ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಮ್ ನಡೆಗೆ ಟ್ರಂಪ್ ವ್ಯಗ್ರ, ಕೊರಿಯಾ-ಅಮೆರಿಕಾ ಐತಿಹಾಸಿಕ ಭೇಟಿ ರದ್ದು

By Sachhidananda Acharya
|
Google Oneindia Kannada News

ವಾಷಿಂಗ್ಟನ್, ಮೇ 24: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಿಗದಿಯಾಗಿದ್ದ ಸಭೆ ರದ್ದಾಗಿದೆ.

ಈ ಸಂಬಂಧ ಗುರುವಾರ ಕಿಮ್ ಜಾಂಗ್ ಉನ್ ಗೆ ಟ್ರಂಪ್ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಜೂನ್ 12ರಂದು ಸಿಂಗಾಪುರದಲ್ಲಿ ನಿಗದಿಯಾಗಿದ್ದ ಭೇಟಿ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಿಮ್ ಜಾಂಗ್ ಉನ್ ತೋರುತ್ತಿರುವ "ಪ್ರಚಂಡ ಕೋಪ ಮತ್ತು ತೆರೆದ ಹಗೆತನದಿಂದ," ಈ ಭೇಟಿ ಸಾಧ್ಯವಿಲ್ಲ ಎಂದು ಅಮೆರಿಕಾ ಅಧ್ಯಕ್ಷರು ಹೇಳಿದ್ದಾರೆ.

ಅಣುಪರೀಕ್ಷೆಗೆ ತಿಲಾಂಜಲಿ ಹಾಡಿದ ಉತ್ತರ ಕೊರಿಯಾ: ಟ್ರಂಪ್ ಶ್ಲಾಘನೆಅಣುಪರೀಕ್ಷೆಗೆ ತಿಲಾಂಜಲಿ ಹಾಡಿದ ಉತ್ತರ ಕೊರಿಯಾ: ಟ್ರಂಪ್ ಶ್ಲಾಘನೆ

ತನ್ನ ವಿಕ್ಷಿಪ್ತ ನಡವಳಿಕೆಗಳಿಂದ ಸುದ್ದಿಯಲ್ಲಿರುವ ಕಿಮ್ ಜಾಂಗ್ ಉನ್ ರ ಉತ್ತರ ಕೊರಿಯಾದ ಮೇಲೆ ಇಲ್ಲಿಯವರೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಜೊತೆಗೆ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಮಧ್ಯೆ ಇನ್ನಿಲ್ಲದ ಹಗೆ ತನ ನೆಲೆಸಿತ್ತು. ಆದರೆ ಇದನ್ನೆಲ್ಲಾ ಬದಿಗೊತ್ತಿ ಕೆಲವು ತಿಂಗಳ ಹಿಂದೆ ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರ ಐತಿಹಾಸಿಕ ಭೇಟಿ ನಡೆದಿತ್ತು.

Trump cancels summit with North Koreas Kim Jong-un

ಅಲ್ಲಿಂದ ನಂತರ ಇದೇ ಮೊದಲ ಬಾರಿಗೆ ಅಮೆರಿಕಾ ಮತ್ತು ಉತ್ತರ ಕೊರಿಯಾ ನಾಯಕರ ಮಧ್ಯೆ ಭೇಟಿಯೊಂದು ನಿಗದಿಯಾಗಿತ್ತು. ಇನ್ನೇನು ತನ್ನ ಕರಾಳ ಇತಿಹಾಸವನ್ನು ಹಿಂದಕ್ಕೆ ಬಿಟ್ಟು ಉತ್ತರ ಕೊರಿಯಾ ಮುನ್ನೆಲೆಗೆ ಬಂತು ಎಂಬ ವಾತಾವರಣ ಸೃಷ್ಟಿಯಾಗಿತ್ತು.

ಇದರ ನಡುವೆಯೇ ಇಂಥಹದ್ದೊಂದು ಭಾರೀ ಸುದ್ದಿ ಹೊರಬಿದ್ದಿದೆ. ಇದು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ತಿರುವುಗಳು ಸಹಜವಾಗಿಯೇ ಅಂತರಾಷ್ಟ್ರೀಯ ವಲಯದಲ್ಲಿ ತರಂಗಗಳನ್ನು ಎಬ್ಬಿಸಲಿದೆ.

English summary
US President Donald Trump announced he will not attend a planned meeting with North Korean leader Kim Jong-un. In a letter sent to Kim on Thursday, Trump said the summit - which had been scheduled for June 12 in Singapore - would no longer be possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X