Ukraine War: ಚೀನಾ ವಿರುದ್ಧ ಉಕ್ರೇನ್ ಗಂಭೀರ ಆರೋಪ- ಚೀನಾ ಸೈನಿಕರ ಸಮೇತ ಪರೇಡ್!

ಉಕ್ರೇನ್ ಇದೀಗ ರಷ್ಯಾ ವಿರುದ್ಧ ಮಾತ್ರವಲ್ಲದೆ, ರಷ್ಯಾಗೆ ಸಹಾಯ ಮಾಡುತ್ತಿರುವ ಎಲ್ಲಾ ದೇಶಗಳಿಗೂ ಪಾಠ ಕಲಿಸಲು ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಬೆನ್ನಿಗೆ ನಿಂತಿರುವ ಚೀನಾ ವಿರುದ್ಧ ಕೂಡ ತೊಡೆತಟ್ಟಿ ನಿಂತಿರುವ ಉಕ್ರೇನ್, ಚೀನಾ ವಿರುದ್ಧ ಕೂಡ ಗಂಭೀರವಾದೆ ಆರೋಪ ಮಾಡಿದೆ. ಅದರಲ್ಲೂ ಉಕ್ರೇನ್ ಮಿಲಿಟರಿ ಸೆರೆಹಿಡಿದ ಚೀನಾ ಸೈನಿಕರನ್ನು ಕರೆದುಕೊಂಡು ಬಂದು ಪರೇಡ್ ಮಾಡಿಸಿ ಚೀನಾಗೆ ದೊಡ್ಡ ಆಘಾತ ನೀಡಿದೆ.

ಹೌದು, ಇತ್ತೀಚೆಗೆ ಉಕ್ರೇನ್ ಗಂಭೀರ ಆರೋಪ ಒಂದನ್ನು ಮಾಡಿತ್ತು. 3 ವರ್ಷಗಳಿಂದಲೂ ರಷ್ಯಾ & ಉಕ್ರೇನ್ ನಡುವೆ ಗಲಾಟೆ ನಡೆಯುತ್ತಿದ್ದು, ಉತ್ತರ ಕೊರಿಯಾ ರೀತಿ ಚೀನಾ ಸೇನೆಯು ಕೂಡ ಬೆಂಬಲಕ್ಕೆ ನಿಂತಿದೆ ಎಂಬ ಆರೋಪ ಮಾಡಿತ್ತು. ಅಲ್ಲದೆ ಚೀನಾ ತನ್ನ ಸೈನಿಕರನ್ನ ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾಗೆ ಕಳುಹಿಸಿದೆ ಎಂದು ಆರೋಪ ಮಾಡಲಾಗಿತ್ತು. ಈ ಆರೋಪ ಭಾರಿ ಸಂಚಲನ ಸೃಷ್ಟಿ ಮಾಡಿತ್ತು, ಅಲ್ಲದೆ ಚೀನಾ ಈ ಆರೋಪವನ್ನು ತಿರಸ್ಕರಿಸಿ ಸುಳ್ಳು ಎಂದಿತ್ತು. ಇಷ್ಟೆಲ್ಲದರ ನಡುವೆ ಉಕ್ರೇನ್ ದಿಢೀರ್ ತನ್ನ ಬಳಿ ಇದ್ದ ಚೀನಾ ಸೈನಿಕರ ಪಡೆಯನ್ನೇ ಕರೆದುಕೊಂಡು ಬಂದು ಪರೇಡ್ ಮಾಡಿದೆ.

Ukraine Highlights Beijing s Involvement with Captured Chinese Fighters

ಅಧ್ಯಕ್ಷನಿಂದಲೇ ಗಂಭೀರ ಆರೋಪ

ಚೀನಾ ಈ ಹಿಂದಿನಿಂದ ಕೂಡ ರಷ್ಯಾಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ, ಆ ಮೂಲಕ ಉಕ್ರೇನ್ ವಿರುದ್ಧ ನಿಂತಿದೆ ಎಂಬ ಆರೋಪ ಮಾಡಲಾಗಿತ್ತು. ಹೀಗಿದ್ದಾಗ, ಕೆಲವು ದಿನಗಳ ಹಿಂದೆ ಸುಮಾರು 150ಕ್ಕೂ ಹೆಚ್ಚು ಚೀನಿ ಸೈನಿಕರನ್ನು ಉಕ್ರೇನ್ ಬಂಧಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಹೇಳಿದ್ದರು. ಈ ಹೇಳಿಕೆ ಬಳಿಕ ದೊಡ್ಡ ಸಂಚಲನ ಸೃಷ್ಟಿಯಾಗಿ, ಚೀನಾ ಕೂಡ ಉಕ್ರೇನ್‌ಗೆ ತಲೆ ಕೆಟ್ಟಿದೆ ಎನ್ನುವ ರೀತಿಯ ರಿಯಾಕ್ಷನ್ ಕೂಡ ನೀಡಿತ್ತು. ಅದೇ ಕಾರಣಕ್ಕೆ ರಷ್ಯಾ ನೆಲದಲ್ಲಿ ನುಗ್ಗಿ ತಾನು ಬಂಧಿಸಿದ್ದ ಚೀನಾ ಮಿಲಿಟರಿಯ ಸೈನಿಕರನ್ನು ಉಕ್ರೇನ್ ಇದೀಗ ಕರೆದುಕೊಂಡು ಬಂದು ಜಗತ್ತಿನ ಎದುರಿಗೆ ನಿಲ್ಲಿಸಿದೆ.

ಚೀನಾ ವಿರುದ್ಧ ಕ್ರಮಕ್ಕೆ ಆಗ್ರಹ

ಒಟ್ನಲ್ಲಿ ಈಗ ಉಕ್ರೇನ್ ಪಟ್ಟು ಹಿಡಿದು ಕೂತಿದ್ದು, ರಷ್ಯಾ ರೀತಿಯಲ್ಲೇ ಚೀನಾ ವಿರುದ್ಧವು ಕೂಡ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಮಾಡಲಾಗಿದೆ. 3 ವರ್ಷಗಳಿಂದ ರಷ್ಯಾ & ಉಕ್ರೇನ್ ಯುದ್ಧವು ನಡೆಯುತ್ತಿದೆ, ಇನ್ನೊಂದ್ಕಡೆ ಈ ಹಿಂದೆ ಉತ್ತರ ಕೊರಿಯಾ ಸೈನಿಕರು ಎಂಟ್ರಿಯನ್ನ ಕೊಟ್ಟಿದ್ದರು. ಹೀಗೆ ಉತ್ತರ ಕೊರಿಯಾದ ಎಂಟ್ರಿ ನಂತರ ಉಕ್ರೇನ್ ಭಾರಿ ಆಕ್ರೋಶ ಹೊರ ಹಾಕಿತ್ತು.

ಇದೀಗ ಚೀನಾ ಕೂಡ ತನ್ನ ಸೈನಿಕರನ್ನು ಕಳುಹಿಸಿದೆ ಎಂಬ ಆರೋಪ ಮಾಡಿ, ಸಾಕ್ಷ್ಯ ಕೂಡ ನೀಡುತ್ತಿದೆ. ಹೀಗಾಗಿಯೇ ರಷ್ಯಾ & ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಕಠಿಣವಾಗ್ತಿದೆ. ಅಮೆರಿಕ ಸೇರಿದಂತೆ ಯುರೋಪ್ ದೇಶಗಳು ಉಕ್ರೇನ್ ಬೆನ್ನಿಗೆ ನಿಂತು ಲಕ್ಷಾಂತರ ಕೋಟಿ, ಸಹಾಯ ಮಾಡಿದ್ದವು. ಆದರೆ ಇದೀಗ ಯುರೋಪ್ & ಯುಕೆ ಬಿಟ್ಟರೆ ಉಕ್ರೇನ್ ಸಹಾಯಕ್ಕೆ ಯಾರೂ ಇಲ್ಲ. ಹೀಗಾಗಿ ಉಕ್ರೇನ್ ಕೂಡ ರಷ್ಯಾ ವಿರುದ್ಧ ಮೈಕೊಡವಿ ನಿಂತಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+