ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಛಿದ್ರವಾದ ಉಕ್ರೇನ್‌ ನಗರಗಳು

ರಷ್ಯಾ ತನ್ನ ಹಠ ಬಿಡದೆ ಭೀಕರ ದಾಳಿ ನಡೆಸುತ್ತಿದ್ದು, ಉಕ್ರೇನ್ ಸರ್ವನಾಶಕ್ಕೆ ಪಣತೊಟ್ಟು ತನ್ನಲ್ಲಿರುವ ಉಗ್ರ ಅಸ್ತ್ರಗಳನ್ನ ಪ್ರಯೋಗ ಮಾಡುತ್ತಿದೆ. ಹೀಗಾಗಿ ಭೀಕರ ದಾಳಿ ಪರಿಣಾಮ ಉಕ್ರೇನ್‌ನ ಪ್ರಮುಖ ನಗರಗಳಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಅದರಲ್ಲೂ ನಿನ್ನೆ ರಾತ್ರಿಯಿಂದ ರಷ್ಯಾ ಸೇನೆ ತನ್ನ ದಾಳಿಯನ್ನು ಮತ್ತಷ್ಟು ಜೋರು ಮಾಡಿದೆ ಅಂತಾ ಹೇಳಲಾಗಿದ್ದು, ಹಲವರ ಪ್ರಾಣಪಕ್ಷಿ ಹಾರಿ ಹೋಗಿದೆ.

ರಷ್ಯಾ ಸೇನೆ ಉಕ್ರೇನ್‌ನ ಪ್ರಮುಖ ನಗರಗಳನ್ನ ಟಾರ್ಗೆಟ್ ಮಾಡಿಕೊಂಡು ಈಗ ಕ್ಷಿಪಣಿಗಳನ್ನ ಹಾರಿಸುತ್ತಿದೆ. ಅದರಲ್ಲೂ ಒಂದೇ ಬಾರಿಗೆ ನೂರಾರು ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಭಾರಿ ದಾಳಿಗೆ 16 ಜನ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಪ ಮಾಡಿದೆ. ಹಾಗೇ ಉಕ್ರೇನ್, ಗಾಯಗೊಂಡ ಜನರಿಗೆ ಚಿಕಿತ್ಸೆ ನೀಡೋದಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗೆ ಎಲ್ಲೆಲ್ಲೂ ಗಾಯಾಳುಗಳ ನೋವು, ಕೂಗು ಕೇಳಿಸುತ್ತಿದೆ. ಹೀಗಿದ್ದಾಗ ಉಕ್ರೇನ್ ಸರ್ಕಾರವೂ ಅಸಹಾಯಕ ಪರಿಸ್ಥಿತಿಗೆ ತಲುಪಿದೆ.

Ukraine Alleged That Russia Launched 122 Missiles

ಒಂದೇ ದಿನಕ್ಕೆ 122 ಕ್ಷಿಪಣಿ ಉಡಾವಣೆ!

ನಿನ್ನೆ ಒಂದೇ ದಿನ 122 ಕ್ಷಿಪಣಿ & 36 ಡ್ರೋನ್‌ನ ರಷ್ಯಾ ಉಡಾಯಿಸಿದೆ. ಇದ್ರಲ್ಲಿ 87 ಕ್ಷಿಪಣಿ & 27 ಶಾಹಿದ್‌ ಮಾದರಿ ಡ್ರೋನ್‌ನ ಉಕ್ರೇನ್ ವಾಯುಪಡೆ ಹೊಡೆದುರುಳಿಸಿದೆ ಎನ್ನಲಾಗಿದೆ. ಈ ಬಗ್ಗೆ ಉಕ್ರೇನ್‌ ಸೇನಾ ಮುಖ್ಯಸ್ಥ ವೆಲೇರಿ ಝಲುಝ್ನಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಈಗ ರಷ್ಯಾ ಸೇನೆ ನಡೆಸಿದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಜೊತೆಯಲ್ಲಿ ಆಸ್ಪತ್ರೆ, ಶಾಲೆ ಸೇರಿದಂತೆ ಪ್ರಮುಖ ಕಟ್ಟಡಗಳು ನಾಶವಾಗಿ ಹೋಗಿವೆ ಎನ್ನಲಾಗಿದೆ.

6 ನಗರಗಳ ಮೇಲೆ ಡೆಡ್ಲಿ ಅಟ್ಯಾಕ್

ಉಕ್ರೇನ್ ರಾಜಧಾನಿ ಕೀವ್‌ ಸೇರಿ 6 ನಗರಗಳ ಮೇಲೆ ರಷ್ಯಾ ದಾಳಿ ಮಾಡಿದೆ. ಜಲಾಂತರ್ಗಾಮಿ ನೌಕೆ ಸಹಾಯದಿಂದ ಉಡಾಯಿಸುವ ಕಲಿಬ್‌ ಕ್ಷಿಪಣಿ ಬಿಟ್ಟು, ತನ್ನಲ್ಲಿ ಇರುವ ಎಲ್ಲ ಅಸ್ತ್ರನ ರಷ್ಯಾ ಸೇನೆ ಬಳಸಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಉಕ್ರೇನ್‌ನ ಪ್ರಮುಖ ನಗರ ಪ್ರದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಹಾಗೇ ಭಯದ ವಾತಾವರಣ ನಿರ್ಮಾಣವಾಗಿ ಜನರು ಹೊರಗೆ ಬರಲು ಹೆದರುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

2022ರ ಫೆಬ್ರವರಿ ತಿಂಗಳಲ್ಲಿ ಶುರುವಾದ ರಷ್ಯಾ VS ಉಕ್ರೇನ್ ಯುದ್ಧ ಧಗಧಗಿಸ್ತಿದೆ. ಈಗಾಗಲೇ ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡಿರುವ ಈ ಯುದ್ಧ ತಣ್ಣಗಾಗುತ್ತಿಲ್ಲ. ಈ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿದೆ ಶತ್ರುವಿನ ಮೇಲೆರಗುತ್ತಿದೆ. ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂಬ ಪ್ರಯತ್ನ ಕೂಡ ವಿಫಲವಾಗುತ್ತಿವೆ. ಇಂತಹ ಕಠಿಣವಾದ ಸಂದರ್ಭದಲ್ಲಿ ಉಕ್ರೇನ್ ಸೇನೆಗೆ ಅಮೆರಿಕ ನೀಡುತ್ತಿರುವ ಸಹಾಯವೇ ಆಧಾರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+