ರಷ್ಯಾ ವಿರುದ್ಧ ತಿರುಗಿ ಬಿದ್ದ ನ್ಯಾಟೋ ಪಡೆ: ಉಕ್ರೇನ್‌ಗೆ ಸಂಪೂರ್ಣ ಬೆಂಬಲ

ಕೀವ್‌, ಮಾರ್ಚ್ 24: ಉಕ್ರೇನ್‌ ಮೇಲೆ ದಾಳಿ ನಡೆಸಿದ ರಷ್ಯಾದ ವಿರುದ್ಧ ನ್ಯಾಟೋ ಪಡೆಯು ಕಿಡಿಕಾರಿದ್ದು, ಸಂಪೂರ್ಣ ಬೆಂಬಲವನ್ನು ಉಕ್ರೇನ್‌ಗೆ ನೀಡಲು ಮುಂದಾಗಿದೆ. ರಷ್ಯಾವು ಉಕ್ರೇನ್‌ ಮೇಲೆ ಪರಮಾಣು ದಾಳಿ ಮಾಡಿದರೆ, ಅದರಿಂದ ಉಕ್ರೇನ್‌ ಅನ್ನು ರಕ್ಷಣೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಲು ನ್ಯಾಟೋ ಪಡೆಯು ನಿರ್ಧಾರ ಮಾಡಿದೆ.

ರಷ್ಯಾ-ಉಕ್ರೇನ್ ಯುದ್ಧವು ಸುಮಾರು ಒಂದು ತಿಂಗಳಿನಿಂದ ತೀವ್ರಗೊಳ್ಳುತ್ತಿದೆ. ಈ ನಡುವೆ ಯಾವುದೇ ದಾಳಿಗಳನ್ನು ನಿಭಾಯಿಸಲು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ನ್ಯಾಟೋ ಮಿತ್ರರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಗುರುವಾರ ಹೇಳಿದ್ದಾರೆ.

ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಜೆನ್ಸ್ ಸ್ಟೋಲ್ಟೆನ್‌ಬರ್ಗ್, ನ್ಯಾಟೋ ರಾಸಾಯನಿಕ, ಜೈವಿಕ ಮತ್ತು ಪರಮಾಣು ರಕ್ಷಣಾ ಅಂಶಗಳನ್ನು ಸಕ್ರಿಯಗೊಳಿಸಿದೆ ಎಂದು ಹೇಳಿದರು. ಉಕ್ರೇನ್‌ ಮೇಲೆ ರಷ್ಯಾದ ದಾಳಿಯು ತೀವ್ರವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೆನ್ಸ್ ಸ್ಟೋಲ್ಟೆನ್‌ಬರ್ಗ್, "ರಷ್ಯಾವು ಉಕ್ರೇನ್‌ ಮೇಲೆ ಅಣು ಬಾಂಬ್‌ ದಾಳಿ ನಡೆಸಿದರೆ, ಅದು ಸಂಘರ್ಷದ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಉಕ್ರೇನ್ ಮಾತ್ರವಲ್ಲದೆ ನ್ಯಾಟೋ ದೇಶಗಳ ಮೇಲೂ ಪರಿಣಾಮ ಬೀರುತ್ತದೆ," ಎಂದು ಆತಂಕ ವ್ಯಕ್ತಪಡಿಸಿದರು.

 ಚೀನಾಕ್ಕೆ ಸಂದೇಶ ನೀಡಿದ ನ್ಯಾಟೋ ಪ್ರಧಾನ ಕಾರ್ಯದರ್ಶಿ

ಚೀನಾಕ್ಕೆ ಸಂದೇಶ ನೀಡಿದ ನ್ಯಾಟೋ ಪ್ರಧಾನ ಕಾರ್ಯದರ್ಶಿ

"ವಿಶ್ವದ ಇತರ ಭಾಗಗಳೊಂದಿಗೆ ಸೇರಿ ಉಕ್ರೇನ್ ವಿರುದ್ಧದ ಕ್ರೂರ ಯುದ್ಧವನ್ನು ಖಂಡಿಸಬೇಕು ಮತ್ತು ರಷ್ಯಾವನ್ನು ಆರ್ಥಿಕವಾಗಿ ಅಥವಾ ಮಿಲಿಟರಿಯಾಗಿ ಬೆಂಬಲಿಸಬಾರದು ಎಂಬುದು ಚೀನಾಕ್ಕೆ ಸಂದೇಶವಾಗಿದೆ," ಎಂದು ಈ ಸಂದರ್ಭದಲ್ಲೇ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಉಲ್ಲೇಖ ಮಾಡಿದ್ದಾರೆ. "ನಾವು ಒಂದು ಪೀಳಿಗೆಯಲ್ಲಿ ಅತಿದೊಡ್ಡ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ನಮ್ಮ ಮೈತ್ರಿಯನ್ನು ಬಲವಾಗಿ ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿರಿಸಲು ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ," ಎಂದು ತಿಳಿಸಿದರು.

 ನ್ಯಾಟೋದಿಂದ ಉಕ್ರೇನ್‌ಗೆ ಸಂಪೂರ್ಣ ಬೆಂಬಲ

ನ್ಯಾಟೋದಿಂದ ಉಕ್ರೇನ್‌ಗೆ ಸಂಪೂರ್ಣ ಬೆಂಬಲ

ರಷ್ಯಾದ ಈ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಉಕ್ರೇನ್‌ ಪರವಾಗಿ ನ್ಯಾಟೋ ಎಲ್ಲಾ ರಕ್ಷಣಾ ಯೋಜನೆಗಳನ್ನು ಸಕ್ರಿಯಗೊಳಿಸಿದೆ ಎಂದು ನ್ಯಾಟೋ ಹೇಳಿಕೆಯಲ್ಲಿ ತಿಳಿಸಿದೆ. "40,000 ಪಡೆಗಳನ್ನು ಪೂರ್ವದಲ್ಲಿ ನಿಯೋಜನೆ ಮಾಡಲಾಗಿದೆ. ಮಿತ್ರ ರಾಷ್ಟ್ರಗಳೆಲ್ಲವೂ ಸಹಾಯ ಮಾಡಲಿದೆ. ನಾವು ಬಲ್ಗೇರಿಯಾ, ಹಂಗೇರಿ, ರೊಮೇನಿಯಾ ಮತ್ತು ಸ್ಲೋವಾಕಿಯಾದಲ್ಲಿ ನಾಲ್ಕು ಹೆಚ್ಚುವರಿ ಯುದ್ಧ ಪಡೆಯನ್ನು ನಿಯೋಜನೆ ಮಾಡುತ್ತೇವೆ. ಮಿತ್ರರಾಷ್ಟ್ರಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲಾ ಕ್ರಮಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಣು ಬಾಂಬ್‌ ಅನ್ನು ಎದುರಿಸಲು ಬೇಕಾದ ರಕ್ಷಣಾತ್ಮಕ ಕ್ರಮವನ್ನು ಕೂಡಾ ಕೈಗೊಳ್ಳಲಾಗುವುದು. ಸೈಬರ್ ದಾಳಿಯ ಸಂದರ್ಭದಲ್ಲಿ ಪರಸ್ಪರ ಬೆಂಬಲವನ್ನು ಒದಗಿಸುತ್ತೇವೆ. ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಮತ್ತು ಪರಮಾಣು ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ.

 ಯುದ್ಧ ಹಿಂಪಡೆಯಲು ಪುಟಿನ್‌ಗೆ ಮತ್ತೆ ಸೂಚನೆ

ಯುದ್ಧ ಹಿಂಪಡೆಯಲು ಪುಟಿನ್‌ಗೆ ಮತ್ತೆ ಸೂಚನೆ

"ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧವು ಯುರೋಪಿನಲ್ಲಿ ಶಾಂತಿಯನ್ನು ಛಿದ್ರಗೊಳಿಸಿದೆ ಮತ್ತು ಅಗಾಧವಾದ ಮಾನವ ಸಂಕಟ ಮತ್ತು ವಿನಾಶವನ್ನು ಉಂಟುಮಾಡುತ್ತಿದೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು ನಾವು ಪ್ರಬಲವಾಗಿ ಖಂಡನೆ ಮಾಡುತ್ತೇವೆ. ಈ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಮತ್ತೆ ರಷ್ಯಾ ಅಧ್ಯಕ್ಷರಿಗೆ ಸೂಚನೆ ನೀಡುತ್ತೇವೆ. ಬೆಲಾರಸ್‌ಗೂ ನಾವು ಈ ಚಟಿಲತೆಯನ್ನು ಇನ್ನಷ್ಟು ಹೆಚ್ಚಿಸದಂತೆ ಸಲಹೆ ನೀಡುತ್ತೇವೆ," ಎಂದು ತಿಳಿಸಿದ್ದಾರೆ.

 ಲೈಂಗಿಕ ಹಿಂಸಾಚಾರ ಮತ್ತು ಮಾನವ ಕಳ್ಳಸಾಗಣೆಯ ಅಪಾಯ

ಲೈಂಗಿಕ ಹಿಂಸಾಚಾರ ಮತ್ತು ಮಾನವ ಕಳ್ಳಸಾಗಣೆಯ ಅಪಾಯ

"ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವ್ಯಕ್ತಿಗಳು ಸೇರಿದಂತೆ ನಾಗರಿಕರ ಮೇಲೆ ರಷ್ಯಾದ ವಿನಾಶಕಾರಿ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಯುದ್ಧ ಅಪರಾಧಗಳು ಸೇರಿದಂತೆ ಮಾನವೀಯ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಗಳಿಗೆ ರಷ್ಯಾ ಹೊಣೆಯಾಗಿದೆ. ಲೈಂಗಿಕ ಹಿಂಸಾಚಾರ ಮತ್ತು ಮಾನವ ಕಳ್ಳಸಾಗಣೆಯ ಹೆಚ್ಚಿನ ಅಪಾಯದ ಚಿಂತೆ ಈಗ ಉಂಟಾಗಿದೆ. ಮಾರಿಯುಪೋಲ್ ಮತ್ತು ಇತರ ಮುತ್ತಿಗೆ ಹಾಕಿದ ನಗರಗಳಿಗೆ ಮಾನವೀಯ ಸಹಾಯವನ್ನು ಮಾಡಲು ರಷ್ಯಾವನ್ನು ನಾವು ಒತ್ತಾಯ ಮಾಡುತ್ತೇವೆ," ಎಂದು ನ್ಯಾಟೋ ಹೇಳಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+