ಉಕ್ರೇನ್‌ಗೆ ಈಗ ಸಾಲಗಾರರ ಕಾಟ ಶುರು, ಮುಂದಿನ ಪರಿಸ್ಥಿತಿ ಏನು?
ಗಾಜಾ & ಇಸ್ರೇಲ್ ನಡುವಿನ ಯುದ್ಧ ನಿಂತ ನಂತರ ಉಕ್ರೇನ್ & ರಷ್ಯಾ ಯುದ್ಧ ಕೂಡ ನಿಲ್ಲಲಿದೆ, ಆ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಬೇರೆ ಪರಿಸ್ಥಿತಿ ನಿರ್ಮಾಣ ಆಗಿದೆ. ಗಾಜಾ & ಇಸ್ರೇಲ್ ನಡುವಿನ ಯುದ್ಧ ನಿಂತು ಹೋಗಿದ್ದರೂ ಉಕ್ರೇನ್ & ರಷ್ಯಾ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಬದಲಾಗಿ ಉಕ್ರೇನ್ ಇನ್ನಷ್ಟು ಸಂಕಷ್ಟದ ಕುಲುಮೆಗೆ ಸಿಲುಕಿದ್ದು, ದಿಢೀರ್ ಮತ್ತೊಂದು ಸಮಸ್ಯೆ ಎದುರಿಸುತ್ತಿದೆ. ಅಂದಹಾಗೆ ಉಕ್ರೇನ್‌ಗೆ ಈಗ ಸಾಲಗಾರರ ಕಾಟ ಶುರು, ಮುಂದಿನ ಪರಿಸ್ಥಿತಿ ಏನು?
ರಷ್ಯಾ ತನ್ನ ಶತ್ರು ಉಕ್ರೇನ್ ವಿರುದ್ಧ ಯುದ್ಧ ಶುರು ಮಾಡಿ, ಮೂರು ಮುಕ್ಕಾಲು ವರ್ಷ ಕಳೆದಿದೆ. ಉಕ್ರೇನ್ ಮಿಲಿಟರಿ ರಷ್ಯಾ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಎಂಬ ಹುಮ್ಮಸ್ಸಿನಲ್ಲಿತ್ತು. ರಷ್ಯಾ ಸೇನೆ 2022ರಲ್ಲಿ ಯುದ್ಧ ಶುರು ಮಾಡಿದಾಗ ರೊಚ್ಚಿಗೆದ್ದು ಮರುದಾಳಿ ಆರಂಭಿಸಿ ತಾನು ಗೆದ್ದೇ ಗೆಲ್ಲುತ್ತೇನೆ ಅಂತ ಗುಟುರು ಹಾಕಿತ್ತು ಉಕ್ರೇನ್ ಮಿಲಿಟರಿ. ಆದರೆ ಈಗ ರಷ್ಯಾ ಸೇನೆ ವಿರುದ್ಧ ಗೆಲ್ಲುವ ಮಾತು ಬಿಡಿ, ಉಕ್ರೇನ್ ಸೇನೆಗೆ ಜೀವ ಉಳಿಸಿಕೊಳ್ಳುವುದು ಕೂಡ ಕಷ್ಟವೇ ಆಗುತ್ತಿದೆ. ಹೀಗಾಗಿ, ನ್ಯಾಟೋ ದೇಶಗಳು ಉಕ್ರೇನ್ ಗಡಿಯಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚುತ್ತಿವೆ. ಇದರ ಜೊತೆಗೆ ಉಕ್ರೇನ್ ಮಾಡಿಕೊಂಡಿದ್ದ ಸಾಲಗಳ ಪ್ರಮಾಣ ಕೂಡ ಹೆಚ್ಚಾಗುತ್ತಿದೆ.

ಉಕ್ರೇನ್‌ಗೆ ಈಗ ಸಾಲಗಾರರ ಕಾಟ!
ಹೌದು, ರಷ್ಯಾ ವಿರುದ್ಧ ಹೋರಾಟ ನಡೆಸುವ ಹುಮ್ಮಸ್ಸಿನಲ್ಲಿ ಏನೇನೋ ಎಡವಟ್ಟು ಮಾಡಿಕೊಂಡ ಉಕ್ರೇನ್ ಸರ್ಕಾರ ಮೈತುಂಬಾ ಸಾಲ ಮಾಡಿಕೊಂಡಿದೆ. ಈ ಪೈಕಿ ಬೇರೆ ಬೇರೆ ದೇಶಗಳ ಬಳಿ ಸಾಲ ಪಡೆದಿದ್ದೂ ಸೇರಿದಂತೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮೂಲಕ ಕೂಡ ಸಾಲ ಪಡೆದುಬಿಟ್ಟಿದೆ. ಇದು ಉಕ್ರೇನ್‌ಗೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಜೊತೆಗೆ ಭವಿಷ್ಯದಲ್ಲಿ ಉಕ್ರೇನ್ ಸಾಲ ತೀರಿಸಲು ಒದ್ದಾಡುವ ವಾತಾವರಣ ನಿರ್ಮಾಣ ಆಗುವುದು ಬಹುತೇಕ ಗ್ಯಾರಂಟಿ ಅಂತಿದ್ದಾರೆ ತಜ್ಞರು.
ಸಾಲದಲ್ಲೇ ಒದ್ದಾಡುತ್ತಿರುವ ಉಕ್ರೇನ್...
ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಮೇಲಿಂದ ಮೇಲೆ ಹೊಸ ಐಡಿಯಾ ಮಾಡುತ್ತಿವೆ. ಈ ಮೂಲಕ ಪದೇ ಪದೇ ವ್ಲಾದಿಮಿರ್ ಪುಟಿನ್ ಸೇರಿ, ರಷ್ಯಾ ಸೇನೆ ಬಲ ಕುಗ್ಗಿಸಲು ಎಲ್ಲಾ ರೀತಿ ಪ್ರಯತ್ನ ನಡೆಯುತ್ತಿವೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಅದರಲ್ಲೂ ಉಕ್ರೇನ್ ಬೆನ್ನಿಗೆ ನೇರವಾಗಿ ನಿಂತಿರುವ ಯುರೋಪ್ ದೇಶಗಳ ಒಕ್ಕೂಟ, ಹಣಕಾಸು & ಮಿಲಿಟರಿ ಸೇರಿ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಹೀಗಾಗಿ ಉಕ್ರೇನ್ ದೇಶಕ್ಕೆ ಬಲ ಸಿಕ್ಕಿದ್ದರೂ ಮೈತುಂಬಾ ಸಾಲ ಮಾಡಿಕೊಂಡು ಒದ್ದಾಡುವ ಪರಿಸ್ಥಿತಿಗೆ ಈಗ ತಲುಪಿದೆ.












Click it and Unblock the Notifications