ಭಾರತೀಯರ ಬೆನ್ನಿಗೆ ಚೂರಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್? Harvard University
ಭಾರತ & ಅಮೆರಿಕ ಸ್ನೇಹಿತ ದೇಶಗಳು ಅನ್ನೋ ಮಾತು ತೊಲಗಿ ಹೋಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಳ್ಳುತ್ತಿರುವ ನಿರ್ಧಾರಗಳು ಭಾರತ & ಅಮೆರಿಕ ಸಂಬಂಧ ಹಾಳು ಮಾಡುತ್ತಿವೆ. ಭಾರತೀಯರ ಮತಗಳನ್ನೇ ಪಡೆದು, ಭಾರತದ ಬೆಂಬಲ ಪಡೆದು ಈ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಭಾರತೀಯರ ಬೆನ್ನಿಗೆ ಚೂರಿ ಹಾಕಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್?
ಹೌದು, 2025ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಸ್ಪರ್ಧೆ ಮಾಡಿದ್ದರೂ ಭಾರತೀಯರು ಟ್ರಂಪ್ ಅವರನ್ನ ಬೆಂಬಲಿಸಿದ್ದರು. ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ವಿರೋಧಿಸಿ, ಡೊನಾಲ್ಡ್ ಟ್ರಂಪ್ ಅವರಿಗೆ ಓಟ್ ಅಂದ್ರೆ ಮತ ಹಾಕಿದ್ದರು ಭಾರತ ಮೂಲದ ಅಮೆರಿಕನ್ನರು. ಆದರೆ ಹೀಗೆ ಮತ ಹಾಕಿದ್ದ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ವಿಚಾರವಾಗಿ ಇದೀಗ ದೊಡ್ಡ ಬೆಂಕಿಯೇ ಹೊತ್ತಿಕೊಂಡಿದೆ...

ವಿದ್ಯಾರ್ಥಿಗಳು ಅಮೆರಿಕಗೆ ಹೋಗಲು ಅಗಲ್ಲ?
ಅಮೆರಿಕದಲ್ಲಿ ಓದಬೇಕು, ಈ ಮೂಲಕ ಅಮೆರಿಕದಲ್ಲಿ ಒಳ್ಳೆಯ ಕೆಲಸ ಪಡೆಯಬೇಕು ಎಂಬ ಆಸೆ ಇಟ್ಟುಕೊಂಡು ಲಕ್ಷ ಲಕ್ಷ ಭಾರತೀಯರು ಕನಸು ಕಟ್ಟಿಕೊಂಡಿದ್ದರು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಎಡವಟ್ಟು ನಿರ್ಧಾರಗಳೇ ಇದೀಗ ಬೆಂಕಿಯನ್ನ ಹೊತ್ತಿಸಿದೆ. ಅದರಲ್ಲೂ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಡೊನಾಲ್ಡ್ ಟ್ರಂಪ್ ಆಡಳಿತದ ನಡುವಿನ ಜಟಾಪಟಿ ಮುಗಿಲು ಮುಟ್ಟಿದ್ದು, ಹಾರ್ವರ್ಡ್ ವಿವಿಗೆ ಭಾರತವೂ ಸೇರಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಟ್ರಂಪ್ ಆಡಳಿತ ತಡೆ ನೀಡಿದೆ. ಈ ಮೂಲಕ ಕೋಟ್ಯಂತರ ಭಾರತ ಮೂಲದ ಪ್ರಜೆಗಳ ಕನಸು ನುಚ್ಚು ನೂರಾಗಿದೆ...












Click it and Unblock the Notifications