ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಕಟ್ಟಲು ದುಬೈನಲ್ಲಿ ಹಣ ಸಂಗ್ರಹ

ಚೆನ್ನೈ, ಜುಲೈ 17: ಭಾರತದಲ್ಲಿ ಐಎಸ್‌ಐಎಸ್ ಸೆಲ್ ನಿರ್ಮಿಸಲು ದುಬೈನಲ್ಲಿ ಹಣ ಸಂಗ್ರಹಿಸುತ್ತಿದ್ದ ಚೆನ್ನೈ ಮೂಲದ 14 ಜನರನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ.

ಅಷ್ಟೇ ಅಲ್ಲದೆ ಈ ಯುವಕರು ಯಮನ್‌ನಲ್ಲಿ ಬೇರೆ ಭಯೋತ್ಪಾದನಾ ಸಂಘಟನೆ ಅಲ್‌ ಖೈದಾಕ್ಕೆ ಬೆಂಬಲ ನೀಡುತ್ತಿದ್ದರು ಎಂದು ಎನ್‌ಐಎ ತಿಳಿಸಿದೆ.

ಈ ಯುವಕರು ವಹಾದತ್-ಎ-ಇಸ್ಲಾಂ, ಜಮಾಥ್-ವಹಾದತ್‌-ಎ-ಇಸ್ಲಾಂ ಅಲ್ ಜಿಹಾದಿ ಹಾಗೂ ಜಿಹಾದಿಸ್ಟ್‌ ಇಸ್ಲಾಮಿಕ್ ಯುನಿಟ್‌ ಹೀಗೆ ಬೇರೆ ಬೇರೆ ಹೆಸರಿನ ಭಯೋತ್ಪಾದಕ ಸಂಘಟನೆಗಳನ್ನು ನಡೆಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

To Set Up ISIS Cell In India 14 Tamil Nadu Men Raised Funds

ಭಾರತಕ್ಕೆ ಅವರನ್ನು ಕರೆ ತರುವ ಮುನ್ನ ಅವರನ್ನು ಆರು ತಿಂಗಳುಗಳ ಕಾಲ ಯುಎಇಯಲ್ಲಿ ಸೆರೆಮನೆಯಲ್ಲಿಡಲಾಗಿತ್ತು.

ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಅಮಾಯಕರು ಬಲಿಯಾಗಿದ್ದರು. ಈ ರೀತಿಯ ದಾಳಿ ಮರುಕಳಿಸದಂತೆ ಎಚ್ಚರ ವಹಿಸಲು ರಾಷ್ಟ್ರೀಯ ತನಿಖಾ ದಳ ಎಲ್ಲೆಡೆ ತನ್ನ ಕಾರ್ಯಾಚರಣೆ ನಡೆಸುತ್ತಿದೆ.

ಸೋಮವಾರ ಜುಲೈ 25ರ ವರೆಗೆ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ನೀಡಿದೆ.ಎನ್‌ಐಎ ಮಾಹಿತಿ ಪ್ರಕಾರ ಅವರೆಲ್ಲರೂ ವೃತ್ತಿಪರ ನಿರ್ವಹಣಾಕಾರರಾಗಿದ್ದಾರೆ. ಅವರು ಯುಎಇಯಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಕಳೆದ 32 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ.

ಅವರು ಭಾರತದಲ್ಲಿ ಭಯೋತ್ಪದನಾ ದಾಳಿ ಮಾಡಲು ಯುಎಇಯಲ್ಲಿ ಹಣ ಪಡೆಯುತ್ತಿದ್ದರು. ಭಾರತದಲ್ಲಿ ಐಎಸ್‌ಐಎಸ್ ಭಯೋತ್ಪಾದನಾ ಸಂಘಟನೆಯನ್ನು ನಿರ್ಮಿಸುವುದು ಅವರ ದುರುದ್ದೇಶವಾಗಿತ್ತು.

ಎನ್‌ಐಎ ಅಧಿಕಾರಿಗಳು ನಾಗಪಟ್ಟಣಂನಲ್ಲಿ ಹ್ಯಾರಿಶ್ ಮೊಹಮ್ಮದ್ ಹಾಗೂ ಹಸನ್ ಅಲಿಯನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಹಸನ್ ಅಲಿ ಭಾರತದಲ್ಲಿ ಪ್ರತಿಭಟನಾ ದಾಳಿ ಮಾಡಲು ಐಎಸ್‌ಐಎಸ್‌ಗೆ ಜನರನ್ನು ಸೇರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಹಾಗೆಯೇ ಭಯೋತ್ಪಾದನೆ ಕುರಿತಂತೆ ವಿಡಿಯೋಗಳನ್ನು ಕೂಡ ಮಾಡಿ ಹರಿಬಿಡುತ್ತಿದ್ದ. ಕಳೆದ ಕೆಲವು ತಿಂಗಳಿನಿಂದ ಐಎಸ್‌ಐಎಸ್‌ ಭಯೋತ್ಪಾದನಾ ಸಂಘಟನೆ ಚಟುವಟಿಕೆಗಳ ಬಗ್ಗೆ ಎನ್‌ಐಎ ಕಣ್ಣಿಟ್ಟಿತ್ತು.

ಶ್ರೀಲಂಕಾ ಮಾದರಿ ಆತ್ಮಾಹುತಿ ಬಾಂಬ್ ದಾಳಿ ಸಂಚುಕೋರರಂತಿದ್ದ ಅನುಮಾನಾಸ್ಪದ ಐದು ಮಂದಿಯನ್ನು ಕೊಯ್‌ಮತ್ತೂರಿನಲ್ಲಿ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+