Nepal Protest: ನೇಪಾಳ ಹಂಗಾಮಿ ಪ್ರಧಾನಿಯಾಗಿ ಸುಶೀಲ ಕರ್ಕಿ ಆಯ್ಕೆ, ಕೆಲವೇ ಕ್ಷಣಗಳಲ್ಲಿ ಅಧಿಕಾರ ಸ್ವೀಕಾರ ನಿರೀಕ್ಷೆ!

ನೇಪಾಳ ದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಡೆದ ಹಿಂಸಾಚಾರ & ಪ್ರತಿಭಟನೆಯ ಹೊರತಾಗಿ ಇದೀಗ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಭ್ರಷ್ಟಾಚಾರ & ಬಡತನದ ಬೇಗೆಯಲ್ಲಿ ಬೆಂದಿದ್ದ ನೇಪಾಳದ ಯುವ ಜನತೆಯು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ, ಪ್ರಧಾನಿ ಮತ್ತು ರಾಷ್ಟ್ರಪತಿ ಪಟ್ಟವನ್ನೇ ಬದಲಾಯಿಸಿದ್ದಾರೆ. ಆದರೆ ಇದೀಗ ಖಾಲಿ ಉಳಿದಿರುವ ಈ ಹುದ್ದೆಗೆ ಮಹತ್ವದ ವ್ಯಕ್ತಿಯನ್ನ ಆಯ್ಕೆ ಮಾಡಲಾಗಿದೆ. ಹಾಗಾದರೆ ಯಾರು ನೇಪಾಳ ದೇಶದ ಹಂಗಾಮಿ ಪ್ರಧಾನಿ? ಬನ್ನಿ ತಿಳಿಯೋಣ.

ನೇಪಾಳ ದೇಶ ಭಾರತದ ಪಕ್ಕದ ರಾಷ್ಟ್ರವಾಗಿದ್ದು, ಈ ದೇಶದಲ್ಲಿ ಶಾಂತಿ ನೆಲೆಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಯಾಕಂದ್ರೆ ನೇಪಾಳ ನೆಲದಲ್ಲಿ ಏನಾದರೂ ಅಶಾಂತಿ ಹೆಚ್ಚಾದರೆ ಅದು ಮುಂದೆ ನಮ್ಮ ದೇಶ ಭಾರತಕ್ಕೂ ಅಪಾಯ ತಂದೊಡ್ಡುತ್ತದೆ. ಹೀಗಿದ್ದಾಗ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನೇಪಾಳ ದೇಶದಲ್ಲಿ ಭಾರಿ ದೊಡ್ಡ ಹೋರಾಟ ನಡೆಯುತ್ತಿತ್ತು. ಹೀಗೆ ಶುರುವಾಗಿದ್ದ ಹೋರಾಟದಲ್ಲಿ ರಕ್ತಪಾತವೇ ನಡೆದು ಹೋಗಿತ್ತು. ಇದೀಗ ಎಲ್ಲವೂ ತಣ್ಣಗಾಗಿದ್ದು, ನೇಪಾಳ ಶಾಂತವಾಗಿದೆ. ಹೀಗಾಗಿ ಇದೀಗ ನೇಪಾಳ ನೆಲದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದು ಗ್ಯಾರಂಟಿ ಕೂಡ ಆಗಿದೆ. ಹಂಗಾಮಿ ಪ್ರಧಾನಿಯಾಗಿ ಮಹಿಳೆ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.

Sushila Karki to be Nepal s First Female Interim PM

ಭಾರತದ ನೆರೆಯ ದೇಶಕ್ಕೆ ಮಹಿಳಾ ಪ್ರಧಾನಿ

ನೇಪಾಳದಲ್ಲಿ ಶುರುವಾಗಿದ್ದ ಹೋರಾಟದ ಬೆಂಕಿ ಇಡೀ ದೇಶವನ್ನೇ ಸುಟ್ಟು ಹಾಕಿತ್ತು. ದಿಢೀರ್ ನೇಪಾಳ ಸರ್ಕಾರ ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್‌ ಸೇರಿ 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಆಪ್ಸ್ ಬ್ಯಾನ್ ಮಾಡಿತ್ತು. ಈ ಸುದ್ದಿ ತಿಳಿದ ಲಕ್ಷಾಂತರ ನೇಪಾಳ ಯುವತಿ & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ಇದು ಸೋಷಿಯಲ್ ಮೀಡಿಯಾಗಳ ಪರವಾಗಿ ಅಲ್ಲ ಭ್ರಷ್ಟಾಚಾರ ವಿರುದ್ಧದ ಹೋರಾಟ ಅಂತಾ ಖುದ್ದಾಗಿ ನೇಪಾಳ ಯುವ ಸಮುದಾಯ ಹೇಳಿತ್ತು. ಮತ್ತೊಂದು ಕಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಬೆಂಕಿ ಹೊತ್ತಿಕೊಂಡಿತ್ತು.

ನೂರಾರು ಜನರಿಗೆ ಗಂಭೀರ ಗಾಯ

ಹೀಗಿದ್ದಾಗ ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ನೇಪಾಳ ಜನ ಮೃತಪಟ್ಟು, 400ಕ್ಕೂ ಹೆಚ್ಚು ಜನರಿಗೆ ಈ ಗಲಾಟೆಯ ವೇಳೆ ಗಂಭೀರವಾಗಿ ಗಾಯಗಳಾಗಿವೆ ಎಂದು ಆರೋಪ ಮಾಡಲಾಗಿತ್ತು. ಇಷ್ಟೆಲ್ಲದರ ನಡುವೆ ಸುಶೀಲ ಕರ್ಕಿ ಅವರನ್ನ ನೇಪಾಳ ದೇಶದ ಹಂಗಾಮಿ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ. ಹಾಗೇ ಈ ಪ್ರತಿಭಟನೆ ನಿಂತು ಶಾಂತವಾಗಿರುವ ಸಮಯದಲ್ಲಿ ನೇಪಾಳ ಸೇನೆ ದೇಶದ ಅಧಿಕಾರವನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡು, ಈಗ ಭಾರಿ ದೊಡ್ಡ ನಿರ್ಧಾರ ಜಾರಿ ಮಾಡಲು ಮುಂದಾಗಿದೆ. ಸುಶೀಲ ಕರ್ಕಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದ್ದು, ನೇಪಾಳದ ಮೊದಲ ಮಹಿಳಾ ಪ್ರಧಾನಿ ಸುಶೀಲ ಕರ್ಕಿ ಅವರೇ ಆಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+