ಉಕ್ರೇನ್ ಧರೆ ಹೊತ್ತಿ ಉರಿಯಲು ಕಾರಣವಾಯಿತೇ "ಉರಿಯುವ ಈರುಳ್ಳಿ"!
ಕೀವ್, ಮಾರ್ಚ್ 13: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ 18ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ರಷ್ಯಾ ಬಳಕೆ ಮಾಡುತ್ತಿದೆ ಎನ್ನಲಾದ "ಉರಿಯುವ ಈರುಳ್ಳಿ" ಬಾಂಬ್ ಉಕ್ರೇನಿಗರ ಎದೆಯಲ್ಲಿ ನಡುಕವನ್ನು ಹೆಚ್ಚಿಸಿದೆ.
ನಿರಂತರ ಆಕ್ರಮಣ ನಡೆಸುತ್ತಿರುವ ರಷ್ಯಾ ಇದೀಗ "ಉರಿಯುವ ಈರುಳ್ಳಿ" ಬಾಂಬ್ ಅನ್ನು ಬಳಕೆ ಮಾಡುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಲುಗಾನ್ಸ್ಕ್‌ನ ಪೂರ್ವ ಪ್ರದೇಶದಲ್ಲಿ ರಷ್ಯಾದ ಪಡೆಗಳು ರಂಜಕ ಬಾಂಬ್(ಉರಿಯುವ ಈರುಳ್ಳಿ ಬಾಂಬ್) ಸ್ಫೋಟಗಳನ್ನು ನಡೆಸುತ್ತಿವೆ ಎಂದು ಉಕ್ರೇನಿಯನ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
ನಾಜಿಗಳು ಇದನ್ನು 'ಉರಿಯುವ ಈರುಳ್ಳಿ' ಎಂದು ಕರೆದಿದ್ದಾರೆ. ನಮ್ಮ ಪಟ್ಟಣಗಳ ಮೇಲೆ ರಷ್ಯಾವಾದಿಗಳು ಮುರಿದು ಬೀಳುತ್ತಿದ್ದಾರೆ. ನಮಗೆ ವರ್ಣಿಸಲಾಗದಷ್ಟು ಸಂಕಟವಾಗುತ್ತಿದ್ದು, ಬೆಂಕಿ ಹೊತ್ತಿ ಉರಿಯುತ್ತಿದೆ," ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಲುಗಾನ್ಸ್ಕ್ ನಗರದ ಪಶ್ಚಿಮಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಪೊಪಾಸ್ನಾದಲ್ಲಿ ಪೊಲೀಸ್ ಮುಖ್ಯಸ್ಥ ಒಲೆಕ್ಸಿ ಬಿಲೋಶಿಟ್ಸ್ಕಿ ಶನಿವಾರ ತಡರಾತ್ರಿ ರಷ್ಯಾದ ಪಡೆಗಳು ತನ್ನ ಪ್ರದೇಶದಲ್ಲಿ ರಾಸಾಯನಿಕ ಅಸ್ತ್ರವನ್ನು ಬಳಸಿದೆ ಎಂದು ದೂಷಿಸಿದ್ದಾರೆ. ಹಾಗಿದ್ದರೆ ಉಕ್ರೇನಿಗರಿಗೆ ಈ ರಂಜಕ ಬಾಂಬ್ ಭಯ ಹುಟ್ಟಿಸಿರುವುದು ಏಕೆ?, ರಂಜಕ ಬಾಂಬ್ ಇತರೆ ಶಸ್ತ್ರಾಸ್ತ್ರಗಳಿಗಿಂತ ಹೇಗೆ ಭಿನ್ನ?, ಸಾಮಾನ್ಯ ಬಾಂಬ್ ಮತ್ತು ಶೆಲ್ ದಾಳಿಗಿಂತ ಹೇಗೆ ಅಪಾಯಕಾರಿ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ಜಾಗತಿಕ ಕಾನೂನಿನ ಪ್ರಕಾರ ರಂಜಕ್ ಬಾಂಬ್ ಬಳಕೆ ನಿಷಿದ್ಧ
ಅಂತರಾಷ್ಟ್ರೀಯ ಕಾನೂನಿನ ಪ್ರಕಾರ, ದಟ್ಟವಾದ ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ಈ ಬಿಳಿ ರಂಜಕ ಬಾಂಬ್ ಅಥವಾ ಶೆಲ್ ದಾಳಿಯನ್ನು ನಡೆಸುವಂತಿಲ್ಲ. ಆದರೆ ಸೈನ್ಯದ ರಕ್ಷಣೆಯಾಗಿ ಬಯಲು ಪ್ರದೇಶಗಳಲ್ಲಿ ಅದನ್ನು ಬಳಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಏಕೆಂದರೆ ಅಂತರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯ ಪ್ರಕಾರ, ಬೆಂಕಿ ಹೊತ್ತಿಸಿದ ನಂತರ ಬಾಂಬ್‌ಗಳಲ್ಲಿನ ರಂಜಕವು 800 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಉರಿಯುತ್ತದೆ. ಇದರಿಂದಾಗಿ ಬೆಂಕಿಯು ನೂರಾರು ಚದರ ಕಿಲೋಮೀಟರ್‌ಗಳಷ್ಟು ಹರಡುವ ಅಪಾಯವಿರುತ್ತದೆ.

ಜಿನೇವಾ ಸಭೆಯಲ್ಲಿ ಬಿಳಿ ರಂಜಕ ಸಾಮಗ್ರಿ ಬಳಕೆ ನಿಷೇಧ
ಸಾಮಾನ್ಯವಾಗಿ ನಾಗರಿಕರಿಗೆ ಅಪಾಯವನ್ನು ಉಂಟು ಮಾಡುವ ಬಿಳಿ ರಂಜಕದ ಯುದ್ಧ ಸಾಮಗ್ರಿಗಳನ್ನು ಬಳಸುವಂತಿಲ್ಲ ಎಂದು ಜಾಗತಿಕ ಮಟ್ಟದಲ್ಲಿ ನಿರ್ಬಂಧ ಹೇರಲಾಗಿತ್ತು. 1977ರಲ್ಲಿ ನಡೆದ ಜಿನೇವಾ ಸಭೆಯಲ್ಲಿಯೇ ಈ ಕುರಿತು ಹೆಚ್ಚುವರಿ ಪ್ರೋಟೋಕಾಲ್ ಅನ್ನು ಜಾರಿಗೊಳಿಸಲಾಗಿತ್ತು.

ಬಿಳಿ ರಂಜಕದ ಯುದ್ಧ ಸಾಮಗ್ರಿಗಳು ಹೇಗೆ ಬಳಕೆ ಆಗುತ್ತೆ?
ಜಾಗತಿಕ ಕಾನೂನಿನ ಪ್ರಕಾರ ನಿಷೇಧಿಸಲ್ಪಟ್ಟಿರುವ ಬಿಳಿ ರಂಜಕವನ್ನು ಯುದ್ಧ ಸಾಮಗ್ರಿಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಹೊಗೆ ಪರದೆಗಳನ್ನು ರಚಿಸುವುದಕ್ಕೆ, ಬೆಳಕನ್ನು ಹೆಚ್ಚಿಸುವುದು, ನಿಗದಿತ ಗುರಿಗಳನ್ನು ಗುರುತಿಸಲು ಅಥವಾ ಬಂಕರ್‌ಗಳು ಮತ್ತು ಕಟ್ಟಡಗಳನ್ನು ಸುಡುವುದಕ್ಕಾಗಿ ಯುದ್ಧಭೂಮಿಯಲ್ಲಿ ಬಿಳಿ ರಂಜಕದ ಯುದ್ಧಸಾಮಗ್ರಿಗಳನ್ನು ಬಳಸಲಾಗುತ್ತದೆ. ನಿಗದಿತ ಕಾನೂನಿನ ಅಡಿಯಲ್ಲಿ ಇದರ ಬಳಕೆಗೆ ಅವಕಾಶವಿರುವ ಕಾರಣಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಳಿ ರಂಜಕವನ್ನು ರಾಸಾಯನಿಕ ಶಸ್ತ್ರಾಸ್ತ್ರಗಳಂತೆ ಸಂಪೂರ್ಮವಾಗಿ ನಿಷೇಧಿಸಿಲ್ಲ.

ರಷ್ಯಾ ನಡೆಸಿದ ಶೆಲ್ ದಾಳಿಯ ಪರಿಣಾಮ ಹೇಗಿದೆ?
ರಷ್ಯಾ ನಡೆಸಿದ ಶೆಲ್ ದಾಳಿಯಿಂದ ಮರಿಯೋಪೋಲ್ ನಗರದಲ್ಲಿ ನೀರಿನ ಸರಬರಾಜು ಕಟ್ ಆಗಿದೆ. ನಗರದಲ್ಲಿ ಬೃಹತ್ ಕಟ್ಟಡಗಳು, ವಸತಿ ಗೃಹಗಳು ಧರೆಗೆ ಉರುಳಿವೆ. ಆಸ್ಪತ್ರೆಗಳು ಮತ್ತು ರಸ್ತೆಗಳು ನಾಶವಾಗಿವೆ. ಈ ಯುದ್ಧ ಸನ್ನಿವೇಶದ ನಡುವೆಯೂ ಉಕ್ರೇನಿಗರು ತಮ್ಮ ದೇಶ ಮತ್ತು ಪ್ರಜೆಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತಿದ್ದಾರೆ.
"ಯುದ್ಧದಿಂದ ಹಾಲಿನ ಉತ್ಪಾದನೆ ಮತ್ತು ಕೃಷಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ನಮಗೆ ಕೃಷಿ ಉತ್ಪಾದನೆಗೆ ಅಗತ್ಯ ಬೀಜ, ಇಂಧನ ಮತ್ತು ರಸಗೊಬ್ಬರ ಬೇಕಾಗುತ್ತವೆ. ಬಹುಪಾಲು ರಸ್ತೆಗಳನ್ನು ಮುಚ್ಚಲಾಗಿದ್ದು, ವಿಶ್ವಾಸಾರ್ಹ ಮೂಲಗಳು ಬೇಕಾಗುತ್ತವೆ," ಎಂದು ಉಕ್ರೇನಿಯನ್ ರೈತ ಪೆಟ್ರೋ ಹೇಳಿದ್ದಾರೆ.
-
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications