ಪಾಕಿಸ್ತಾನದ ಹೆಣ ಬೀಳಿಸಿದ ತಾಲಿಬಾನ್ ಭಾರತದ ಜೊತೆಗೆ ಜೋಡಿಯಾಗಿದ್ದು ಏಕೆ?
ಪಾಕಿಸ್ತಾನ ಎಂಬ ದೇಶವನ್ನು ಇಡೀ ಜಗತ್ತಿನಲ್ಲಿ ಯಾರು ಕೂಡ ನಂಬಲು ಸಿದ್ಧವಿಲ್ಲ, ಸ್ವತಃ ಚೀನಾ ಕೂಡ ಈ ವಿಚಾರದಲ್ಲಿ ಪಾಕಿಸ್ತಾನ ಎಂಬ ನರಿ ಬುದ್ಧಿ ದೇಶವನ್ನು ನಂಬಲಾರದು. ತಿಂದ ಮನೆಗೇ ಬೆಂಕಿ ಇಡುವ ಬುದ್ಧಿ ಪಾಕಿಸ್ತಾನದ ರಾಜಕಾರಣಿಗಳದ್ದು. ಹೀಗಿದ್ದಾಗ ಪಾಕಿಸ್ತಾನ ತನ್ನ ನೆರೆ ದೇಶಗಳ ಜೊತೆಗೆ ಸುಖಾಸುಮ್ಮನೆ ಕಿರಿಕ್ ಮಾಡಿ ಫೈಟ್ ಮಾಡುವುದು ಮಾಮೂಲಿ ಆಗಿದೆ. ಅದರಲ್ಲೂ ಇದೇ ರೀತಿ ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನ ನೆಲದ ಮೇಲೂ ದಾಳಿ ಮಾಡಿ ಕಿರಿಕ್ ಮಾಡಿತ್ತು ಪಾಪಿ ಪಾಕ್. ಇದಕ್ಕೆ ತಕ್ಕ ಉತ್ತರ ನೀಡಿದ್ದ ಅಫ್ಘಾನಿಸ್ತಾನ ಆಡಳಿತ ನೋಡಿಕೊಳ್ಳುತ್ತಿರುವ ತಾಲಿಬಾನ್ ಈಗ ಮತ್ತೆ ವಾರ್ನಿಂಗ್ ಕೊಟ್ಟಿದೆ.
ಭಾರತದ ಕಿರೀಟ ಜಮ್ಮು & ಕಾಶ್ಮೀರ ಮೇಲೆ ದಾಳಿ ಮಾಡಿದ ನಂತರ ಅಫ್ಘಾನಿಸ್ತಾನದ ಗಡಿಯ ಮೇಲೂ ಕಣ್ಣಿಟ್ಟು ಕೂತಿದೆ ಪಾಪಿ ಪಾಕ್ ಸೇನೆ. ಇದು ಜಾಗತಿಕವಾಗಿ ಮತ್ತೊಂದು ಯುದ್ಧದ ಕಿಚ್ಚು ಹೊತ್ತಿಸಿದೆ. ವಿವಾದಿತ ಪ್ರದೇಶವಾದ ಡ್ಯುರಾಂಡ್ ರೇಖೆಯ ಉದ್ದಕ್ಕೂ ದಿಢೀರ್ ಪಾಕಿಸ್ತಾನ ಸೇನೆಯ ವಿರುದ್ಧ ಭೀಕರ ದಾಳಿ ನಡೆಸಿದ್ದ ತಾಲಿಬಾನ್, ಪಾಕಿಸ್ತಾನ ಸೇನೆಯ ಹುಟ್ಟಡಗಿಸಿದೆ. ಅಲ್ಲದೆ ಸುಮಾರು 58 ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದೆ ತಾಲಿಬಾನ್ ಪಡೆಗಳು.

ಭಾರತದ ಜೊತೆಗೆ ಅಫ್ಘಾನ್ ಸಂಬಂಧ
ಈ ದಾಳಿ ಬಗ್ಗೆ ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಾಹಿತಿ ನೀಡುತ್ತಾ, ಮತ್ತಷ್ಟು ಕಠಿಣ ಕ್ರಮದ ಎಚ್ಚರಿಕೆ ಕೊಟ್ಟಿದ್ದರು. ಇನ್ನು ಭಾರತದ ಜೊತೆ ಅಫ್ಘಾನಿಸ್ತಾನ ಸಂಬಂಧ ಗಟ್ಟಿ ಆಗ್ತಿರುವ ಸಮಯದಲ್ಲೇ ಈ ರೀತಿ ಕಿರಿಕ್ ಆಗಿತ್ತು. ಇಷ್ಟೆಲ್ಲ ನಡೆದರೂ ತನ್ನ ಬುದ್ಧಿ ಸರಿ ಮಾಡಿಕೊಳ್ಳದ ಪಾಕಿಸ್ತಾನ ಈಗ ಮತ್ತೆ ಕಿರಿಕಿರಿ ಶುರು ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ತಾಲಿಬಾನ್ ಮತ್ತೊಂದು ಸುತ್ತಿನ ಭೀಕರ ದಾಳಿಗೆ ಸಜ್ಜಾಗುವ ಸಾಧ್ಯತೆ ದಟ್ಟವಾಗಿದೆ.
ಪಾಕಿಸ್ತಾನ & ಅಫ್ಘಾನ್ ನಡುವೆ ಯುದ್ಧ?
ಅಫ್ಘಾನ್ ನಡೆಸಿದ ದಾಳಿಯಲ್ಲಿ 20 ಪಾಕ್ ಭದ್ರತಾ ಶಿಬಿರ ನಾಶ ಮಾಡಲಾಗಿದ್ದು, ಅಫ್ಘಾನ್ ಕೂಡ 9 ಸೈನಿಕರನ್ನ ಕಳೆದುಕೊಂಡಿದೆ. ಕತಾರ್ ಮತ್ತು ಸೌದಿಯ ಮನವಿ ಬೆನ್ನಲ್ಲೇ ಕಾರ್ಯಾಚರಣೆ ನಿಲ್ಲಿಸಿದ್ದೇವೆ ಎಂದು ಅಫ್ಘಾನಿಸ್ತಾನ ತಿಳಿಸಿತ್ತು. ಆದರೆ ಈಗ ಮತ್ತೆ ಕುತಂತ್ರ ಮಾಡುತ್ತಿರುವ ಪಾಕಿಸ್ತಾನಕ್ಕೆ, ಇನ್ನೊಂದು ಸುತ್ತಿನ ವಾರ್ನಿಂಗ್ ರವಾನಿಸಿದೆ ತಾಲಿಬಾನ್ ಆಡಳಿತ. ಅಲ್ಲದೆ ನಾವು ಎಲ್ಲಾ ಗಮನಿಸುತ್ತಿದ್ದು ಇದೇ ವಿಚಾರಕ್ಕೆ ಇನ್ನೊಂದು ಸುತ್ತಿನ ಕಾರ್ಯಾಚರಣೆಗೂ ಸಿದ್ಧ ಎಂಬ ಧಾಟಿಯಲ್ಲಿ ಮಾತನಾಡಲಾಗಿದೆ.












Click it and Unblock the Notifications