• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್‌ ಆಯ್ದುಕೊಂಡದ್ದು ನಾವೇ, ಸುಳ್ಳು ಹೇಳಲ್ಲ: ಡಸ್ಸಾಲ್ಟ್‌ ಸಿಇಓ

|

ಫ್ರಾನ್ಸ್‌, ನವೆಂಬರ್ 13: ರಫೆಲ್‌ ಯುದ್ಧ ವಿಮಾನಗಳನ್ನು ಭಾರತಕ್ಕೆ ತಯಾರಿಸಿಕೊಡುತ್ತಿರುವ ಫ್ರಾನ್ಸ್‌ನ ಡಸ್ಸಾಲ್ಟ್‌ ಏವಿಯೇಷನ್ ಸಂಸ್ಥೆಯ ಸಿಇಓ ಖಾಸಗಿ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ್ದು, ರಿಲಯನ್ಸ್‌ ಅನ್ನು ಆಯ್ಕೆ ಮಾಡಿಕೊಂಡಿದ್ದು ನಾವೇ ಎಂದು ಹೇಳಿದ್ದಾರೆ.

'ಕಳ್ಳತನ' ಒಪ್ಪಿಕೊಂಡ ಮೋದಿ: ರಾಹುಲ್ ಗಾಂಧಿ ಮತ್ತೆ ಟೀಕೆ

ಜೀವಮಾನದಲ್ಲಿ ಒಂದೂ ವಿಮಾನ ತಯಾರಿಸದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಸಂಸ್ಥೆಗೆ ಮೋದಿ ಸರ್ಕಾರವು ರಫೆಲ್‌ ಯುದ್ಧ ವಿಮಾನದ ಜಂಟಿ ಒಪ್ಪಂದ ನೀಡಿದೆ ಇದು ಬಹು ದೊಡ್ಡ ಹಗರಣ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ ದೊಡ್ಡ ಆರೋಪ ಮಾಡಿತ್ತು.

ಮೋದಿ ಸರ್ಕಾರದ ದೊಡ್ಡ ಹಗರಣ ರಫೆಲ್‌ ಅಲ್ಲ, ಬೆಳೆ ವಿಮೆ: ಆರೋಪ

ರಾಹುಲ್ ಗಾಂಧಿ ಆರೋಪಗಳ ಬಗ್ಗೆ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಡಸ್ಸಾಲ್ಟ್‌ ಏವಿಯೇಷನ್ ಸಂಸ್ಥೆ ಸಿಇಓ ಎರಿಕ್ ಟ್ರಪ್ಪಿರ್‌ 'ರಿಲಯನ್ಸ್‌ ಅನ್ನು ಒಪ್ಪಂದಕ್ಕೆ ಆಯ್ಕೆ ಮಾಡುವುದು ನಮ್ಮ ನಿರ್ಧಾರವಾಗಿತ್ತು' ಎಂದು ಹೇಳಿದ್ದಾರೆ.

'ಏಕೆ ರಿಲಯನ್ಸ್‌ ನಂತಹಾ ಅನನುಭವಿ ಸಂಸ್ಥೆಯನ್ನು ಜಂಟಿ ಒಪ್ಪಂದಕ್ಕೆ ಆಯ್ಕೆ ಮಾಡಿಕೊಂಡಿರಿ?' ಎಂಬ ಪ್ರಶ್ನೆಗೆ ಉತ್ತರಿಸಿರುವ ಎರಿಕ್ 'ಇದು ಜಂಟಿ ಉದ್ಯಮ, ಇದರಲ್ಲಿ ಸಿಬ್ಬಂದಿ, ಎಂಜಿನಿಯರ್‌ಗಳು ನಮ್ಮವರೇ ಹೆಚ್ಚಿದ್ದರು, ಕಾರ್ಯ ನಡೆದಂತೆ ಅವರೂ ವಿಮಾನ ಕಲಿಯಲಿ ಎಂಬುದು ನಮ್ಮ ಉದ್ದೇಶವಾಗಿತ್ತು' ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

'ರಫೇಲ್ ರಾದ್ಧಾಂತದ ತನಿಖೆಯಾದರೆ ಮೋದಿ ಕತೆ ಅಷ್ಟೇ ಎಂದ ರಾಹುಲ್!'

ಆದರೆ ಎರಿಕ್ ಅವರ ಉತ್ತರಗಳಿಗೆ ಸಮಾಧಾನವಾಗದ ಕಾಂಗ್ರೆಸ್‌ 'ಎರಿಕ್ ಸಹ ಈ ಹಗರಣದಲ್ಲಿ ಆರೋಪಿಯೇ, ಆತ ಮೋದಿ ಅವರನ್ನು ಬಚಾವ್ ಮಾಡಲು ಹೀಗೆ ಸುಳ್ಳುಗಳನ್ನು ಹೇಳುತ್ತಿದ್ದಾರೆ' ಎಂದು ಆರೋಪಿಸಿದೆ.

ಇದಕ್ಕೂ ಪ್ರತಿಕ್ರಿಯಿಸಿರುವ ಎರಿಕ್, 'ನಾನು ಸುಳ್ಳು ಹೇಳುತ್ತಿಲ್ಲ, ಪ್ರತಿಷ್ಠಿತ ಸಂಸ್ಥೆಯೊಂದರ ಸಿಇಓ ಆದ ನಾನು ಸುಳ್ಳು ಹೇಳಲಾಗುವುದಿಲ್ಲ, ಇಂತಹಾ ಸ್ಥಾನದಲ್ಲಿದ್ದಿದ್ದರೆ ರಾಹುಲ್ ಸಹ ಸುಳ್ಳು ಹೇಳಲು ಆಗುತ್ತಿರಲಿಲ್ಲ' ಎಂದು ಹೇಳಿದ್ದಾರೆ.

English summary
Dassault aviation CEO Eric Trappier said, 'that is our decision to join Reliance to the joint venture of manufacturing Rafale fighter plane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X