Ukraine War: ನ್ಯಾಟೋ ಒಕ್ಕೂಟಕ್ಕೆ ಧನ್ಯವಾದ ಅರ್ಪಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ!
ಉಕ್ರೇನ್ ಬದುಕಿದೆಯಾ ಬಡಜೀವ ಅಂತಾ ಸಿಕ್ಕ ಸಿಕ್ಕವರ ಕಾಲು ಹಿಡಿದು ಕಾಸು ಮಾಡುವುದರಲ್ಲಿ ಬ್ಯುಸಿ ಆಗಿದೆ. ರಷ್ಯಾ ವಿರುದ್ಧ ಹೋರಾಟ ನಡೆಸಲು ರೂಪಾಯಿ ರೂಪಾಯಿಗೂ ಪರದಾಡುತ್ತಾ ಕೂತಿದೆ ಉಕ್ರೇನ್ ದೇಶ. ಹೀಗಿದ್ದಾಗ ಉಕ್ರೇನ್‌ಗೆ ನೆರವಾಗಿ ನಿಂತಿರುವುದು ನ್ಯಾಟೋ ಒಕ್ಕೂಟದ ದೇಶಗಳು ಮಾತ್ರ. ಅದರಲ್ಲೂ ಯುರೋಪ್ ದೇಶಗಳಿಂದ ಭಾರಿ ದೊಡ್ಡ ಸಹಾಯ ಆಗುತ್ತಿದ್ದು, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸೇನಾ ಸಹಾಯ ಸಿಗುತ್ತಿದೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಫುಲ್ ಖುಷಿಯಾಗಿದ್ದು, ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಈಗ ಒಂದು ಹಂತಕ್ಕೆ ಬಂದು ತಲುಪಿದ್ದು, ಎರಡೂ ದೇಶಗಳ ನಡುವೆ ಯುದ್ಧ ನಿಲ್ಲುವ ಯಾವುದೇ ಮುನ್ಸೂಚನೆ ಮಾತ್ರ ಈ ಸಮಯದಲ್ಲಿ ಸಿಗುತ್ತಿಲ್ಲ. ಇದೇ ಕಾರಣಕ್ಕೆ ರಷ್ಯಾ & ಉಕ್ರೇನ್ ವಾರ್ ನಿಲ್ಲಿಸಬೇಕು ಅಂತಾ ಭಾರಿ ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೂ ಯುದ್ಧ ಮಾತ್ರ ನಿಲ್ಲುತ್ತಾ ಇಲ್ಲ. ಹೀಗಿದ್ದಾಗ ರಷ್ಯಾ ವಿರುದ್ಧ ಹೋರಾಟ ನಡೆಸಲು ತಮಗೆ ಸಹಾಯ ಮಾಡಿದ್ದಕ್ಕೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನ್ಯಾಟೋ ದೇಶಗಳ ಮೇಲಿನ ಅಭಿಮಾನ ಹೆಚ್ಚಿಸಿಕೊಂಡಿದ್ದಾರೆ!

ಧನ್ಯವಾದ ಅರ್ಪಿಸಿದ ಉಕ್ರೇನ್ ಅಧ್ಯಕ್ಷ
ಹೌದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಸೇರಿದಂತೆ ಬ್ರಿಟನ್, ಜರ್ಮನಿ & ಫ್ರಾನ್ಸ್, ಇಟಲಿ, ಪೋಲೆಂಡ್, ಕೆನಡಾ & ನೆದರ್ಲ್ಯಾಂಡ್ಸ್ ಪ್ರತಿನಿಧಿಗಳ ಜೊತೆ ಭೇಟಿ ಮಾಡಿದ್ದಾರೆ. ಈ ಮೂಲಕ ನ್ಯಾಟೋ ಒಕ್ಕೂಟದ ದೇಶಗಳ ರಕ್ಷಣಾ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಚಳಿಗಾಲ ಆರಂಭವಾಗುವ ಮೊದಲು ಕೊಟ್ಟಿರುವ ಎಲ್ಲಾ ರೀತಿಯ ಸಹಕಾರಕ್ಕೆ ಧನ್ಯವಾದ ಎಂದಿದ್ದಾರೆ. ಈಗಾಗಲೇ ರಷ್ಯಾ ಸೇನೆಯು ಉಕ್ರೇನ್‌ನ ಬಹುತೇಕ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ. ಇಂತಹ ಸಮಯದಲ್ಲಿ ನ್ಯಾಟೋ ಪಡೆಗಳು ಸಹಾಯಕ್ಕೆ ಬಂದಿರುವುದು ಉಕ್ರೇನ್‌ಗೆ ಖುಷಿ ನೀಡಿದೆ.
ಅಮೆರಿಕ & ನ್ಯಾಟೋ ಪಡೆಗಳ ಎಂಟ್ರಿ?
ಕಳೆದ ಕೆಲ ದಿನಗಳಿಂದ ಈ ವಿಚಾರ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಯಾಕೆ ಅಂದ್ರೆ ಪದೇ ಪದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಪರ ತಮ್ಮ ಧ್ವನಿ ಎತ್ತುತ್ತಿದ್ದಾರೆ. ಹಾಗೇ ರಷ್ಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ಇದೇ ಡೊನಾಲ್ಡ್ ಟ್ರಂಪ್, ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ಕೂಡ ಗರಂ ಆಗಿದ್ದಾರೆ. ಮತ್ತೊಂದೆಡೆ ಯುದ್ಧಕ್ಕೆ ಬ್ರೇಕ್ ಹಾಕಲು ಚೀನಾ ಮುಂದಾಗಬೇಕು ಅನ್ನೋ ಡಿಮ್ಯಾಂಡ್ ಕೂಡ ಇಟ್ಟಿದ್ದಾರೆ. ಇಡೀ ಪ್ರಪಂಚ ಟ್ರಂಪ್ ಅವರ ಹೇಳಿಕೆ ಬಗ್ಗೆ ಚಿಂತಿಸುತ್ತಾ ಇದೆ. ಮತ್ತೊಂದು ಕಡೆಯಲ್ಲಿ, ದಿಢೀರ್ ಅಂತಾ ಉಕ್ರೇನ್ ಪರ ನೇರವಾಗಿ ಅಮೆರಿಕ & ನ್ಯಾಟೋ ಪಡೆಗಳು ನುಗ್ಗುವ ಸಾಧ್ಯತೆ ಇದೆಯಾ? ಎಂಬ ಚರ್ಚೆ ಕೂಡ ನಡೆಯುತ್ತಿದೆ...












Click it and Unblock the Notifications