ಭಾರತ ವಿರೋಧಿ ಮಾಲ್ಡೀವ್ಸ್ ಈಗ ದಾರಿಗೆ ಬಂತಾ?
ಮಾಲ್ಡೀವ್ಸ್ ಈಗಾಗಲೇ ಭಾರತ ವಿರೋಧ ಕಟ್ಟಿಕೊಂಡು ಹಲವು ಸಮಸ್ಯೆ ಎದುರಿಸಿದೆ. ಹೀಗಿದ್ರು ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಿರಲಿಲ್ಲ. ಮತ್ತೆ ಮತ್ತೆ ಭಾರತದ ವಿರುದ್ಧ ಮಾತನಾಡುತ್ತಾ ಇದ್ದ ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಝ, ಮಾಲ್ದೀವ್ಸ್ ನೆಲದಿಂದ ಮಾರ್ಚ್ 15ರ ಒಳಗೆ ಸೇನೆ ವಾಪಸ್ ಕರೆಯಿಸಿಕೊಳ್ಳಿ ಎಂದು ಭಾರತಕ್ಕೆ ಆಗ್ರಹ ಮಾಡಿದ್ದರು. ಹೀಗೆ ಪರಿಸ್ಥಿತಿ ಪೂರ್ತಿ ಕೈಮೀರಿ ಹೋಗಿದ ಎನ್ನುವಾಗಲೇ ಮಾಲ್ಡೀವ್ಸ್ ದಾರಿಗೆ ಬಂದಂತೆ ಕಾಣುತ್ತಿದೆ!
ಕೆಲವು ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಮುಯಿಝು ಚೀನಾ ಪರ ನಿಲುವನ್ನ ಹೊಂದಿದ್ದರು. ಹಾಗೇ ಭಾರತದ ವಿರುದ್ಧ ಹಲವು ನಿರ್ಣಯ ಕೈಗೊಂಡು ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು. ಹಾಗೇ ಭಾರತೀಯ ಸೇನೆ ವಾಪಸ್ ಕರೆಸಿಕೊಳ್ಳಬೇಕು ಎಂದು ಡೆಡ್‌ಲೈನ್ ಕೊಟ್ಟಿದ್ದರು ಮಾಲ್ಡೀವ್ಸ್ ಅಧ್ಯಕ್ಷ. ಹೀಗಿದ್ದಾಗಲೇ ಮಾಲ್ಡೀವ್ಸ್ ಬಾಲ ಮುದುಡಿದಂತೆ ಈಗ ಕಾಣುತ್ತಿದೆ. ಹಾಗಾದರೆ ಅಸಲಿಗೆ ನಡೆದ ಘಟನೆ ಏನು? ಬನ್ನಿ ತಿಳಿಯೋಣ.

ಭಾರತ + ಮಾಲ್ಡೀವ್ಸ್ ಸೇನಾ ಕವಾಯತು!
ಅಂದಹಾಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲು ಮತ್ತು ಪರಸ್ಪರ ಸಹಕಾರ ವೃದ್ಧಿಗೆ ಭಾರತೀಯ ಕರಾವಳಿ ಕಾವಲು ಪಡೆ ಜೊತೆ ಮಾಲ್ದೀವ್ಸ್ & ಶ್ರೀಲಂಕಾದ ನೌಕಾಪಡೆಗಳು ಮಹತ್ವದ ಜಂಟಿ ಕವಾಯತು ಆರಂಭಿಸಿವೆ. ಭಾರತದ ಕರಾವಳಿ ಪಡೆಯ 'ಸಮರ್ಥ್' ಮತ್ತು 'ಐಸಿಜಿಎಸ್ ಅಭಿನವ್' ನೌಕೆ, ಶ್ರೀಲಂಕಾ ನೌಕಾಪಡೆ 'ಸಮುದ್ರ' ನೌಕೆಯು 'ದೋಸ್ತಿ 16' ಕವಾಯತಿನಲ್ಲಿ ಪಾಲ್ಗೊಂಡಿವೆ ಎನ್ನಲಾಗಿದೆ. ಇನ್ನು ಈ ಮಿಲಿಟರಿ ಡ್ರಿಲ್‌ನಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್, ಐಸಿಜಿಎಸ್ ಡೋರ್ನಿಯರ್ ಪಾಲ್ಗೊಂಡಿದೆಯಂತೆ.
ಸಣ್ಣ ವಿಚಾರ ದೊಡ್ಡದಾಗಿತ್ತು
ಉಗುರಲ್ಲಿ ಹೋಗೋದಕ್ಕೆ, ಕೊಡಲಿ ತಗೊಂಡ್ರಂತೆ ಅನ್ನೋ ಮಾತು ಮಾಲ್ಡೀವ್ಸ್‌ಗೆ ಸೂಕ್ತವಾಗಿ ಅನ್ವಯ ಆಗುತ್ತೆ. ಸಣ್ಣ ವಿಚಾರ ಮಾಲ್ಡೀವ್ಸ್ ಕೆದಕಿ ಕೆದಕಿ ದೊಡ್ಡದಾಗಿ ಮಾಡುತ್ತಿತ್ತು. ಹಾಗೇ ಮಾಲ್ಡೀವ್ಸ್ ಮಾಡುತ್ತಿರುವ ಈ ಕಿತಾಪತಿಯು ಭಾರತ & ಮಾಲ್ಡೀವ್ಸ್‌ನ ಸಂಬಂಧ ಕೂಡ ಹಾಳು ಮಾಡುತ್ತಿತ್ತು. ಹೀಗಿದ್ದಾಗ ಸುಮ್ಮನೆ ಇರದ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುತ್ತಿದ್ದರು. ಆದರೆ ಈಗ ಭಾರತ ಜೊತೆ ಸೇರಿ ಜಂಟಿ ಮಿಲಿಟರಿ ಡ್ರಿಲ್‌ನ ಕೂಡ ನಡೆಸಿದೆ. ಈ ಮೂಲಕ ಮಾಲ್ಡೀವ್ಸ್ ದಾರಿಗೆ ಬಂದಂತೆ ಕಾಣುತ್ತಿದೆ.

ಮಾಲ್ಡೀವ್ಸ್ ಮತ್ತೆ ಭಾರತಕ್ಕೆ ಹತ್ತಿರ?
ಒಟ್ನಲ್ಲಿ ಇದೆಲ್ಲ ಏನೇ ಇರಲಿ ಭಾರತವನ್ನು ಎದುರು ಹಾಕಿಕೊಂಡರೆ ಪರಿಸ್ಥಿತಿ ಏನಾಗುತ್ತೆ? ಅನ್ನೋದಕ್ಕೆ ಇದೀಗ ಮಾಲ್ಡೀವ್ಸ್ ಒಂದು ಸಣ್ಣ ಉದಾಹರಣೆ. ಹೀಗಾಗಿಯೇ ಮಾಲ್ಡೀವ್ಸ್‌ಗೆ ಇದೀಗ ಬುದ್ಧಿ ಬಂದಂತೆ ಕಾಣುತ್ತಿದೆ. ಹಾಗೇ ಭಾರತದ ಜೊತೆ ಹೊಂದಾಣಿಕೆ ಮಾಡಿಕೊಂಡು ಮಾಲ್ಡೀವ್ಸ್ ಈಗ ತನ್ನ ಭವಿಷ್ಯ ಕಟ್ಟಿಕೊಳ್ಳುವ ಮುನ್ಸೂಚನೆ ಕೂಡ ಕಾಣುತ್ತಿದೆ. ಹೀಗಾಗಿ, ಭಾರತ ಮತ್ತೊಮ್ಮೆ ಮಾಲ್ಡೀವ್ಸ್ ಜೊತೆ ಉತ್ತಮ ಸಂಬಂಧ ಸಾಧಿಸಿಕೊಂಡು ಹೊಗುವಂತೆ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಚೀನಾ ಮತ್ತೆ ಬೇರೆ ಯಾವ ತಂತ್ರ ಹೂಡುತ್ತೆ? ಆ ಮೂಲಕ ಮಾಲ್ಡೀವ್ಸ್‌ನ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಏನು ಮಾಡುತ್ತೆ? ಅನ್ನೋದನ್ನೂ ಕಾದು ನೋಡಬೇಕಿದೆ.
ಭಾರತದ ಪ್ರವಾಸಿಗರ ಸಂಖ್ಯೆ ಕುಸಿತ
ಮಾಲ್ದೀವ್ಸ್ & ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಎದುರಾದ ನಂತರ, ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ಕುಸಿಯುತ್ತ ಸಾಗಿದೆ. ಮಾಲ್ದೀವ್ಸ್‌ಗೆ ಹೋಗುತ್ತಿದ್ದ ವಿದೇಶಿಯರ ಪೈಕಿ ಭಾರತದ ಪ್ರವಾಸಿಗರು ಮೊದಲ ಸ್ಥಾನದಲ್ಲಿ ಇದ್ದರು. ಹೀಗಿದ್ದಾಗ ಭಾರತದ ಜೊತೆ ಮಾಲ್ಡೀವ್ಸ್ ಕಿರಿಕ್ ಶುರುವಾಗಿತ್ತು. ಹೀಗೆ 1 ತಿಂಗಳ ಅವಧಿಯಲ್ಲಿ ಭಾರಿ ಕುಸಿತ ಕಂಡಿದೆ ಭಾರತೀಯ ಪ್ರವಾಸಿಗರ ಸಂಖ್ಯೆ. ಮೊದಲನೇ ಸ್ಥಾನದಿಂದ ಈಗ 5ನೇ ಸ್ಥಾನಕ್ಕೆ ಭಾರತ ಮೂಲದ ಪ್ರವಾಸಿಗರ ಸಂಖ್ಯೆ ಕುಸಿತ ಕಂಡಿದೆಯಂತೆ. ಈ ಮೂಲಕ ಭಾರತ ಜೊತೆಯಲ್ಲಿ ಕಿರಿಕ್ ಮಾಡಿದ್ದ ಮಾಲ್ಡೀವ್ಸ್ ಹೊಸ ಅಧ್ಯಕ್ಷನಿಗೆ ಭೀಕರ ಆಘಾತ ಎದುರಾಗಿದೆ.












Click it and Unblock the Notifications