Ukraine War: ರಷ್ಯಾಗೆ ಆಘಾತ ನೀಡಿದ ಉಕ್ರೇನ್, ಮತ್ತೊಂದು ಪೈಪ್‌ಲೈನ್ ಉಡೀಸ್!

ಉಕ್ರೇನ್ ಮತ್ತೆ ಮೈಕೊಡವಿ ಎದ್ದು ನಿಂತಿದೆ, ಈ ಮೂಲಕ ರಷ್ಯಾಗೆ ತಿರುಗೇಟು ಕೊಡಲು ತನ್ನ ಬಳಿ ಇರುವ ಎಲ್ಲಾ ಅಸ್ತ್ರಗಳನ್ನು ಹೊರಗೆ ತೆಗೆದು ಪ್ರಯೋಗ ಮಾಡುತ್ತಿದೆ. ರಷ್ಯಾಗೆ ಪ್ರಮುಖ ಆದಾಯ ಮೂಲವಾಗಿರುವ ತೈಲ ಸಂಗ್ರಹ ಘಟಕಗಳನ್ನೇ ಟಾರ್ಗೆಟ್ ಮಾಡಿ ಈಗ ದಾಳಿಯನ್ನು ಆರಂಭಿಸಿದೆ ಉಕ್ರೇನ್ ಮಿಲಿಟರಿ. ಇದರ ಪರಿಣಾಮ ದಿಢೀರ್ ಮತ್ತೊಂದು ಪೈಪ್‌ಲೈನ್ ಉಡೀಸ್ ಆಗಿದೆ. ರಷ್ಯಾ ರಾಜಧಾನಿ ಮಾಸ್ಕೋ ಬಳಿಯೇ ಈ ಘಟನೆ ನಡೆದಿದ್ದು, ರಷ್ಯಾ ಸೇನೆಗೆ ತೈಲವನ್ನು ಸರಬರಾಜು ಮಾಡುವ ಪೈಪ್‌ಲೈನ್ ಪೀಸ್ ಪೀಸ್ ಆಗಿದೆ.

ರಷ್ಯಾ ವಿರುದ್ಧ ಉಕ್ರೇನ್ ಪ್ರಮುಖವಾಗಿ ಡ್ರೋನ್‌ಗಳನ್ನು ಬಳಸಿಕೊಂಡು ದಾಳಿ ನಡೆಸುತ್ತಿದೆ. ಈ ಪೈಕಿ ರಷ್ಯಾ ರಾಜಧಾನಿ ಮಾಸ್ಕೋ ಬಳಿಯಲ್ಲೇ ಭಾರಿ ದೊಡ್ಡ ಪ್ರಮಾಣದ ತಿಕ್ಕಾಟ ನಡೆಯುತ್ತಾ ಇದೆ. ತನಗೆ ಇಷ್ಟು ದಿನ ಬಿದ್ದಿದ್ದ ಏಟಿಗೆ ಸರಿಯಾಗಿ ತಿರುಗೇಟು ನೀಡಲು ಉಕ್ರೇನ್ ಮಿಲಿಟರಿಯು ಕೂಡ ಈಗ ಮುಂದೆ ನುಗ್ಗಿದೆ. ರಷ್ಯಾದ ಕೊಲ್ಟ್ಸೆವೊಯ್ ಪೈಪ್‌ಲೈನ್‌ನ ಮೇಲೆ ದಾಳಿ ನಡೆಸಿದ್ದು, ಇದು ಸುಮಾರು 250 ಮೈಲಿ ಅಂದ್ರೆ 400 ಕಿಲೋ ಮೀಟರ್ ಉದ್ದ ಇದೆ. ಪೆಟ್ರೋಲ್, ಡೀಸೆಲ್ & ಜೆಟ್ ಇಂಧನ ಸರಬರಾಜು ಮಾಡಲು ಈ ಪೈಪ್‌ಲೈನ್ ಬಳಸಲಾಗುತ್ತದೆ. ಆದರೆ ಪೈಪ್‌ಲೈನ್ ಈಗ ಉಕ್ರೇನ್ ದಾಳಿಯಲ್ಲಿ ಛಿದ್ರವಾಗಿದೆ.

Ukraine Strikes Key Fuel Pipeline Near Moscow Impacting Russian Forces

ರಷ್ಯಾ ಸೇನೆಗೆ ದೊಡ್ಡ ಆಘಾತ

ಈ ಪೈಪ್‌ಲೈನ್ ಮೂಲಕ ವರ್ಷಕ್ಕೆ 3 ಮಿಲಿಯನ್ ಟನ್ ಜೆಟ್ ಇಂಧನ ಸೇರಿದಂತೆ 2.8 ಮಿಲಿಯನ್ ಟನ್ ಡೀಸೆಲ್ ಮತ್ತು 1.6 ಮಿಲಿಯನ್ ಟನ್ ಪೆಟ್ರೋಲ್ ಸಾಗಿಸುವ ಶಕ್ತಿ ಹಾಗೂ ಸಾಮರ್ಥ್ಯ ಇದೆ. ಹೀಗಿದ್ದಾಗ ರಷ್ಯಾಗೆ ಈಗ ಆಘಾತ ನೀಡಿರುವ ಉಕ್ರೇನ್, ನಮ್ಮ ದಾಳಿ ನಿರ್ಬಂಧಗಳಿಗಿಂತ ಹೆಚ್ಚು ಪರಿಣಾಮಕಾರಿ ಆಗಿದೆ ಎಂದು ರಷ್ಯಾಗೆ ಉತ್ತರ ನೀಡಿದೆ. ಈ ಮೂಲಕ ರಷ್ಯಾ ಕೂಡ ಪ್ರತಿದಾಳಿ ನಡೆಸುವ ಆತಂಕ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+