ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಯಾಣಿಕರಿಗೆ ಸಿಹಿ ಸುದ್ದಿ: ನ್ಯೂಜಿಲೆಂಡ್‌ಗೆ ಹಾರುವ ಅವಕಾಶ

|
Google Oneindia Kannada News

ವೆಲ್ಲಿಂಗ್ಟನ್, ನವೆಂಬರ್ 18: ಭಾರತದ ಪ್ರಯಾಣಿಕರಿಗೆ ನ್ಯೂಜಿಲೆಂಡ್‌ನಲ್ಲಿರುವ ಭಾರತದ ಹೈಕಮಿಷನರ್ ಮುಕ್ತೇಶ್ ಪರ್ದೇಶಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ನ್ಯೂಜಿಲೆಂಡ್ ಅಂತಿಮವಾಗಿ ಭಾರತ ನಿರ್ಮಿತ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಅನ್ನು ಅನುಮೋದಿಸಿದೆ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆ ಹಾಕಿಸಿಕೊಂಡವರು ಭಾರತದಿಂದ ನ್ಯೂಜಿಲೆಂಡ್‌ಗೆ ಪ್ರಯಾಣ ಮಾಡಬಹುದಾಗಿದೆ ಎಂದು ನ್ಯೂಜಿಲೆಂಡ್‌ನಲ್ಲಿರುವ ಭಾರತದ ಹೈಕಮಿಷನರ್ ಮುಕ್ತೇಶ್ ಪರ್ದೇಶಿ ಘೋಷಣೆ ಮಾಡಿದ್ದಾರೆ.

ಕೊರೊನಾ ಆರಂಭ ಕಾಲದಿಂದಲೂ ವಿದೇಶಿ ಪ್ರಯಾಣವನ್ನು ರದ್ದು ಮಾಡಲಾಗಿತ್ತು. ಆದರೀಗ ಅನೇಕ ದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ವಿಮಾನಗಳ ಹಾರಾಟವೂ ಸಹಜ ಸ್ಥಿತಿಗೊಳ್ಳುತ್ತಿದೆ. ಅನ್ಯದೇಶಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದ್ದ ಈ ನಿಯಮವನ್ನು ಸಡಿಲಗೊಳಿಸಲಾಗಿದೆ. ಲಸಿಕೆ ಪಡೆದ ಪ್ರಯಾಣಿಕರಿಗೆ ವಿದೇಶಗಳಿಗೆ ಪ್ರಯಾಣ ಬೆಳೆಸಲು ಅವಕಾಶ ನೀಡಲಾಗುತ್ತಿದೆ.

ಅವರು ತಮ್ಮ ಟ್ವಿಟ್ಟರ್‌ನಲ್ಲಿ "ನ್ಯೂಜಿಲೆಂಡ್ ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಯಲ್ಲಿ #covishield ಮತ್ತು #covaxin ಅನ್ನು ಸೇರಿಸಿಕೊಂಡಿದೆ. ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಲಸಿಕೆ ಹಾಕಿದ ಪ್ರವಾಸಿಗರಿಗೆ ಭಾರತವು ಈಗಾಗಲೇ ಮುಕ್ತವಾಗಿದೆ" ಎಂದು ಬರೆದಿದ್ದಾರೆ. ನ್ಯೂಜಿಲೆಂಡ್‌ನ ನೆರೆಯ ರಾಷ್ಟ್ರವಾದ ಆಸ್ಟ್ರೇಲಿಯಾವು ಕಳೆದ ತಿಂಗಳು ಎರಡು ಭಾರತೀಯ ಲಸಿಕೆಗಳನ್ನು ಹಾಕಿಸಿಕೊಂಡ ಪ್ರಯಾಣಿಕರಿಗೆ ಆಗಮಿಸಲು ಅನುಮತಿ ನೀಡಿದ ಕೂಡಲೇ ಈ ನಿರ್ಧಾರ ನ್ಯೂಜಿಲೆಂಡ್ ತೆಗೆದುಕೊಂಡಿದೆ.

ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಈಗ ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನಿಂದ ಹಾಕಿಸಿಕೊಂಡು ಭಾರತದಿಂದ ಬರುವ ಪ್ರಯಾಣಿಕರು ನ್ಯೂಜಿಲೆಂಡ್‌ನಲ್ಲಿ ಇಳಿದ ನಂತರ ಕ್ವಾರಂಟೈನ್ ಮಾಡಬೇಕಾಗಿಲ್ಲ. ಇಲ್ಲಿಯವರೆಗೆ ದ್ವೀಪ ರಾಷ್ಟ್ರವು ಎಂಟು ಲಸಿಕೆಗಳನ್ನು ಅನುಮೋದಿಸಿದೆ. ಅಲ್ಲದೆ, ಎರಡೂ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಗುರುತಿಸಿದೆ. ಭಾರತವು 99 ದೇಶಗಳಿಂದ ಸಂಪೂರ್ಣವಾಗಿ ಲಸಿಕೆ ಹಾಕಿದ ವಿದೇಶಿ ಪ್ರವಾಸಿಗರಿಗೆ ತನ್ನ ಗಡಿಯನ್ನು ತೆರೆದಿದೆ.

ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿರುವುದರಿಂದ, ಮಾರ್ಚ್ 2020 ರಿಂದ ಮೊದಲ ಬಾರಿಗೆ ಯುಎಸ್, ಯುಕೆ, ಯುಎಇ, ಕತಾರ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ 99 ದೇಶಗಳ ಸಂಪೂರ್ಣ ಲಸಿಕೆ ಪಡೆದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಭಾರತ ಪ್ರವೇಶವನ್ನು ಅನುಮತಿಸಿದೆ.

ಒಟ್ಟಾರೆಯಾಗಿ ಭಾರತವು 96 ದೇಶಗಳೊಂದಿಗೆ ಪರಸ್ಪರ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇತ್ತೀಚೆಗೆ ಘೋಷಿಸಿದ್ದಾರೆ.

Sweet news for Indian travelers: chance to fly to New Zealand

ಈ ನಿಯಮವು ನವೆಂಬರ್ 15 ರಂದು ಜಾರಿಗೆ ಬಂದಿದ್ದು ಪರಸ್ಪರ ಒಪ್ಪಿಕೊಂಡ ರಾಷ್ಟ್ರಗಳ ಪ್ರಯಾಣಿಕರು ಲಸಿಕೆ ಹಾಕಿಸಿಕೊಂಡ ಬಳಿಕ COVID-19 ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಈ ದೇಶಗಳ ಪ್ರಯಾಣಿಕರಿಗೆ ಕಡ್ಡಾಯ ಸಂಪರ್ಕತಡೆಯಿಂದ ವಿನಾಯಿತಿ ನೀಡಲಾಗಿದ್ದರೂ, ಅವರು ಇನ್ನೂ ಕೆಲವು COVID-19 ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ.

ನ್ಯೂಜಿಲೆಂಡ್ ಇಲ್ಲಿಯವರೆಗೆ 9285 ಕೊರೊನವೈರಸ್ ಪ್ರಕರಣಗಳನ್ನು ಮತ್ತು 35 ಸಾವುಗಳನ್ನು ವರದಿ ಮಾಡಿದೆ. ಏಕಾಏಕಿ ವಿಶ್ವಾದ್ಯಂತ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿದ ತಕ್ಷಣ, ದ್ವೀಪ ರಾಷ್ಟ್ರವು ತನ್ನ ಎಲ್ಲಾ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚಿತು. ಕಟ್ಟುನಿಟ್ಟಾದ ದೇಶಾದ್ಯಂತ ಲಾಕ್‌ಡೌನ್‌ಗೆ ಜಾರಿಗೆ ತಂದಿತ್ತು. ಸದ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಬೆನ್ನಲ್ಲೆ ಲಸಿಕೆ ಹಾಕಿಸಿಕೊಂಡ ಭಾರತದ ಪ್ರಯಾಣಿಕರಿಗೆ ಆಗಮಿಸಲು ಅನುಮತಿ ನೀಡಿದೆ.

Recommended Video

600 ವರ್ಷಗಳ ನಂತರ ನಾಳೆ ಸಂಭವಿಸಲಿದೆ ಸುದೀರ್ಘ ಚಂದ್ರಗ್ರಹಣ | Oneindia Kannada

ಕೋವಾಕ್ಸಿನ್ ಅನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಇದು ಭಾರತದಲ್ಲಿ ತಯಾರಿಸಿದ ಮೊದಲ ಕೋವಿಡ್ ವಿರೋಧಿ ಲಸಿಕೆ ಆಗಿದೆ. ಕೋವಿಶೀಲ್ಡ್ ಬ್ರಿಟನ್‌ನ ಅಸ್ಟ್ರಾಜೆನೆಕಾ ಲಸಿಕೆಯ ಭಾರತೀಯ ರೂಪಾಂತರವಾಗಿದೆ ಮತ್ತು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ನಿಂದ ಸ್ಥಳೀಯವಾಗಿ ತಯಾರಿಸಲ್ಪಟ್ಟಿದೆ.

English summary
India's High Commissioner in New Zealand Muktesh Pardeshi has conveyed the sweet news to Indian travelers. New Zealand has finally approved India-made vaccines, Covishield and Covaxin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X