Donald Trump: ಬದ್ಧ ಶತ್ರುಗಳ ನಡುವೆ ಸಂಧಾನ, ಭಾರತಕ್ಕೆ ಗುಡ್ ನ್ಯೂಸ್ ಕೊಡುತ್ತಾರಾ ಡೊನಾಲ್ಡ್ ಟ್ರಂಪ್?

ಅಮೆರಿಕ & ರಷ್ಯಾ ಬದ್ಧ ಶತ್ರುಗಳು, ಈ ಎರಡೂ ದೇಶಗಳ ನಡುವೆ ಶೀಘ್ರದಲ್ಲೇ ಘೋರ ಯುದ್ಧವೇ ನಡೆದು ಹೋಗಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇವೆ. ಮತ್ತೊಂದು ಕಡೆ ಜಗತ್ತಿನ ಹಲವು ಭಾಗಗಳಲ್ಲಿ ಸಾಲು ಸಾಲು ಯುದ್ಧಗಳು ನಡೆಯಲು ಇದೇ ಅಮೆರಿಕ & ರಷ್ಯಾ ತಿಕ್ಕಾಟ ಕಾರಣ ಆಗಿದೆ ಅನ್ನೋ ಆರೋಪ ಕೇಳಿಬಂದಿದೆ. ಹಾಗೇ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಚ್ಚಿಗೆದ್ದು ಭಾರಿ ಪ್ರಮಾಣದ ತೆರಿಗೆ ಹೇರಿಕೆ ಮಾಡೋದಕ್ಕೆ ಕೂಡ ಇದೇ ಕಾರಣ ಅನ್ನೋ ಆರೋಪ ಮಾಡಲಾಗಿತ್ತು. ಇದೀಗ ಅದಕ್ಕೆಲ್ಲಾ ತಕ್ಕ ಉತ್ತರ ಕೊಡಲು ಡೊನಾಲ್ಡ್ ಟ್ರಂಪ್ & ಪುಟಿನ್ ಮಹತ್ವದ ಭೇಟಿ ಮಾಡಿದ್ದಾರೆ.

ಟ್ರಂಪ್ ಕಂಡ ಕಂಡ ದೇಶಗಳ ವಿರುದ್ಧ ತೆರಿಗೆ ಯುದ್ಧ ಮಾಡಿಕೊಂಡು ಓಡಾಡುತ್ತಿರುವ ಸಮಯದಲ್ಲೇ ಜಾಗತಿಕ ಆರ್ಥಿಕತೆ ಸೂಕ್ಷ್ಮ ಸ್ಥಿತಿ ತಲುಪಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಜಗತ್ತು ಮತ್ತೊಂದು ಘೋರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಆದ್ರೆ ಇದು ಗೊತ್ತಿದ್ದು ಡೊನಾಲ್ಡ್ ಟ್ರಂಪ್ ಮಾತ್ರ ಮನಸ್ಸಿಗೆ ಬಂದಂತೆ ತೆರಿಗೆ ಹೇರಿಕೆಯ ಮಾಡುತ್ತಿದ್ದಾರೆ. ಭಾರತವೂ ಸೇರಿದಂತೆ ಚೀನಾ, ಬ್ರೆಜಿಲ್ ರೀತಿಯ ದೊಡ್ಡ ದೊಡ್ಡ ದೇಶಗಳನ್ನೇ ಟಾರ್ಗೆಟ್ ಮಾಡಿ ಟ್ರಂಪ್ ಹೀಗೆಲ್ಲಾ ಆಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಅದರಲ್ಲೂ, ರಷ್ಯಾ ಜೊತೆಗೆ ಆರ್ಥಿಕ ಸಂಬಂಧ ಹೊಂದಿರುವ ದೇಶಗಳನ್ನೇ ಟ್ರಂಪ್ ಟಾರ್ಗೆಟ್ ಮಾಡಿರುವ ಆರೋಪ ಇದೆ.

Trump Indicates US May Delay Secondary Tariffs on India Amid Russian Oil Concerns

ಭಾರತಕ್ಕೆ ಸಿಗುತ್ತಾ ಬಿಗ್ ರಿಲೀಫ್?

ಅಂದಹಾಗೆ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿರುವ ಡೊನಾಲ್ಡ್ ಟ್ರಂಪ್, ಮತ್ತಷ್ಟು ಆರ್ಥಿಕ ನಿರ್ಬಂಧ ಹೇರುವ ಭೀತಿ ಕೂಡ ಆವರಿಸಿತ್ತು. ಆದರೆ ಇದೇ ಸಮಯಕ್ಕೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಲಾಸ್ಕಾದಲ್ಲಿ ಭೇಟಿಯನ್ನ ಮಾಡಿದ್ದಾರೆ. ಹಾಗಾದ್ರೆ ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸುತ್ತಾ ರಷ್ಯಾ? ಈಗಿನ ಪರಿಸ್ಥಿತಿಯಲ್ಲಿ ಅತ್ತ ಡೊನಾಲ್ಡ್ ಟ್ರಂಪ್ ತಮ್ಮ ನಿಲುವು ಬದಲಾಯಿಸುತ್ತಾರಾ? ಅನ್ನೋ ಕುತೂಹಲ ಕೂಡ ಮೂಡಿತ್ತು. ಈ ಭೇಟಿ ಇಡೀ ಜಗತ್ತಿನ ಗಮನ ಕೂಡ ಸೆಳೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+