Ukraine War: ಫ್ರಾನ್ಸ್ ಜೊತೆ ಉಕ್ರೇನ್ ದೊಡ್ಡ ಡೀಲ್, ರಷ್ಯಾ ಜೊತೆಗೆ ಮತ್ತಷ್ಟು ಘೋರ ಯುದ್ಧ ಶುರು?
ರಷ್ಯಾ ಬಾರಿಸುವ ಏಟಿಗೆ ಉಕ್ರೇನ್ ನಲುಗಿ ಹೋಗಿದ್ದು, ಜೀವ ಉಳಿಸಿಕೊಂಡರೆ ಸಾಕಪ್ಪಾ ದೇವರೇ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನೊಂದು ಕಡೆ ರಷ್ಯಾ ಕೂಡ ರೊಚ್ಚಿಗೆದ್ದು ತನ್ನ ಶತ್ರು & ಆಜನ್ಮ ವೈರಿ ಉಕ್ರೇನ್ ವಿರುದ್ಧ ಪದೇ ಪದೇ ದಾಳಿ ಮಾಡುತ್ತಲೇ ಇದೆ. ಹೀಗೆ ಎಲ್ಲಾ ರೀತಿಯ ದಾಳಿ ಮತ್ತು ಪ್ರತಿದಾಳಿ ನಡುವೆ ನಲುಗಿ ಹೋಗಿರುವ ಉಕ್ರೇನ್ ದೇಶದ ಜನರು ದಿಕ್ಕಾಪಾಲಾಗಿ, ಹಲವು ಹೊಸ ಪ್ರದೇಶಗಳಿಗೆ ಓಡಿ ಹೋಗಿದ್ದಾರೆ. ಇಂತಹ ವಾತಾವರಣದಲ್ಲಿ ರಷ್ಯಾ ವಿರುದ್ಧದ ಈ ಯುದ್ಧ ಗೆಲ್ಲಲು ಹೊಸ ಪ್ಲಾನ್ ಹಾಕಿದೆ ಉಕ್ರೇನ್. ಅದರಲ್ಲೂ ಇದೀಗ ಫ್ರಾನ್ಸ್ ಜೊತೆಯಲ್ಲಿ ಮಹತ್ವದ ಒಪ್ಪಂದ ಸಿದ್ಧವಾಗಿದೆ!
ಉಕ್ರೇನ್ ಈಗ ಹೇಗೆ ಆಗಿದೆ ಅಂದ್ರೆ ಯಾರೇ ಬಂದು ಸಹಾಯ ಮಾಡಿದರೂ ಅವರ ಬಳಿ ಸಿಗುವ ಹಣಕ್ಕೆ ಕೈಚಾಚುತ್ತಿದೆ. ಅದರಲ್ಲೂ ಅಮೆರಿಕ ಈಗಾಗಲೇ ಲಕ್ಷಾಂತರ ಕೋಟಿ ರೂಪಾಯಿ ಹಣ ಸೇರಿದಂತೆ ಶಸ್ತ್ರಾಸ್ತ್ರ ಕೊಟ್ಟು ಸಹಾಯ ಮಾಡಿದೆ. ಹೀಗಿದ್ದರೂ ಉಕ್ರೇನ್‌ಗೆ ಮಾತ್ರ ದಾಹ ನೀಗಿಲ್ಲ. ರಷ್ಯಾ ಜೊತೆಗೆ ಕಳೆದ ಕೆಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬಂದಿರುವ ಉಕ್ರೇನ್‌ಗೆ ಈಗ ಮತ್ತೆ ಅದರ ಅಗತ್ಯತೆ ಇದ್ದು, ಫ್ರಾನ್ಸ್ ಜೊತೆಗೆ ದಿಢೀರ್ ಮಹತ್ವದ ಒಪ್ಪಂದಕ್ಕೆ ಮುಂದಾಗಿದೆ. ಈ ಮೂಲಕ ರಷ್ಯಾಗೆ ಚಾಲೆಂಜ್ ಹಾಕಲು ಮುಂದೆ ನುಗ್ಗಿದ್ದಾರೆ ಉಕ್ರೇನ್ ಸೇನೆಯ ಯೋಧರು.

ಕೆರಳಿದ ರಷ್ಯಾ, ಮುಂದೇನು ಕಥೆ?
ಫ್ರಾನ್ಸ್ & ಉಕ್ರೇನ್ ನಡುವೆ ನಡೆದಿರುವ ಒಪ್ಪಂದದ ಪ್ರಕಾರ ಇದೀಗ ಒಟ್ಟು 100 ರಫೇಲ್ ಯುದ್ಧ ವಿಮಾನಗಳನ್ನ ಪೂರೈಸಲು ಒಪ್ಪಿಗೆ ಸೂಚಿಸಲಾಗಿದೆ. ಫ್ರಾನ್ಸ್ ದೇಶದ ಸ್ವದೇಶಿ ಯುದ್ಧ ವಿಮಾನ ಎಂದು ಕರೆಸಿಕೊಳ್ಳುವ ರಫೇಲ್ ಫೈಟರ್ ಜೆಟ್‌ಗಳು ರಷ್ಯಾ ವಿರುದ್ಧ ಹೋರಾಟ ನಡೆಸಲು ಇದೇ ಉಕ್ರೇನ್ ಸೇನೆಗೆ ದೊಡ್ಡ ಸಹಾಯ ಮಾಡಲಿವೆ. ಇನ್ನು ಹೀಗೆ ಫ್ರಾನ್ಸ್ & ಉಕ್ರೇನ್ ನಡುವೆ ನಡೆದ ಒಪ್ಪಂದ ಇದೀಗ ರಷ್ಯಾ ಸೇನೆಯನ್ನ ಕೆರಳಿಸಿ ಕೆಂಡವಾಗಿಸಿದೆ. ಏಕೆಂದರೆ ಈಗಿರುವ ಪರಿಸ್ಥಿತಿಯ ಮಧ್ಯೆ ಫ್ರಾನ್ಸ್ ಈ ಯುದ್ಧದಲ್ಲಿ ಮಧ್ಯಪ್ರವೇಶ ಮಾಡಿದಂತೆ ಆಗಲಿದೆ ಎಂಬ ಆರೋಪವನ್ನ ಕೂಡ ರಷ್ಯಾ ಮಾಡಿದೆ.
ಭವಿಷ್ಯದಲ್ಲೂ ಇದೇ ರೀತಿಯ ಬಡಿದಾಟ?
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪದೇ ಪದೇ ಪಾಶ್ಚಿಮಾತ್ಯ ದೇಶಗಳು ಎಂಟ್ರಿ ಕೊಡ್ತಿವೆ. ಈ ವಿಚಾರವಾಗಿ ತಿಕ್ಕಾಟ ಕೂಡ ನಿಂತಿಲ್ಲ, ಇಷ್ಟಾದರೂ ಇದೀಗ ದಿಢೀರ್ ಅಂತಾ ಫ್ರಾನ್ಸ್ ಕೂಡ ಮಧ್ಯಪ್ರವೇಶ ಮಾಡಿ ರಷ್ಯಾಗೆ ಮತ್ತಷ್ಟು ಕೋಪ ಬರುವಂತೆ ಮಾಡಿದೆ. ಇದು ಮುಂದೆ ಏನೆಲ್ಲಾ ಸಮಸ್ಯೆಗೆ ಕಾರಣ ಆಗಬಹುದು? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications