ಟರ್ಕಿಯಲ್ಲಿ ಅವಳಿ ಬಾಂಬ್ ಸ್ಪೋಟ, 29 ಸಾವು 166 ಮಂದಿಗೆ ಗಾಯ

Written By: Ramesh
Subscribe to Oneindia Kannada

ಇಸ್ತಾಂಬುಲ್, ಡಿಸೆಂಬರ್. 11 : ಟರ್ಕಿಯ ಇಸ್ತಾಂಬುಲ್ ಫುಟ್ಬಾಲ್ ಸ್ಟೇಡಿಯಂ ಬಳಿ ಶನಿವಾರ ರಾತ್ರಿ ಅವಳಿ ಬಾಂಬ್ ಸ್ಪೋಟಗೊಂಡಿವೆ. ಸ್ಪೋಟದಲ್ಲಿ 29 ಮಂದಿ ಸಾವಿಗೀಡಾಗಿದ್ದು. 166 ಮಂದಿ ಗಾಯಗೊಂಡಿದ್ದಾರೆ

ಇಸ್ತಾಂಬುಲ್ ಫುಟ್ಬಾಲ್ ಸ್ಟೇಡಿಯಂ ಸಮೀಪ ಪೊಲೀಸ್ ವಾಹನಗಳನ್ನು ಗುರಿಯಾಗಿಸಿಕೊಂಡು ಶಂಕಿತ ಉಗ್ರರು ಅವಳಿ ಬಾಂಬ್ ಸ್ಪೋಟಿಸಿದ್ದು, 29 ಮಂದಿ ಮೃತಪಟ್ಟು 166 ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ತಂಡಗಳ ನಡುವಿನ ಪುಟ್‌ಬಾಲ್‌ ಪಂದ್ಯಾಟ ನಡೆಯುತ್ತಿದ್ದ ವೇಳೆ ಮೈದಾನ ಬಳಿ 45 ಸೆಕೆಂಡ್‌ಗಳ ಅಂತರದಲ್ಲಿ 2 ಆತ್ಮಾಹುತಿ ದಾಳಿ ನಡೆದಿದ್ದು, ಆತ್ಮಹತ್ಯೆ ಬಾಂಬರ್ ನ ಮೂಲಕ ಸ್ಟೋಟ ನಡೆಸಲಾಗಿದೆ ಎಂದು ಟರ್ಕಿ ಸಚಿವಾಲಯ ತಿಳಿಸಿದೆ.

29 killed, 166 injured in Turkey stadium blasts

ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 10 ಮಂದಿ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two bombs exploded outside a major soccer stadium in Istanbul after fans had gone home, killing 29 people and wounding dozens, a Turkish official said, citing health ministry figures. One of the blasts was thought to be a suicide bomber.
Please Wait while comments are loading...