Tsunami: ಭೀಕರ ಸುನಾಮಿ ಎಚ್ಚರಿಕೆ: 7.3 ತೀವ್ರತೆ ಭೂಕಂಪನಕ್ಕೆ ಗಢಗಢ ನಡುಗಿದ ಭೂಮಿ
ಭೂಮಿ ಮೇಲೆ ಮನುಷ್ಯರ ದೌರ್ಜನ್ಯ ಹೆಚ್ಚಾದಷ್ಟು ಪ್ರಾಕೃತಿಕ ವಿಕೋಪಗಳು ಕೂಡ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಮನುಷ್ಯರು ಭೂಮಿ ಮೇಲೆ ತಮ್ಮ ದೌರ್ಜನ್ಯ ಮತ್ತಷ್ಟು ಹೆಚ್ಚು ಮಾಡಿದ್ದು, ಇದನ್ನ ಸಹಿಸದ ಭೂಮಿ ಮನುಷ್ಯರ ಎಡವಟ್ಟಿಗೆ ತಕ್ಕನಾದ ಶಿಕ್ಷೆಯನ್ನೇ ನೀಡುತ್ತಿದ್ದು ಈಗ ಮತ್ತೊಂದು ಭೀಕರ ಪರಿಸ್ಥಿತಿ ಎದುರಾಗಿದೆ. ಚಂಡಮಾರುತ, ಅಕಾಲಿಕ ಮಳೆ, ವಾಯುಭಾರ ಕುಸಿತದ ನಡುವೆ ಇದೀಗ ಘೋರ ಭೂಕಂಪನ ಸಂಭವಿಸಿದ್ದು ಭೀಕರ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಸಮುದ್ರದ ಆಳದಲ್ಲಿ ಭೂಮಿ ಕಂಪಿಸಿದರೆ ಅದರ ತೀವ್ರತೆಗೆ ನೀರು ಕೂಡ ಮೇಲೆ & ಕೆಳಗೆ ತುಳುಕುತ್ತದೆ. ಇದರ ಪರಿಣಾಮ ಭಾರಿ ದೊಡ್ಡ ಪ್ರಮಾಣದಲ್ಲಿ ನೀರು ನೇರವಾಗಿ ಸಮುದ್ರ ಅಥವಾ ಸಾಗರದ ದಡಕ್ಕೆ ಅಪ್ಪಳಿಸುತ್ತದೆ. ಈ ರೀತಿಯಾಗಿ ಸಮುದ್ರ ಅಥವಾ ಸಾಗರದ ನೀರು ದಡಕ್ಕೆ ಅಪ್ಪಳಿಸುವ ಸಮಯದಲ್ಲಿ ದೊಡ್ಡ ಪ್ರಮಾಣದ ಅಲೆಗಳು ಏಳುತ್ತವೆ. ಈ ರೀತಿಯಾಗಿ ದಡಕ್ಕೆ ಅಪ್ಪಳಿಸುವ ಸಮುದ್ರದ ಅಲೆಗಳು ಘೋರ ವಿನಾಶ ಸೃಷ್ಟಿ ಮಾಡುತ್ತವೆ. ಅದೇ ರೀತಿ ಇದೀಗ 7.3 ತೀವ್ರತೆ ಭೂಕಂಪನಕ್ಕೆ ದ್ವೀಪರಾಷ್ಟ್ರ ಗಢಗಢ ನಡುಗಿದ್ದು, ಭೀಕರ ಸುನಾಮಿಯ ಎಚ್ಚರಿಕೆ ಸಿಕ್ಕಿದೆ.

ಭೀಕರ ಸುನಾಮಿಯ ಎಚ್ಚರಿಕೆ!
ಅಂದಹಾಗೆ ಈ ರೀತಿಯಾಗಿ ಭೀಕರ ಸುನಾಮಿ ಎಚ್ಚರಿಕೆ ಸಿಕ್ಕಿರುವುದು ಓಷೆಯಾನಿಯಾ ಭಾಗದ ದೇಶ ವನೌತು ಪ್ರದೇಶದಲ್ಲಿ. ವನೌತು ದೇಶ ಸಣ್ಣಪುಟ್ಟ ದ್ವೀಪಗಳಿಂದ ರಚನೆಯಾಗಿದ್ದು, ಈ ದೇಶದ ಪೋರ್ಟ್ ವಿಲ ಎಂಬ ಪ್ರದೇಶಕ್ಕೆ ಇದೀಗ ಭೀಕರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಈ ರೀತಿ ಸುನಾಮಿ ಎಚ್ಚರಿಕೆ ಸಿಗುತ್ತಿದ್ದಂತೆ ಅಲ್ಲಿನ ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಯಾವುದೇ ತುರ್ತು ಪರಿಸ್ಥಿತಿ ಎದುರಿಸುವ ದೇಶ ಸಜ್ಜಾಗಿರುವಂತೆ ಸರ್ಕಾರ ಕರೆ ನೀಡಿದೆ.
3,30,000 ಜನರ ಜೀವಕ್ಕೆ ಕಂಟಕ?
ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಇಂತಹ ದುರ್ಘಟನೆ ಸಂಭವಿಸಿದೆ. ವನೌತು ದೇಶದ ಪೋರ್ಟ್ ವಿಲ ನಗರವು ಈ ದೇಶದ ಅತಿದೊಡ್ಡ ಸಿಟಿ ಆಗಿದ್ದು, ಇದೀಗ ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ಸ್ಫೋಟಕ ವಿಚಾರ ತಿಳಿಸಿದೆ. ಅದು ಏನು ಅಂದ್ರೆ, 7.3 ತೀವ್ರತೆ ಭೂಕಂಪನ ಕಾರಣಕ್ಕೆ ಸುನಾಮಿ ಅಲೆಗಳು ಏಳುವ ಎಚ್ಚರಿಕೆ ನೀಡಲಾಗಿದೆ.
ಒಟ್ಟು 80 ಸಣ್ಣಪುಟ್ಟ ದ್ವೀಪಗಳನ್ನ ಹೊಂದಿರುವ ವನೌತು ದೇಶದಲ್ಲಿ 3,30,000 ಜನರು ವಾಸ ಮಾಡುತ್ತಿದ್ದಾರೆ. ಹೀಗಿದ್ದಾಗ, ಈ ದೇಶದಲ್ಲಿ ಇರುವ ಅಮೆರಿಕದ ರಾಯಭಾರ ಕಚೇರಿ ಸಮೇತ ಹಲವು ಕಟ್ಟಡಳಿಗೆ ಹಾನಿಯಾಗಿ ಭೂಕಂಪನ ಕಾರಣಕ್ಕೆ ಘೋರ ದುರಂತವು ಸಂಭವಿಸಿದ್ದು, ಸುನಾಮಿ ವಾರ್ನಿಂಗ್ ಕಾರಣಕ್ಕೆ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ










Click it and Unblock the Notifications