ದೀಪಾವಳಿ ಆಚರಣೆಗೆ ಟ್ರಂಪ್ ಪುತ್ರಿ ಇವಂಕ ಸಿದ್ಧತೆ

Posted By:
Subscribe to Oneindia Kannada

ವಾಷಿಂಗ್ಟನ್, ಅಕ್ಟೋಬರ್, 24: ಅಕ್ಟೋಬರ್ 24, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಅವರು ಹಿಂದೂಗಳೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.

ಅಮೆರಿಕ ವರ್ಜಿನಿಯಾ ದೇಶದಲ್ಲಿ ನೆಲೆಸಿರುವ ಭಾರತೀಯ ಸಂಜಾತ ಸಮುದಾಯಗಳೊಂದಿಗೆ ದೇವಸ್ಥಾನದಲ್ಲಿ ಹಬ್ಬ ಆಚರಿಸಲು ಇವಂಕ ಟ್ರಂಪ್ ನಿರ್ಧರಿಸಿದ್ದಾರೆ.

Trump's daughter Ivanka celebrate diwali at hindu temple

ಇದುವರೆಗೂ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿ ಭಾರತೀಯ ಸಂಜಾತರೆಲ್ಲರೂ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾ ಬಂದಿದ್ದಾರೆ. ಭಾರತೀಯ ಸಂಜಾತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಹಬ್ಬ ಆಚರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ಬುಧವಾರ (ಅ. 26ರಂದು) ಇವಾಂಕ ಟ್ರಂಪ್ ಅವರು ಭಾರತೀಯ ಸಂಜಾತರನ್ನು ಭೇಟಿ ಮಾಡಿ, ವರ್ಜಿನಿಯಾ ಚಂಟಿಲ್ಲಿ 'ರಾಜಧಾನಿ' ದೇವಸ್ಥಾನದಲ್ಲಿ ಅವರೊಂದಿಗೆ ಹಬ್ಬ ಆಚರಿಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಿಸಿರುವ ಸಂಘಟಕರು ಮತ್ತು ಸಮುದಾಯ ಮುಖಂಡರು ತಿಳಿಸಿದ್ದಾರೆ.

ಬಾಂಗ್ಲಾದೇಶ ಭಯೋತ್ಪಾದನಾ ಸಂತ್ತಸ್ತರು, ಕಾಶ್ಮೀರ ಪಂಡಿತರ ಅಭ್ಯುದಯಕ್ಕಾರಿಪಬ್ಲಿಕನ್ ಹಿಂದೂ ಕೌನ್ಸಿಲ್ ಸಭೆಯಲ್ಲಿ ಕಳೆದವಾರ ಟ್ರಂಪ್ ಅವರು ಭಾಗವಹಿಸಿದ್ದರು. ಭಾರತೀಯ ಸಂಜಾತರ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ವ್ಯಕ್ತಿಯೊಬ್ಬರು ಭಾಗವಹಿಸಿದ್ದು ಇದೇ ಮೊದಲು ಎನ್ನಲಾಗಿದೆ.

ಇವಾಂಕ ಅವರು ಅಮೆರಿಕದಲ್ಲಿ ಪ್ರಭಾವಿ ಉದ್ಯಮಿಯಾಗಿದ್ದು, ತಂದೆ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರ ಸದಸ್ಯರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ.

'ಇವಾಂಕ ಟ್ರಂಪ್ ಅವರು ಭಾರತೀಯ ಸಂಜಾತರೊಂದಿಗೆ ದೀಪಾವಳಿ ಆಚರಿಸಲು ನಿರ್ಧರಿಸುವುದು ಪ್ರಶಂಸಾರ್ಹ ವಿಷಯ ಇದರಿಂದ ಸಮುದಾಯದಲ್ಲಿ ಮತ್ತಷ್ಟು ವಿಶ್ವಾಸ ತುಂಬಿದಂತಾಗುತ್ತದೆ' ಎಂದು ವರ್ಜಿನಿಯಾ ಭಾರತೀಯ ಸಂಜಾತ ಸಮುದಾಯದ ನಾಯಕ ರಾಜೇಶ್ ಗೂಟಿ ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Republican presidential candidate Donald Trump's daughter will celebrate the Diwali festival at a Hindu temple in the crucial swing state of Virginia with the members of the Indian-American community.
Please Wait while comments are loading...