ಇದು ಹೊಟ್ಟೆಯೋ ಅಥವಾ ಟೂಲ್‌ಬಾಕ್ಸೋ: ರೋಗಿಯ ಎಕ್ಸ್-ರೇ ಕಂಡು ವೈದ್ಯರು ಶಾಕ್

ಅಪೆಕ್ಯೊಲು ಜೂನ್ 27: ಕೆಲವೊಮ್ಮೆ ಮಕ್ಕಳು ಅಜಾಗರೂಕತೆಯಿಂದ ನಾಣ್ಯಗಳಂತಹ ವಸ್ತುಗಳನ್ನು ತಪ್ಪಾಗಿ ನುಂಗುತ್ತಾರೆ. ಆದರೆ ವಯಸ್ಕರು ಅದೇ ರೀತಿ ಮಾಡಬಹುದು. ನಿಮಗಿದು ಆಶ್ಚರ್ಯ ಎನಿಸಿದರೂ ಇದು ನಿಜ. ಟರ್ಕಿಯಲ್ಲಿ ವೈದ್ಯರು ರೋಗಿಯೊಬ್ಬರ ಹೊಟ್ಟೆಯಿಂದ 250 ಲೋಹ, ಗಾಜು, ತಿರುಪು, ನಾಣ್ಯಗಳನ್ನು ಹೊರತೆಗೆದಿದ್ದಾರೆ. ಆ ವ್ಯಕ್ತಿಯ ಎಕ್ಸ್ ರೇ ನೋಡಿದ ವೈದ್ಯರು ಬೆಚ್ಚಿಬಿದ್ದರು. ಟರ್ಕಿಯ ಅಪೆಕ್ಯೊಲುನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನ ಬಗ್ಗೆ ದೂರು ನೀಡಿ ವೈದ್ಯರನ್ನು ಸಂಪರ್ಕಿಸಿದರು. ಈ ವೇಳೆ ವೈದ್ಯರು ಎಕ್ಸ್-ರೇ ತೆಗೆದು ನೋಡಿದಾಗ ಈ ಭಯಾನಕ ಸತ್ಯ ಹೊರಬಂದಿದೆ.

ಬುರ್ಹಾನ್ ಡೆಮಿರ್ ಎಂಬ ಹಿರಿಯ ವ್ಯಕ್ತಿ ಆಸ್ಪತ್ರೆಗೆ ತಲುಪಿ ಎಕ್ಸ್-ರೇ ಮಾಡಿಸಿಕೊಂಡರು. ಎಕ್ಸ್-ರೇ ವರದಿಯೊಂದಿಗೆ ವೈದ್ಯರನ್ನು ಭೇಟಿ ನೀಡಿದಾಗ ವೈದ್ಯರು ಶಾಕ್ ಆಗಿದ್ದಾರೆ. ಆ ವ್ಯಕ್ತಿಯ ಹೊಟ್ಟೆಯಲ್ಲಿ 233 ನಾಣ್ಯಗಳು, ಬ್ಯಾಟರಿಗಳು, ಆಯಸ್ಕಾಂತಗಳು, ಉಗುರುಗಳು, ಗಾಜಿನ ತುಂಡುಗಳು, ಕಲ್ಲುಗಳು, ಲೋಹದ ತಿರುಪುಮೊಳೆಗಳು ಇದ್ದವು. ವೈದ್ಯರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂತಹ ಪ್ರಕರಣವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ.

Turkey: Doctors removed 233 coins from a patients stomach

ಹಿಂದೆಂದೂ ಮಾಡದ ಶಸ್ತ್ರಚಿಕಿತ್ಸೆ

ಇದುವರೆಗಿನ ವೃತ್ತಿಜೀವನದಲ್ಲಿ ಅವರು ಇಂತಹ ಶಸ್ತ್ರಚಿಕಿತ್ಸೆಯನ್ನು ಹಿಂದೆಂದೂ ಮಾಡಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಬುರ್ಹಾನ್ ಡೆಮಿರ್ ಅವರ ಹೊಟ್ಟೆಯಲ್ಲಿ ಸುಮಾರು 250 ವಸ್ತುಗಳು ಇದ್ದವು, ಅದು ಅವರ ಅನಾರೋಗ್ಯಕ್ಕೆ ಕಾರಣವಾಯಿತು. 35 ವರ್ಷದ ಬುರ್ಹಾನ್ ಹಾಗೂ ಚಿಕಿತ್ಸೆಯಲ್ಲಿ ತೊಡಗಿರುವ ತಂಡ ಅಲ್ಟ್ರಾಸೌಂಡ್, ಎಕ್ಸ್-ರೇ ಸ್ಕ್ಯಾನಿಂಗ್, ಎಂಡೋಸ್ಕೋಪಿಯಂತಹ ಪರೀಕ್ಷೆಗಳನ್ನು ಮಾಡಿ ನಂತರ ಶಸ್ತ್ರಚಿಕಿತ್ಸೆ ಮಾಡಿತು. ಬುರ್ಹಾನ್ ನ ಹೊಟ್ಟೆಯಲ್ಲಿದ್ದ 250 ವಸ್ತುಗಳನ್ನು ಪತ್ತೆ ಹಚ್ಚಿ ತೆಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ವಯಸ್ಕರಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Turkey: Doctors removed 233 coins from a patients stomach

ಜೀವ ಉಳಿಸಿದ ವೈದ್ಯರು

ಬುರ್ಹಾನ್ ತನ್ನ ಹೊಟ್ಟೆಯನ್ನು ಟೂಲ್ ಬಾಕ್ಸ್ ಮಾಡಿಕೊಂಡಿದ್ದನು. ಅದರಲ್ಲಿ ತನಗೆ ಬೇಕಾದುದೆಲ್ಲವೂ ಇತ್ತು. ಶಸ್ತ್ರಚಿಕಿತ್ಸೆಯ ನಂತರ, ಎಲ್ಲಾ ವಿದೇಶಿ ವಸ್ತುಗಳನ್ನು ತೆಗೆದು ಬುರ್ಹಾನ್ ಹೊಟ್ಟೆಯನ್ನು ಸ್ವಚ್ಛಗೊಳಿಸಲಾಯಿತು. ಈ ವಸ್ತುಗಳು ಅವನ ಹೊಟ್ಟೆಯನ್ನು ಹೇಗೆ ತಲುಪಿದವು ಎಂದು ವೈದ್ಯರು ಆಶ್ಚರ್ಯಪಟ್ಟಿದ್ದಾರೆ. ಬುರ್ಹಾನ್ ಕುಟುಂಬ ಸದಸ್ಯರು ಕೂಡ ದಿಗ್ಭ್ರಮೆಗೊಂಡರು. ಅವರು ಮಾನಸಿಕ ಅಸ್ವಸ್ಥರಾಗಿರಬೇಕು ಎಂದು ಶಂಕಿಸಲಾಗಿದೆ. ಆದಾಗ್ಯೂ, ವೈದ್ಯರು ತಮ್ಮ ಪ್ರಯತ್ನದಿಂದ ಅವರ ಜೀವವನ್ನು ಉಳಿಸಿದರು. ಈಗ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+