ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಚುಂಬಿ ಹೋಟೆಲಿಂದ ಬಿದ್ದು ಟಾಟಾ ಎಂಡಿ ಆತ್ಮಹತ್ಯೆ?

By Srinath
|
Google Oneindia Kannada News

ಬ್ಯಾಂಕಾಕ್‌, ಜ.27: ಇಲ್ಲಿನ ಗಗನಚುಂಬಿ ಹೋಟೆಲಿನ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಟಾಟಾ ಮೋಟರ್ಸ್ ಕಾರು ಉತ್ಪಾದನೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲಿಮ್‌ ಅವರು ಭಾನುವಾರ ದಾರುಣ ಸಾವನ್ನಪ್ಪಿದ್ದಾರೆ.

ಕಂಪನಿಯ ಥಾಯ್ಲೆಂಡ್‌ ಘಟಕದ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಆಗಮಿಸಿದ್ದರು. ಬ್ಯಾಂಕಾಕಿನಲ್ಲಿರುವ ಹೋಟೆಲಿನ ಎತ್ತರದ ಮಾಳಿಗೆಯಿಂದ ಬಿದ್ದಿದ್ದರಿಂದ ಕಾರ್ಲ್ ಸ್ಲಿಮ್‌ (Karl Slym) ಅವರ ಸಾವು ಸಂಭವಿಸಿರಬಹುದು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಆದರೆ ಇದು ಆತ್ಮಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

Tata Motors MD Britain Karl Slym dies in fall from hotel in Bangkok

ಬ್ರಿಟನ್ ಮೂಲದ, 51 ವರ್ಷದ ಕಾರ್ಲ್ ಸ್ಲಿಮ್‌ ಅವರು 2012ರಲ್ಲಿ ಟಾಟಾ ಮೋಟರ್ಸ್ (TAMO.NS) ಸಾರಥ್ಯ ವಹಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಟಾಟಾ ಮೋಟರ್ ಮುಖ್ಯಸ್ಥ ಸೈರಸ್‌ ಪಿ. ಮಿಸ್ತ್ರಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಟಾಟಾ ಮೋಟರ್ಸ್ ಅನ್ನು ಸೇರುವ ಮೊದಲು ಕಾರ್ಲ್ ಸ್ಲಿಮ್‌ ಅವರು ಚೀನಾದ SGMW Motors (ಜಿಎಂ ಮೋಟರ್ಸ್ ಅಂಗ ಸಂಸ್ಥೆ) ಉಪಾಧ್ಯಕ್ಷರಾಗಿದ್ದರು.

ಅಂಡಮಾನ್‌ ದೋಣಿ ದುರಂತ (ಪೋರ್ಟ್‌ ಬ್ಲೇರ್):
ತಮಿಳುನಾಡು ಮತ್ತು ಮುಂಬೈ ಪ್ರವಾಸಿಗರಿದ್ದ ದೋಣಿಯೊಂದು ಮಗುಚಿದ ಪರಿಣಾಮ ಕನಿಷ್ಠ 21 ಮಂದಿ ಸಾವನ್ನಪ್ಪಿರುವ ದುರಂತ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಭಾನುವಾರ ಸಂಭವಿಸಿದೆ. 25 ಜನ ಸಾಮರ್ಥ್ಯದ ದೋಣಿಯಲ್ಲಿ 45 ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

ಬೋಟಿನಲ್ಲಿ ತಮಿಳುನಾಡಿನ ಕಾಂಚೀಪುರಂ ಜಿಲ್ಲೆ ಮತ್ತು ಮುಂಬೈನ ಪ್ರವಾಸಿಗರು ಮತ್ತು ಸಿಬ್ಬಂದಿ ಸೇರಿ 45 ಜನರು ಇದ್ದರು. ದೋಣಿ ರಾಸ್‌ ದ್ವೀಪದಿಂದ ಉತ್ತರ ಕೊಲ್ಲಿಯತ್ತ ಸಾಗುತ್ತಿದ್ದ ವೇಳೆ ದುರಂತಕ್ಕೀಡಾಗಿದೆ. ದಕ್ಷಿಣ ಅಂಡಮಾನ್‌ ಆಡಳಿತವು 21 ಮಂದಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿದೆ. ಅಂಡಮಾನ್‌ ಆಡಳಿತಾಧಿಕಾರಿಗಳೊಂದಿಗೆ ಕಡಲು ರಕ್ಷಣಾ ಪಡೆ ಸಂಪರ್ಕದಲ್ಲಿದ್ದು, ಬದುಕುಳಿದಿರಬಹುದಾದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.

ಉಪ ರಾಜ್ಯಪಾಲ ಎಕೆ ಸಿಂಗ್ ಅವರು ದುರಂತದಲ್ಲಿ ಮೃತಪಟ್ಟವರಿಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದು, ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂದೆ ಅವರೊಂದಿಗೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯ ಕುರಿತು ವಿವರಣೆ ನೀಡಿದ್ದಾರೆ.

English summary
Tata Motors MD Britain Karl Slym dies in fall from hotel in Bangkok. Karl Slym, managing director of Tata Motors Ltd (TAMO.NS), died on Sunday Jan 26 after falling from a high floor of a hotel in Bangkok, the company said. Slym, 51, had attended a board meeting of Tata's Thailand unit in the Thai capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X