ದೇಶದ್ರೋಹ ಶಂಕೆ: ಉಕ್ರೇನ್ ಸಂಧಾನಕಾರನ ಹತ್ಯೆ
ಕೀವ್, ಮಾರ್ಚ್ 5: ಉಕ್ರೇನಿಯನ್ ಭದ್ರತಾ ಸೇವೆಯು (ಎಸ್‌ಬಿಯು) ಬೆಲಾರಸ್‌ನಲ್ಲಿ ರಷ್ಯಾದೊಂದಿಗೆ ಮೊದಲ ಸುತ್ತಿನ ಮಾತುಕತೆಯಲ್ಲಿ ಉಕ್ರೇನಿಯನ್ ಸಮಾಲೋಚನಾ ತಂಡದ ಸದಸ್ಯರಾಗಿದ್ದ ಡೆನಿಸ್ ಕೈರೆವ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ರಷ್ಯಾವು ಆರೋಪ ಮಾಡಿದೆ.
ದೇಶದ್ರೋಹದ ಆರೋಪದಲ್ಲಿ ಬೆಲಾರಸ್‌ನಲ್ಲಿ ರಷ್ಯಾದೊಂದಿಗೆ ಮೊದಲ ಸುತ್ತಿನ ಮಾತುಕತೆಯಲ್ಲಿ ಉಕ್ರೇನಿಯನ್ ಸಮಾಲೋಚನಾ ತಂಡದ ಸದಸ್ಯರಾಗಿದ್ದ ಸಂಧಾನಕಾರ ಡೆನಿಸ್ ಕೈರೆವ್ ಅವರನ್ನು ಬಂಧಿಸಲು ಪ್ರಯತ್ನಿಸುತ್ತಿರುವಾಗ ಉಕ್ರೇನಿಯನ್ ಭದ್ರತಾ ಸೇವೆಯು (ಎಸ್‌ಬಿಯು) ಗುಂಡಿಕ್ಕಿ ಕೊಂದಿದೆ ಎಂದು ಉಕ್ರೇನಿಯನ್ ಸಂಸದೀಯ ಒಲೆಕ್ಸಿ ಹೊಂಚರೆಂಕೊ ಹೇಳಿದರು ಎಂದು ರಷ್ಯಾದ ಮಾಧ್ಯಮ ವರದಿಯಲ್ಲಿ ಉಲ್ಲೇಖ ಮಾಡಿದೆ.
"ಉಕ್ರೇನಿಯನ್ ಸಂಧಾನ ನಿಯೋಗದ ಸದಸ್ಯ ಡೆನಿಸ್ ಕೈರೆವ್ ಅವರನ್ನು ಬಂಧಿಸುವ ಪ್ರಯತ್ನದ ಸಮಯದಲ್ಲಿ, ಉಕ್ರೇನಿಯನ್ ಭದ್ರತಾ ಸೇವೆಯು ಅವರನ್ನು ಗುಂಡಿಕ್ಕಿ ಕೊಂದಿತು. ಅವರು ದೇಶದ್ರೋಹ ಮಾಡಿದ ಶಂಕೆ ಇತ್ತು," ಎಂದು ಹೊಂಚರೆಂಕೊ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಬೆಲಾರಸ್‌ನಲ್ಲಿ ರಷ್ಯಾದೊಂದಿಗೆ ಮೊದಲ ಸುತ್ತಿನ ಮಾತುಕತೆಯಲ್ಲಿ ಉಕ್ರೇನಿಯನ್ ನಿಯೋಗದ ಸದಸ್ಯರಲ್ಲಿ ಕೈರೆವ್ ಕೂಡ ಇದ್ದರು. "ಉಕ್ರೇನಿಯನ್ ಭದ್ರತಾ ಸೇವೆಯು (ಎಸ್‌ಬಿಯು) ಅವರ ದೂರವಾಣಿ ಮಾತುಕತೆಗಳನ್ನು ಒಳಗೊಂಡಂತೆ ಕೈರೀವ್ ಅವರ ಹೆಚ್ಚಿನ ದೇಶದ್ರೋಹದ ಸ್ಪಷ್ಟ ಪುರಾವೆಗಳನ್ನು ಹೊಂದಿತ್ತು," ಎಂದು ಉಕ್ರೇನಿಯನ್ ಸಂಸದೀಯ ಒಲೆಕ್ಸಿ ಹೊಂಚರೆಂಕೊ ರಾಜಕೀಯ ವಲಯಗಳಲ್ಲಿನ ಅವರ ಮೂಲಗಳನ್ನು ಉಲ್ಲೇಖಿಸಿ ಹೇಳಿದರು.
ರಷ್ಯಾದಿಂದಲೂ ಆರೋಪ
ದೇಶದ್ರೋಹದ ಶಂಕೆಯಲ್ಲಿ ಉಕ್ರೇನ್ ತನ್ನದೇ ಸಮಾಲೋಚಕರೊಬ್ಬರನ್ನು ಕೊಂದಿದೆ ಎಂದು ರಷ್ಯಾ ಶನಿವಾರದಂದು ಹೇಳಿದೆ. ಮಾಸ್ಕೋ ಪ್ರಕಾರ, ಉಕ್ರೇನ್‌ನ ಸೆಕ್ಯುರಿಟಿ ಸರ್ವಿಸ್ ಆಫ್ ಉಕ್ರೇನ್ (SBU) ಬಂಧನ ಪ್ರಯತ್ನದ ಸಮಯದಲ್ಲಿ ಅದರ ಸಂಧಾನಕಾರ ಡೆನಿಸ್ ಕಿರೀವ್ ಅವರನ್ನು ಹೊಡೆದುರುಳಿಸಿದೆ. ಸಂಧಾನ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ರಷ್ಯಾದ ಭಾಗಕ್ಕೆ ತಿಳಿಸಿದ್ದಾರೆ ಎಂದು ರಾಜ್ಯ ಗುಪ್ತಚರ ಶಂಕಿಸಿದೆ.
ತಾತ್ಕಾಲಿಕ ಕದನ ವಿರಾಮ ಘೋಷಣೆ
ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ನಿರಂತರ ಆಕ್ರಮಣ ನಡೆಸುತ್ತಿದ್ದ ರಷ್ಯಾ ಶನಿವಾರ ಕದನ ವಿರಾಮ ಘೋಷಿಸಿದೆ. ಉಕ್ರೇನ್ ನೆಲದಲ್ಲಿ ಸಿಲುಕಿರುವ ಬೇರೆ ರಾಷ್ಟ್ರಗಳ ಪ್ರಜೆಗಳ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕದನ ವಿರಾಮವನ್ನು ಘೋಷಿಸಲಾಗಿದೆ. ಉಕ್ರೇನ್‌ನ ಮರಿಯುಪೋಲ್ ಮತ್ತು ವೊಲ್ನೋವಾಖಾ ಪ್ರದೇಶದಿಂದ ನಾಗರಿಕರನ್ನು ಸ್ಥಳಾಂತರಿಸಲು ಅವಕಾಶ ನೀಡುವುದಕ್ಕಾಗಿ ಮಾಸ್ಕೋ ಸಮಯದ ಪ್ರಕಾರ, ಬೆಳಗ್ಗೆ 10 ಗಂಟೆಗೆ ರಷ್ಯಾ ಕದನ ವಿರಾಮವನ್ನು ಘೋಷಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ನಿರಂತರ ಹತ್ತು ದಿನಗಳ ಯುದ್ಧದ ನಂತರದಲ್ಲಿ ಕದನ ವಿರಾಮ ಘೋಷಿಸಲಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications