ರಷ್ಯಾ ಜೊತೆಗೆ ಶಾಂತಿ ಮಾತುಕತೆ ನಡೆಸುವ ಬಗ್ಗೆ ಉಕ್ರೇನ್ ಅಧ್ಯಕ್ಷ ಹೇಳಿದ್ದೇನು?
ರಷ್ಯಾ & ಉಕ್ರೇನ್ ಯುದ್ಧ ಜಗತ್ತಿನ ಶಾಂತಿ ಹಾಗೂ ನೆಮ್ಮದಿಗೆ ಧಕ್ಕೆ ತಂದಿದೆ. ಈಗ ಜಗತ್ತು ಇಬ್ಬರ ಜಗಳ ನೋಡಿ ಸುಸ್ತಾಗಿ ಹೋಗಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹೋಗಿ, ಯಾವ ಕ್ಷಣದಲ್ಲಿ ಏನಾಗುತ್ತೋ? ಎಂಬ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಇಬ್ಬರು ಕೂತು ಸಂಧಾನ ಮಾಡಿಕೊಳ್ಳಲಿ ಎಂಬ ಒತ್ತಡ ಹೆಚ್ಚಾಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ರಷ್ಯಾ ಜೊತೆಗಿನ ಶಾಂತಿ ಮಾತುಕತೆ ಬಗ್ಗೆ ಉಕ್ರೇನ್ ಅಧ್ಯಕ್ಷ ಹೇಳಿದ್ದು ಏನು ಗೊತ್ತಾ?
ಉಕ್ರೇನ್ ದೇಶದ ಒಳಗೆ ತಮ್ಮ ಅಧ್ಯಕ್ಷನ ವಿರುದ್ಧವೇ ಜನ ರೊಚ್ಚಿಗೆದ್ದು, ಆಕ್ರೋಶ ಹೊರ ಹಾಕುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ರಷ್ಯಾ ಜೊತೆಗಿನ ಯುದ್ಧವನ್ನು ಕೆಲವೇ ದಿನಗಳಲ್ಲಿ ಮುಗಿಸಬಹುದಿತ್ತು, ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಾಡಿಕೊಂಡಿರುವ ಎಡವಟ್ಟುಗಳೇ ಯುದ್ಧವನ್ನ 2 ವರ್ಷಗಳ ತನಕ ಎಳೆದು ತಂದಿದೆ ಎಂಬ ಆರೋಪ ಇದೀಗ ಸ್ವತಃ ಉಕ್ರೇನ್ ನೆಲದಲ್ಲೇ ಕೇಳಿಬರುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ರಷ್ಯಾ ಜೊತೆಗಿನ ಶಾಂತಿ & ಮಾತುಕತೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಉನ್ನತ ಸಲಹೆಗಾರ!

ರಷ್ಯಾ ಬಗ್ಗೆ 'ದೆವ್ವ' ಪದ ಬಳಕೆ!
ಅಂದಹಾಗೆ ಯುದ್ಧ ಕೊನೆಗೊಳಿಸಲು ರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕುವುದು ದೆವ್ವದ ಜತೆಗೆ ಒಪ್ಪಂದ ಮಾಡಿಕೊಂಡ ರೀತಿ ಆಗುತ್ತೆ ಅಂತಾ, ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರ ಉನ್ನತ ಸಲಹೆಗಾರ ಮಹತ್ವದ ಹೇಳಿಕೆ ನೀಡಿದ್ದಾರೆ. ಝೆಲೆನ್‌ಸ್ಕಿ ಅವರ ಉನ್ನತ ಸಲಹೆಗಾರ ಮಿಖಾಯಿಲೊ ಪೊಡೊಲ್‌ಯಾಕ್ ನೀಡಿರುವ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಅದ್ರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ಇತ್ತೀಚೆಗೆ ಶಾಂತಿ ಮಾತುಕತೆ ಬಗ್ಗೆ ಪ್ರಸ್ತಾಪ ಮಾಡಿದ್ರು. ಅಲ್ಲದೆ ಸ್ವತಃ ಉಕ್ರೇನ್ ಪ್ರಜೆಗಳು ಕೂಡ ರಷ್ಯಾ ಜೊತೆಗೆ ಶಾಂತಿ ಮಾತುಕತೆ ಮಾಡಿಕೊಳ್ಳಿ, ಎಂದು ಒತ್ತಾಯ ಮಾಡುತ್ತಿದ್ದಾರೆ.
ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಾರಾ?
ಒತ್ತಡಗಳ ಕುರಿತು ಮಾತನಾಡಿರುವ ಉಕ್ರೇನ್ ಅಧ್ಯಕ್ಷರ ಉನ್ನತ ಸಲಹೆಗಾರ, ಅಕಸ್ಮಾತ್ ಈ ರೀತಿ ಒಪ್ಪಂದ ಮಾಡಿಕೊಂಡರೆ ಅದರಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಸೇನೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಮಯ ಸಿಗಲಿದೆ. ಯುದ್ಧದಲ್ಲಿ ಮತ್ತಷ್ಟು ಹೆಚ್ಚಿನ ಹಿಂಸಾತ್ಮಕ ಅಧ್ಯಾಯ ಆರಂಭಿಸುತ್ತಾರೆ ಪುಟಿನ್ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ ಈ ಒಪ್ಪಂದ ದೆವ್ವದ ಜೊತೆಗಿನ ಒಪ್ಪಂದ ಎಂದು ಹೇಳುವ ಮೂಲಕ ಉಕ್ರೇನ್ ಇದೀಗ ಪರೋಕ್ಷವಾಗಿ, ರಷ್ಯಾ ವಿರುದ್ಧ ತಿರುಗಿಬಿದ್ದಿದೆ.












Click it and Unblock the Notifications