Syrian Civil War: 50 ವರ್ಷಗಳ ಕುಟುಂಬ ಆಡಳಿತ ಅಂತ್ಯ, ರಷ್ಯಾಗೆ ಓಡಿ ಹೋದ ಸಿರಿಯಾ ಅಧ್ಯಕ್ಷ?
ಸಿರಿಯಾ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿ ಇದೆ, ಸಿರಿಯಾ ನೆಲದಲ್ಲಿ ಬೆಂಕಿಯೇ ಹೊತ್ತಿಕೊಂಡಿದೆ. ಸಿರಿಯಾ ಸರ್ಕಾರದ ವಿರುದ್ಧ ಘೋರ ದಾಳಿ ನಡೆಸುತ್ತಿದ್ದ ವಿರೋಧಿಗಳು ಇದೀಗ ನೇರವಾಗಿ ಸಿರಿಯಾ ರಾಜಧಾನಿಗೇ ನುಗ್ಗಿದ್ದಾರೆ. ಈ ಮೂಲಕ ಸಿರಿಯಾ ಮತ್ತೊಮ್ಮೆ ನಲುಗಿ ಹೋಗಿದೆ. ಬರೋಬ್ಬರಿ 50 ವರ್ಷಗಳ ಕುಟುಂಬ ಆಡಳಿತ ಅಂತ್ಯವಾಗಿದ್ದು, ಸಿರಿಯಾ ಅಧ್ಯಕ್ಷರಾದ ಬಶರ್ ಅಲ್ ಅಸ್ಸಾದ್ ಎಸ್ಕೇಪ್ ಆಗಿದ್ದಾರಾ? ಈ ಜಗಳದಲ್ಲಿ ಗೆದ್ದಿದ್ದು ಯಾರು, ಅಮೆರಿಕ ಅಥವಾ ರಷ್ಯಾ? ಬನ್ನಿ ತಿಳಿಯೋಣ.
ಮಧ್ಯಪ್ರಾಚ್ಯ ಭಾಗದ ದೊಡ್ಡ ತಿಕ್ಕಾಟದಲ್ಲಿ ಸಿರಿಯಾ ನಾಗರಿಕ ಯುದ್ಧವು ಕೂಡ ಒಂದಾಗಿತ್ತು. ಸಿರಿಯಾ ಸರ್ಕಾರದ ವಿರುದ್ಧ ಹಲವು ವರ್ಷಗಳ ಹಿಂದೆಯೇ ಶುರುವಾದ ಬಡಿದಾಟ, ಒಂದಷ್ಟು ತಣ್ಣಗೆ ಆಗಿತ್ತು. ಇದರ ಜೊತೆ ಬಂಡುಕೋರರು ಕೂಡ ಸೈಲೆಂಟ್ ಆಗಿದ್ದರು. ಆದ್ರೆ ಈ ಪರಿಸ್ಥಿತಿ ಈಗ ಮತ್ತೆ ಬದಲಾಗಿದ್ದು, ಸಿರಿಯಾದಲ್ಲಿ ಬಂಡುಕೋರರು ನೇರ ದಾಳಿ ಆರಂಭ ಮಾಡಿದ್ದಾರೆ.

ಮಧ್ಯಪ್ರಾಚ್ಯ ಭಾಗದಲ್ಲಿ ತೀವ್ರ ಹಿಂಸಾಚಾರ
ಸಿರಿಯಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಅಟ್ಯಾಕ್ ಮಾಡುತ್ತಿರುವ ಬಂಡುಕೋರರು, ಇದೀಗ ಪ್ರಮುಖ ನಗರಗಳನ್ನೇ ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. ಪ್ರಮುಖವಾಗಿ ಸಿರಿಯಾ ರಾಜಧಾನಿಗೆ ನುಗ್ಗಿರುವ ಬಂಡುಕೋರರು, ಅಧ್ಯಕ್ಷರೇ ಎಸ್ಕೇಪ್ ಆಗುವಂತೆ ಮಾಡಿದ್ದಾರೆ. ತಮ್ಮ ಜೀವನ & ಜೀವ ಉಳಿಸಿಕೊಳ್ಳಲು, ಸಿರಿಯಾ ಅಧ್ಯಕ್ಷರಾದ ಬಶರ್ ಅಲ್ ಅಸ್ಸಾದ್ ಎಸ್ಕೇಪ್ ಆಗಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ, ಆದರೆ ಹಿಂಸಾಚಾರವು ಭುಗಿಲೆದ್ದಿದೆ.
50 ವರ್ಷಗಳಿಂದ ಸಿರಿಯಾದಲ್ಲಿ ಆಡಳಿತ
ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕುಟುಂಬ ಸುಮಾರು 50 ವರ್ಷಗಳಿಂದ ಸಿರಿಯಾದಲ್ಲಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಹೀಗಿದ್ದಾಗ ಬಶರ್ ಅಲ್ ಅಸ್ಸಾದ್ ಕುಟುಂಬದ ಆಡಳಿತ ವಿರೋಧಿಸಿ, ಸಿರಿಯಾ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ತಿಕ್ಕಾಟವು ಕೂಡ ಆರಂಭ ಆಗಿತ್ತು. ಸಿರಿಯಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಅಟ್ಯಾಕ್ ಮಾಡುತ್ತಿರುವ ಬಂಡುಕೋರರು, ಇದೀಗ ಪ್ರಮುಖ ನಗರಗಳನ್ನೇ ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ. 2011 ರಲ್ಲಿ ಶುರುವಾಗಿದ್ದ ಈ ತಿಕ್ಕಾಟ ಇದೀಗ ಕೊನೆಯಾಗುವ ಹಂತ ತಲುಪಿದೆ. ಈವರೆಗೂ ಸುಮಾರು 6,00,000ಕ್ಕೂ ಹೆಚ್ಚು ಜನರು ಈ ನಾಗರಿಕ ಯುದ್ಧಕ್ಕೆ ಬಲಿಯಾಗಿದ್ದಾರೆ ಎಂಬ ಆರೋಪ ಇದೆ.
ಬಶರ್ ಅಲ್ ಅಸ್ಸಾದ್ ಎಸ್ಕೇಪ್?
ಸಿರಿಯಾ ಜನರು ನೆಮ್ಮದಿಯಾಗಿ ನಿದ್ದೆ ಮಾಡಿ ಸುಮಾರು 14 ವರ್ಷಗಳೇ ಕಳೆದು ಹೋಗಿವೆ. ಹೀಗೆ ಸಿರಿಯಾ ಆಂತರಿಕ ತಿಕ್ಕಾಟವು ಇದೀಗ ಒಂದು ಅಂತಿಮ ಹಂತಕ್ಕೆ ಬಂದು ನಿಲ್ಲುತ್ತಿದೆ. ಪ್ರಮುಖವಾಗಿ ಸಿರಿಯಾ ರಾಜಧಾನಿಗೆ ನುಗ್ಗಿದ ಬಂಡುಕೋರರು ಅಧ್ಯಕ್ಷರೇ ಎಸ್ಕೇಪ್ ಆಗುವಂತೆ ಮಾಡಿದ್ದಾರೆ. ಜೀವ ಉಳಿಸಿಕೊಳ್ಳಲು ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಎಸ್ಕೇಪ್ ಆದ್ರಾ? ಎಂಬ ಪ್ರಶ್ನೆ ಮೂಡಿದೆ. ಆದ್ರೆ ಈ ಕುರಿತು ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ, ಆದರೆ ಹಿಂಸಾಚಾರವು ಭುಗಿಲೆದ್ದಿದೆ.












Click it and Unblock the Notifications