಡೆಯುತ್ತಿರುವ ಯುದ್ಧದಿಂದ ಭಯಾನಕ ದೃಶ್ಯಗಳು ಹೊರಹೊಮ್ಮಿವೆ. ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಸಿಲುಕಿರುವ ಹಲವಾರು ಜನ ತಮ್ಮ ರಕ್ಷಣೆಗೆ ಮನವಿ ಮಾಡುತ್ತಿದ್ದಾರೆ. ಈ ನಡುವೆ ಮನಕರಗುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಈ ದೇಶದಲ್ಲಿ ಗಂಡು ಹೆಣ್ಣು ಒಟ್ಟಾಗಿ ಪಾರ್ಕ್‌ಗೆ ಹೋಗುವಂತಿಲ್ಲಈ ದೇಶದಲ್ಲಿ ಗಂಡು ಹೆಣ್ಣು ಒಟ್ಟಾಗಿ ಪಾರ್ಕ್‌ಗೆ ಹೋಗುವಂತಿಲ್ಲ

ರಷ್ಯಾದ ಪಡೆಗಳಿಂದ ತಾವು ಕೊಲ್ಲಲ್ಪಡುತ್ತೇವೆ ಎಂದು ಭಯಪಡುವ ಉಕ್ರೇನಿಯನ್ ಕುಟುಂಬಗಳು ತಮ್ಮ ಮಕ್ಕಳ ದೇಹಗಳ ಮೇಲೆ ಕುಟುಂಬದ ವಿವರಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಆಘಾತಕಾರಿ ಬೆಳವಣಿಗೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮಕ್ಕಳ ಫೋಟೋಗಳನ್ನು ಅನೇಕ ಪತ್ರಕರ್ತರು ಟ್ವೀಟ್ ಮಾಡುತ್ತಿದ್ದಾರೆ. ಜೊತೆಗೆ ಇದು ಸಂಘರ್ಷದ ಕಠೋರ ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

"ಉಕ್ರೇನಿಯನ್ ತಾಯಂದಿರು ತಮ್ಮ ಮಕ್ಕಳ ದೇಹದ ಮೇಲೆ ಕುಟುಂಬದ ಸಂಪರ್ಕಗಳನ್ನು ಬರೆಯುತ್ತಿದ್ದಾರೆ. ಒಂದು ವೇಳೆ ಅವರು ಸಾವನ್ನಪ್ಪಿ ಅವರ ಮಗು ಬದುಕುಳಿದರೆ ಎನ್ನುವ ಆತಂಕದಿಂದ ಅವರು ತಮ್ಮ ಮಕ್ಕಳ ಮೇಲೆ ಕುಟುಂಬ ಸಂಪರ್ಕಗಳನ್ನು ಬರೆಯುತ್ತಿದ್ದಾರೆ" ಎಂದು ಸ್ವತಂತ್ರ ಪತ್ರಕರ್ತೆ ಅನಸ್ತಾಸಿಯಾ ಲ್ಯಾಪಾಟಿನಾ ಟ್ವಿಟರ್‌ನಲ್ಲಿ ಬರೆದು ಅಂತಹ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

Ukrainian Mother Writes Family Details On Toddlers Back

ಈ ಫೋಟೋದಲ್ಲಿ ಚಿಕ್ಕ ಉಕ್ರೇನಿಯನ್ ಹುಡುಗಿಯ ಬೆನ್ನಿನ ಮೇಲೆ ಅವಳ ಹೆಸರು ಮತ್ತು ಅವಳ ತಾಯಿ ಬರೆದ ದೂರವಾಣಿ ಸಂಖ್ಯೆಯನ್ನು ಕಾಣಬಹುದು.

ಮೂರು ದಿನಗಳ ಹಿಂದೆ ಈ ಫೋಟೋವನ್ನು ಬಾಲಕಿಯ ತಾಯಿ ಸಶಾ ಮಕೋವಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಸ್ಥಳೀಯ ಭಾಷೆಯಲ್ಲಿದೆ. ಗೂಗಲ್ ಅನುವಾದ ಮಾಡಿದಾಗ ಮಹಿಳೆ ಹೀಗೆ ಬರೆದಿದ್ದಾರೆ: ತನ್ನ ಮಗಳು ವೆರಾಳ. ಏನಾದರು ಸಂಭವಿಸಿದಲ್ಲಿ ಬದುಕುಳಿದವರು ಅವಳನ್ನು ರಕ್ಷಿಸಿ ಎಂದು ಬರೆದಿದ್ದಾರೆ.

Ukrainian Mother Writes Family Details On Toddlers Back

ಮತ್ತೊಂದು ಫೋಟೋದಲ್ಲಿ ಕುಟುಂಬವು ಸದ್ಯ ಸುರಕ್ಷಿತವಾಗಿದೆ ಎಂದು ಮಕೋವಿ ಹೇಳಿದ್ದಾರೆ. ಆದರೆ ಅಂಬೆಗಾಲಿಡುವ ಮಗುವಿನ ಬೆನ್ನಿನ ಮೇಲೆ ಹೀಗೆ ಬರೆದಿರುವ ಫೋಟೋಗೆ ಪ್ರತಿಕ್ರಿಯಿಸಿದ ಟ್ವಿಟ್ಟರ್ ಬಳಕೆದಾರರು "ಹೃದಯ ವಿದ್ರಾವಕ. ಇದರ ಬಗ್ಗೆ ಹೇಳಲು ಯಾವುದೇ ಪದಗಳಿಲ್ಲ" ಎಂದು ಬರೆದಿದ್ದಾರೆ.

ಕಳೆದ ವಾರ, ದಿ ಗಾರ್ಡಿಯನ್ ವರದಿ ಮಾಡಿದ್ದು, ಅವರು ಓಡಿಹೋಗಲು ಪ್ರಯತ್ನಿಸುತ್ತಿರುವಾಗ ರಷ್ಯಾದ ಪಡೆಗಳು ಮಕ್ಕಳನ್ನು "ಮಾನವ ಗುರಾಣಿಗಳಾಗಿ" ಬಳಸುತ್ತಿದ್ದಾರೆ ಎಂದು ಹೇಳಿದೆ. ಚೆರ್ನಿಹಿವ್‌ನಿಂದ ಕೂಗಳತೆ ದೂರದಲ್ಲಿರುವ ನೋವಿ ಬೈಕಿವ್ ಗ್ರಾಮದಲ್ಲಿ ಮಕ್ಕಳನ್ನು ತುಂಬಿದ ಬಸ್‌ಗಳನ್ನು ಇರಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಮಾತ್ರವಲ್ಲದೆ ಉಕ್ರೇನಿಯನ್ ರಾಜಧಾನಿ ಕೀವ್‌ನ ಹೊರಗಿನ ಬುಚಾದಲ್ಲಿ ಸಾಮೂಹಿಕ ಸಮಾಧಿ ಮತ್ತು ಕಟ್ಟಿಹಾಕಿದ ದೇಹಗಳ ಆವಿಷ್ಕಾರಗಳು ಸಿಕ್ಕ ವರದಿಗಳು ಹೊರಹೊಮ್ಮಿವೆ.

Ukrainian Mother Writes Family Details On Toddlers Back

ರಷ್ಯಾದ ಈ ವರ್ತನೆಗೆ ಜಾಗತಿಕ ಆಕ್ರೋಶ ಹೆಚ್ಚಾಗಿದೆ. ಹೀಗಾಗಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮೇಲೆ ಯುದ್ಧ ಅಪರಾಧಗಳ ಆರೋಪ ಮಾಡಿದ್ದಾರೆ. ಆದರೆ, ಬುಚಾ ಸೇರಿದಂತೆ ನಾಗರಿಕರ ಹತ್ಯೆಗೆ ಸಂಬಂಧಿಸಿದ ಯಾವುದೇ ಆರೋಪಗಳನ್ನು ರಷ್ಯಾ ಸ್ಪಷ್ಟವಾಗಿ ನಿರಾಕರಿಸಿದೆ. ರಷ್ಯಾವನ್ನು ಕಳಂಕಗೊಳಿಸಲು ಉಕ್ರೇನ್ ಸಮಾಧಿಗಳು ಮತ್ತು ಶವಗಳನ್ನು ಪ್ರದರ್ಶಿಸಿದೆ ಎಂದು ಹೇಳಿದೆ.

English summary
Russia-Ukraine War: Ukrainian families who fear they will be killed by the advancing Russian forces have begun writing family details on the bodies of their children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X