ದೆಹಲಿ, ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆ: ಯುಎಸ್ ಪ್ರತಿಕ್ರಿಯೆ!
ಆದಾಯ ತೆರಿಗೆ ಇಲಾಖೆ ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿದೆ. ಈ ಬಗ್ಗೆ ಯುಎಸ್ ಪ್ರತಿಕ್ರಿಯೆ ನೀಡಿದೆ.
ವಾಷಿಂಗ್ಟನ್ ಫೆಬ್ರವರಿ 15: ಆದಾಯ ತೆರಿಗೆ ಅಧಿಕಾರಿಗಳು ಬಿಬಿಸಿ ಕಚೇರಿಗಳಲ್ಲಿ ನಡೆಸಿದ ಸಮೀಕ್ಷೆ ಕಾರ್ಯಾಚರಣೆಯ ಬಗ್ಗೆ ತನಗೆ ತಿಳಿದಿದೆ ಆದರೆ ಅದರ ತೀರ್ಪು ನೀಡುವ ಸ್ಥಿತಿಯಲ್ಲಿಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಮಂಗಳವಾರ ಹೇಳಿದೆ. ಮುಂಬೈ ಮತ್ತು ದೆಹಲಿಯ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ದಾಳಿಯ ಬಗ್ಗೆ ಯುಎಸ್ ಮಾಡಿದ ಮೊದಲ ಸಾರ್ವಜನಿಕ ಹೇಳಿಕೆ ಇದಾಗಿದೆ.
ತೆರಿಗೆ ವಂಚನೆ ತನಿಖೆಯ ಭಾಗವಾಗಿ ಕಳೆದ ದಿನ ಭಾರತೀಯ ತೆರಿಗೆ ಅಧಿಕಾರಿಗಳು ಬಿಬಿಸಿ ಕಚೇರಿಗಳಲ್ಲಿ ಸಮೀಕ್ಷೆ ಕಾರ್ಯಾಚರಣೆ ನಡೆಸಿದರು. ಈ ಕ್ರಮ ಪ್ರಜಾಪ್ರಭುತ್ವದ ಮೌಲ್ಯಕ್ಕೆ ವಿರುದ್ಧವಾಗಿದೆಯೇ ಎಂದು ಕೇಳಿದಾಗ, ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್, "ನಾನು ಈ ಬಗ್ಗೆ ಹೇಳಲು ಸಾಧ್ಯವಿಲ್ಲ. ಈ ಸಮೀಕ್ಷೆಯ ಸತ್ಯಗಳ ಬಗ್ಗೆ ನಮಗೆ ತಿಳಿದಿದೆ, ಆದರೆ ನಾನು ಈ ಬಗ್ಗೆ ಮಾತನಾಡು ಸ್ಥಿತಿಯಲ್ಲಿಲ್ಲ'' ಎಂದಿದ್ದಾರೆ.
"ಭಾರತೀಯ ತೆರಿಗೆ ಅಧಿಕಾರಿಗಳು ದೆಹಲಿಯಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿರುವುದರ ಬಗ್ಗೆ ನಮಗೆ ತಿಳಿದಿದೆ. ಈ ಹುಡುಕಾಟದ ವಿವರಗಳಿಗಾಗಿ ನಾನು ಭಾರತೀಯ ಅಧಿಕಾರಿಗಳಿಗೆ ಕೋರಿದ್ದೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಕ್ತ ಪತ್ರಿಕಾ ಮಾಧ್ಯಮವು ಪ್ರಜಾಪ್ರಭುತ್ವವನ್ನು ಬಲಪಡಿಸಲು ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. "ನಾವು ಪ್ರಪಂಚದಾದ್ಯಂತ ಮುಕ್ತ ಪತ್ರಿಕಾ ಪ್ರಾಮುಖ್ಯತೆಯನ್ನು ಬೆಂಬಲಿಸುತ್ತೇವೆ. ಪ್ರಪಂಚದಾದ್ಯಂತ ಪ್ರಜಾಪ್ರಭುತ್ವಗಳನ್ನು ಬಲಪಡಿಸಲು ಕೊಡುಗೆ ನೀಡುವ ಮಾನವ ಹಕ್ಕುಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ನಾವು ಎತ್ತಿ ತೋರಿಸುವುದನ್ನು ಮುಂದುವರಿಸುತ್ತೇವೆ. ಇದು ಈ ದೇಶದಲ್ಲಿ ಈ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ. ಇದು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ "ಎಂದು ಪ್ರೈಸ್ ಪ್ರತಿಪಾದಿಸಿದರು.
ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ
ಆದಾಯ ತೆರಿಗೆ ಇಲಾಖೆ ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ನ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿದೆ. 2002 ರ ಗುಜರಾತ್ ಗಲಭೆಗಳು ಮತ್ತು ಭಾರತದ ಕುರಿತು ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ಪ್ರಸಾರಕರು ಪ್ರಸಾರ ಮಾಡಿ ವಾರಗಳ ಬಳಿಕ ಇದು ನಡೆದಿದೆ.
ಕಂಪನಿಯ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅದರ ಭಾರತೀಯ ಅಂಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications