Ukraine War: ಯುದ್ಧ ಮುಗಿದ ತಕ್ಷಣ ಅಧ್ಯಕ್ಷ ಸ್ಥಾನ ಬಿಟ್ಟು ಹೋಗ್ತೀನಿ ಅಂತಾ ಹೇಳಿದ ಉಕ್ರೇನ್ ಪ್ರೆಸಿಡೆಂಟ್!

ಉಕ್ರೇನ್ ಒಂದು ಸುಂದರವಾದ ದೇಶ, ಉಕ್ರೇನ್ ನೆಲದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಸಂಪತ್ತು ಇದ್ದು ಈ ದೇಶದಲ್ಲಿ ಜನಸಂಖ್ಯೆ ಕೂಡ ತುಂಬಾ ಕಡಿಮೆ. ಹೀಗಾಗಿ ಉಕ್ರೇನ್ ದೇಶದಲ್ಲಿ ಜನ ಶಾಂತಿ & ನೆಮ್ಮದಿಯ ಜೊತೆಗೆ ಸಮೃದ್ಧವಾಗಿಯೇ ಬದುಕು ಕಟ್ಟಿಕೊಂಡಿದ್ದರು. ಆದರೆ ಯಾವಾಗ 2022 ಫೆಬ್ರವರಿ ತಿಂಗಳಲ್ಲಿ ದಿಢೀರ್ ಅಂತಾ ರಷ್ಯಾ ಸೇನೆ ಉಕ್ರೇನ್ ನೆಲದ ಮೇಲೆ ದಾಳಿ ಶುರು ಮಾಡಿತ್ತೋ, ಅಲ್ಲಿಂದ ಮುಂದೆ ನಡೆದಿದ್ದೆಲ್ಲಾ ಬರೀ ದುರಂತ.. ದುರಂತ... ಹೀಗೆ ಸುಮಾರು 4 ವರ್ಷಗಳಿಂದಲೂ ಎರಡೂ ದೇಶಗಳು ಬಡಿದಾಡುತ್ತಿರುವ ಸಮಯದಲ್ಲೇ ಉಕ್ರೇನ್ ಅಧ್ಯಕ್ಷ ಮಹತ್ವದ ಹೇಳಿಕೆ ನೀಡಿದ್ದಾರೆ.

ರಷ್ಯಾ ಸೇನೆಯಿಂದ ಈಗ ನಡೆಯುತ್ತಿರುವ ದಾಳಿ ದೊಡ್ಡ ಅವಾಂತರ ಸೃಷ್ಟಿ ಮಾಡಿದ್ದು, ಹೀಗೆಲ್ಲಾ ವಾರ್ ನಡೆಯುತ್ತಿರುವ ಸಮಯದಲ್ಲಿ ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವು ಪ್ರಮುಖ ನಗರಗಳ ನೆಲವೇ ನಾಶವಾಗಿ ಹೋಗಿದೆ. ಪರಿಸ್ಥಿತಿ ಕೈಮೀರಿ ಹೋಗಿದ್ದು, ಹಲವು ದೇಶಗಳು ಶಾಂತಿಗಾಗಿ ಪ್ರಯತ್ನ ಮಾಡುತ್ತಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ. ಇನ್ನೊಂದು ಕಡೆ ಉಕ್ರೇನ್ ಕೂಡ ಹಠ ಮುಂದುವರಿಸಿರುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಕಾಡುತ್ತಿದೆ. ಇಂತಹ ಸಮಯದಲ್ಲೇ ಉಕ್ರೇನ್ ಅಧ್ಯಕ್ಷ ತಾನು ಅಧ್ಯಕ್ಷ ಪಟ್ಟ ಬಿಟ್ಟು ಹೋಗುವ ಬಗ್ಗೆ ಮಾತನಾಡಿದ್ದಾರೆ. ಯುದ್ಧ ನಿಲ್ಲಿಸಿದ ತಕ್ಷಣವೇ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತಾ ಹೇಳಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ.

Ukraine President Discusses Potential Power Transition After Conflict Resolution

ಉಕ್ರೇನ್ ಜನರ ಜೀವಕ್ಕೆ ಬೆಲೆ ಇಲ್ವಾ?

ಹೊಡಿ... ಹೊಡಿ... ಅಂತಾ ಹೊಡೆದಾಡುತ್ತಿರುವ ರಷ್ಯಾ & ಉಕ್ರೇನ್ ದೇಶಗಳು ಸಾಮಾನ್ಯ ಜನರ ಜೀವ ತೆಗೆಯುತ್ತಿವೆ. ರಷ್ಯಾ ಅಧ್ಯಕ್ಷ ಮತ್ತೊಮ್ಮೆ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ರಣಭೀಕರ ಅಟ್ಯಾಕ್ ಮಾಡಲು ಆದೇಶ ನೀಡಿದ್ದಾರೆ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ರಷ್ಯಾ & ಉಕ್ರೇನ್ ವಾರ್ ಹಿನ್ನೆಲೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣವೂ 3ನೇ ಮಹಾಯುದ್ಧದ ನರಕ ಕಾಣಿಸುತ್ತಿದೆ. ಹೀಗೆ ಇದ್ದಾಗ ಮತ್ತೊಮ್ಮೆ ರಷ್ಯಾ ರಣಭೀಕರವಾಗಿ ರೈಲು ನಿಲ್ದಾಣದ ಮೇಳೆ ದಾಳಿ ಮಾಡಿದ ಹಿನ್ನೆಲೆ, ಹಲವರು ದಿಢೀರ್ ಮೃತಪಟ್ಟಿದ್ದಾರೆ ಎಂಬ ಆರೋಪ ಮಾಡಿದೆ ಉಕ್ರೇನ್. ಮತ್ತೊಂದು ಕಡೆ ಇದೇ ವಿಚಾರವಾಗಿ ಇದೀಗ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿವೆ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+